ಮಂಜೇಶ್ವರದ ವಿವಿಧೆಡೆ ಬಿಜೆಪಿ ವತಿಯಿಂದ ಯುವಮೋರ್ಚಾ ನೇತಾರ ಕೆ.ಟಿ ಜಯಕೃಷ್ಣನ್ ಮಾಸ್ಟರ್ ರ ಬಲಿದಾನ ದಿನ ಆಚರಣೆ. ಮಂಡೆಕಾಪಿನಲ್ಲಿ ಕ್ರಿಕೆಟ್ ಪಂದ್ಯಾಟ, ಮಂಜೇಶ್ವರದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ.
ಡಿಸೆಂಬರ್ 01, 2024
0
ಮಂಜೇಶ್ವರದ ವಿವಿಧೆಡೆ ಬಿಜೆಪಿ ವತಿಯಿಂದ ಯುವಮೋರ್ಚಾ ನೇತಾರ ಕೆ.ಟಿ ಜಯಕೃಷ್ಣನ್ ಮಾಸ್ಟರ್ ರ ಬಲಿದಾನ ದಿನ ಆಚರಣೆ.
ಮಂಡೆಕಾಪಿನಲ್ಲಿ ಕ್ರಿಕೆಟ್ ಪಂದ್ಯಾಟ, ಮಂಜೇಶ್ವರದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ.
ಮಂಜೇಶ್ವರ: ಬಲಿದಾನಿಗಳ ನೆನಪು ಸಂಘಟನೆಗೆ ಶಕ್ತಿ ತುಂಬುತ್ತದೆ. ತತ್ವ ಸಿದ್ದಂತಕ್ಕಾಗಿ ಬಲಿಯಾದವರ ನೆನಪು ಯುವ ಜನತೆ ನಿರಂತರ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ನುಡಿದರು. ಅವರು ಇಂದು ಬೆಳಗ್ಗೆ ಬಿಜೆಪಿ ಪೈವಳಿಕೆ ಗ್ರಾಮ ಪಂಚಾಯತ್ ಸಮಿತಿ ಹಾಗೂ ಕ್ರೀಡಾ ಭಾರತಿ ಪೈವಳಿಕೆ ವತಿಯಿಂದ ಮಂಡೆಕಾಪಿನಲ್ಲಿ ನಡೆದ ಕ್ರಿಕೆಟ್ ಪಂದ್ಯಟ ಕೂಟ ಹಾಗೂ ಕೆ.ಟಿ ಜಯಕೃಷ್ಣ ಮಾಸ್ಟರ್ ಮತ್ತು ದಿ ಸಂಕಯ್ಯ ಭಂಡಾರಿ ಸ್ಮೃತಿ ದಿನ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು. ಬಳಿಕ ನುಡಿದ ಅವರು ಕ್ರೀಡೆಯ ಮೂಲಕ ಸಂಘಟನೆ ಇಂದಿನ ದಿನಗಳಲ್ಲಿ ಅವಶ್ಯಕ ಎಂದು ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಸದಾಶಿವ ಚೇರಲ್, ಅಚ್ಚುತ್ತ ಚೇವಾರ್, ಸತ್ಯ ಶಂಕರ ಭಟ್, ಪ್ರವೀಣಚಂದ್ರ ಬಲ್ಲಾಳ್, ಹರೀಶ್ ಬೊಟ್ಟಾರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷೆ ಅಂಜು ಜೋಸ್ಟಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಿಜೆಪಿ ನೇತಾರ ಲೋಕೇಶ್ ನೋಂಡ ನೇತೃತ್ವ ನೀಡಿದರು. ಮಂಜೇಶ್ವರ ಉದ್ಯಾವರ ಗುಡ್ಡೆ ವಾರ್ಡ್ ನಲ್ಲಿ ಬಿಜೆಪಿ ಬೂತ್ ಸಮಿತಿ ವತಿಯಿಂದ ಇಂದು ಬೆಳಗ್ಗೆ ಯುವಮೋರ್ಚಾ ನೇತಾರ ಕೆ.ಟಿ ಜಯಕೃಷ್ಣ ಮಾಸ್ಟರ್ ಬಲಿದಾನ ದಿನವನ್ನು ಪುಷ್ಪರ್ಚನೆಯನ್ನು ನೆರವೇರಿಸುವ ಮೂಲಕ ಆಚರಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಕೆ.ಟಿ ಜಯಕೃಷ್ಣನ್ ಮಾಸ್ಟರ್ ರ ಬಗ್ಗೆ ನುಡಿನಮನಗೈದರು. ಮುಖಂಡರಾದ ಯಶ್ಪಾಲ್ ಉದ್ಯಾವರ, ಚಕ್ರೆಶ್ ಮಂಜೇಶ್ವರ, ಯಶ್ ರಾಜ್ ಉದ್ಯಾವರ ಮೊದಲಾದವರು ನೇತೃತ್ವ ನೀಡಿದರು.


