Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆದು ವಿಶ್ರಾಂತ ಜೀವನ ನಡೆಸುತ್ತಿದ್ದ ಬಂಗ್ರಮಂಜೇಶ್ವರ ಕಟ್ಟೆಬಜಾರ್ ನಿವಾಸಿ, ಟಿವಿ ರಿಪೇರಿ ವೃತ್ತಿಗಾರ ರವಿಚಂದ್ರ ಹೆಗ್ಡೆ (58) ನಿಧನ.

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆದು ವಿಶ್ರಾಂತ ಜೀವನ ನಡೆಸುತ್ತಿದ್ದ ಬಂಗ್ರಮಂಜೇಶ್ವರ ಕಟ್ಟೆಬಜಾರ್ ನಿವಾಸಿ, ಟಿವಿ ರಿಪೇರಿ ವೃತ್ತಿಗಾರ ರವಿಚಂದ್ರ ಹೆಗ್ಡೆ (58) ನಿಧನ.
ಮಂಜೇಶ್ವರ: ಬಂಗ್ರ ಮಂಜೇಶ್ವರ ಕಟ್ಟೆಬಜಾರ್ ನಿವಾಸಿ, ಟಿವಿ ರಿಪೇರಿ ಕಾಯಕದಲ್ಲಿ ತೊಡಗಿದ್ದ ರವಿಚಂದ್ರ ಹೆಗ್ಡೆ (58) ನಿನ್ನೆ ರಾತ್ರಿ 7.45 ರ ವೇಳೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ದಿ. ದೇವರಾಯ ಹೆಗ್ಡೆಯವರ ಪುತ್ರನಾಗಿದ್ದು, ಪತ್ನಿ: ಮಂಜುಳಾ ಹೆಗ್ಡೆ (ಚರುಮುರಿ ವ್ಯಾಪಾರಿ ಹೊಸಂಗಡಿ ಸುಪ್ರೀಂ ಬಳಿ), ಪುತ್ರಿ: ದೀಕ್ಷಾ, ಹಾಗೂ ಸಹೋದರ: ವಿನಾಯಕ ಹೆಗ್ಡೆ (ವಿನಾಯಕ ಸಿಡಿ ಸೆಂಟರ್ ಹೊಸಂಗಡಿ) ಸೇರಿದಂತೆ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರು ಕಳೆದ ಎರಡು ವರ್ಷಗಳ ಹಿಂದೆ (2022 ಫೆಬ್ರವರಿ 23) ತನ್ನ ಮೊದಲ ಪುತ್ರಿ ದೀಪಿಕಾಳ ಬರ್ತ್ ಡೇ ದಿನದಂದು ಮಗಳ ಶಾಲಾ ಸಹಪಾಠಿಗಳಿಗೆ ನೀಡಲಿಕ್ಕಾಗಿ ಚಾಕಲೇಟ್ ಖರಿದಿಸಲೆಂದು ಮಂಜೇಶ್ವರದ ಒಳ ಪೇಟೆಗೆ ಸ್ಕೂಟರ್ ನಲ್ಲಿ ಮಗಳ ಜೊತೆ ತೆರಳುತ್ತಿದ್ದಾಗ ಮಂಜೇಶ್ವರ ಬೀಚ್ ರಸ್ತೆ ತಲುಪುತ್ತಿದ್ದಂತೆ ಎಂದುರಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದು ಅಪಘಾತವುಂಟಾಯಿತು. ಈ ವೇಳೆ ಪುತ್ರಿ ದೀಪಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡು ಚರಂಡಿಗೆ ಬಿದ್ದ ರವಿಚಂದ್ರ ಹೆಗ್ಡೆಯವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ, ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ಅಪಘಾತದಿಂದ ತಲೆಗೆ ಹಾಗೂ ದೇಹದ ವಿವಿಧ ಅಂಗಗಳಿಗೆ ತೀವ್ರ ಹೊಡೆತವುಂಟಾಗಿದ್ದರಿಂದ ಕೋಮಾವಸ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಿಂಗಳುಗಳ ಬಳಿಕ ಚೇತರಿಸಿಕೊಂಡು ಬಳಿಕ ಮನೆಗೆ ಕರೆತರಲಾಯಿತು. ವಿಶ್ರಾಂತ ಜೀವನ ನಡೆಸುತ್ತಿದ್ದ ರವಿಚಂದ್ರ ಹೆಗ್ಡೆಯವರಿಗೆ ಕಳೆದ 2/3 ದಿನಗಳಿಂದ ಅಸೌಖ್ಯ ಉಲ್ಬಣಿಸಿದ ಕಾರಣ ಮನೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ನಿನ್ನೆ ರಾತ್ರಿ ನಿಧನರಾದರು. ಇದೀಗ ಮೃತದೇಹವನ್ನು ತೊಕ್ಕೊಟ್ಟು ಬಳಿಯ ಕೊಲ್ಯದಲ್ಲಿ ಹವಾನಿಯಂತ್ರಿತ ಶವಾಶನದಲ್ಲಿ ಇರಿಸಲಾಗಿದ್ದು, ಇಂದು ಬೆಳಗ್ಗೆ 8 ಗಂಟೆಗೆ ಮನೆಗೆ ತರಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ. ಬಳಿಕ ಮಂಜೇಶ್ವರ ಗುಡ್ಡೆಕ್ಕೇರಿಯಲ್ಲಿರುವ ಜಿ.ಎಸ್.ಬಿ ಸಮುದಾಯದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.