Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀಮತ್‌ ಅನಂತೇಶ್ವರ ಕ್ಷೇತ್ರದಲ್ಲಿ ನಾಳೆಯಿಂದ ಷಷ್ಠಿ ಮಹೋತ್ಸವ. ಬ್ರಹ್ಮರಥೋತ್ಸವ 7 ರಂದು.

ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀಮತ್‌ ಅನಂತೇಶ್ವರ ಕ್ಷೇತ್ರದಲ್ಲಿ ನಾಳೆಯಿಂದ ಷಷ್ಠಿ ಮಹೋತ್ಸವ. ಬ್ರಹ್ಮರಥೋತ್ಸವ 7 ರಂದು.
ಮಂಜೇಶ್ವರ: ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ - ಷಷ್ಠಿ ಮಹೋತ್ಸವ ನಾಳೆಯಿಂದ ಪ್ರಾರಂಭಗೊಂಡು ಈ ತಿಂಗಳ 8 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಉತ್ಸವದ ಪೂರ್ವ ತಯಾರಿಯಂತೆ ಬ್ರಹ್ಮ ರಥರೋಹಣದ ಕೆಲಸ ಕಾರ್ಯಗಳು ವೇಗದಲ್ಲಿ ನಡೆಯುತ್ತಿದೆ. ನಾಳೆ ಮಧ್ಯಾಹ್ನ 1.30 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 10.30 ರ ತನಕ ಪಲ್ಲಕಿ ಉತ್ಸವ, ವಸಂತ ಪೂಜೆ, ಮಂಗಳಾರತಿ, 3 ರಂದು ಬೆಳಿಗ್ಗೆ ಮೃತ್ತಿಕಾರೋಹಣ, 11 ಕ್ಕೆ ಶ್ರೀ ದೇವರು ಯಜ್ಞಕ್ಕೆ ಚಿತ್ತೈಸುವುದು, ಮಧ್ಯಾಹ್ನ 2 ಕ್ಕೆ ಧ್ವಜಾರೋಹಣ, ಸಂಜೆ 4 ಕ್ಕೆ ಯಜ್ಞಾರತಿ ಬಲಿ, 5 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 10.30 ರ ವರೆಗೆ ಬೊಂಬೆ ಚವರು ಉತ್ಸವ, ವಸಂತಪೂಜೆ, ಮಂಗಳಾರತಿ, 4 ರಂದು ಬೆಳಿಗ್ಗೆ 9 ಕ್ಕೆ ಹಗಲು ಉತ್ಸವ, ಮಧ್ಯಾಹ್ನ 12.30 ಕ್ಕೆ ಯಜ್ಞ, 3.30 ಕ್ಕೆ ಯಜ್ಞಾರತಿ ಬಲಿ, 4 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 12.30 ರ ತನಕ ಮರದ ಲಾಲ್ಕಿ ಚಂದ್ರ ಮಂಡಲ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, 5 ರಂದು ಬೆಳಿಗ್ಗೆ 9 ಕ್ಕೆ ಸ್ವರ್ಣ ಪಲ್ಲಂಕಿ ಹಗಲು ಉತ್ಸವ, ಮಧ್ಯಾಹ್ನ ಯಜ್ಞ, ಸಂಜೆ 4 ಕ್ಕೆ ಯಜ್ಞಾರತಿ ಬಲಿ, 4.30 ಕ್ಕೆ ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ 12.30 ರ ತನಕ ಗರುಡ ಮಂಟಪ, ಚಂದ್ರ ಮಂಡಲ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, 6 ರಂದು ಬೆಳಿಗ್ಗೆ 9.30 ಕ್ಕೆ ಸ್ವರ್ಣ ಲಾಲ್ಕಿ, ಹಗಲು ಉತ್ಸವ 3.30 ರವರೆಗೆ ಅಭಿಷೇಕ, ತುಲಾಭಾರ, ಸಂಜೆ 7.30 ಕ್ಕೆ ಯಜ್ಞಾರತಿ ಬಲಿ, ರಾತ್ರಿ 8 ಕ್ಕೆ ಮಹಾಪೂಜೆ, ಸಮಾರಾಧನೆ. 12.30 ರಿಂದ 5 ರ ತನಕ ಬೆಳ್ಳಿ ಲಾಲ್ಕಿಯಲ್ಲಿ ಮೃಗಬೇಟೆ, ಅಡ್ಡ ಪಲ್ಲಂಕಿ, ಸಣ್ಣ ರಥ ಉತ್ಸವಗಳು, ವಸಂತ ಪೂಜೆ, ಮಂಗಳಾರತಿ, 7 ರಂದು ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, 3.30 ಕ್ಕೆ ಪೂರ್ಣಾಹುತಿ, 4 ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ ಮತ್ತು ರಥರೋಹಣಕ್ಕೆ ಹೊರಡುವುದು, ಸಂಜೆ 5 ಕ್ಕೆ ರಥಾರೋಹಣ, ರಾತ್ರಿ 8.30 ಕ್ಕೆ ರಥಾವರೋಹಣ, ಸಮಾರಾಧನೆ, 8 ರಂದು ಮಧ್ಯಾಹ್ನ 1.30 ಕ್ಕೆ ಅವಭೃತ, 2.30 ರಿಂದ ಮರದ ಲಾಲ್ಕಿ ಸಣ್ಣ ರಥೋತ್ಸವಗಳು, ಸಂಜೆ 5 ಕ್ಕೆ ಶೇಷ ತೀರ್ಥಾಸ್ನಾನ, 6 ಕ್ಕೆ ಧ್ವಜ ಅವರೋಹಣ, ರಾತ್ರಿ 10 ಕ್ಕೆ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆ ನಡೆಯಲಿದೆ. ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.