ಮೀಯಪದವಿನಲ್ಲಿ "ಆಲ್ ಎಂಪ್ಲಾಯೀಸ್" ಕ್ರಿಕೆಟ್ ಟೂರ್ನಮೆಂಟ್ : ಮಾಸ್ಟರ್ ಸ್ಟ್ರೈಕರ್ಸ್ ಚಾಂಪಿಯನ್.
ಅಕ್ಟೋಬರ್ 01, 2024
0
ಆಲ್ ಎಂಪ್ಲಾಯೀಸ್ ಕ್ರಿಕೆಟ್ ಟೂರ್ನಮೆಂಟ್: ಮಾಸ್ಟರ್ ಸ್ಟ್ರೈಕರ್ಸ್ ಚಾಂಪಿಯನ್.
ಮೀಯಪದವು: ಕಾಸರಗೋಡು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸೇವೆ ಮಾಡುತ್ತಿರುವ ಉದ್ಯೋಗಾರ್ಥಿಗಳ ಕ್ರಿಕೆಟ್ ಟೂರ್ನಮೆಂಟ್ ಮಿಯಪದವು ಶಾಲಾ ಮೈದಾನದಲ್ಲಿ ಜರಗಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕೇರಳ ರಾಜ್ಯ ಕೈರಳಿ ವೆಲ್ಫೇರ್ ನ ರಾಜ್ಯ ಸಮಿತಿ ಸದಸ್ಯರಾದ ಸಿ.ಪಿ ರಹೀಸ್ ಸುಲ್ತಾನ್ ಭಾಗವಹಿಸಿ ಬಹುಮಾನ ವಿತರಣೆ ಮಾಡಿ ಮಾತನಾಡಿ, "ಕ್ರೀಡಾಕೂಟಗಳು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಪ್ರಸ್ತುತ ನಮ್ಮನಡುವೆ ಇರುವ ಮಾಧ್ಯಮವಾಗಿದೆ. ಯುವಕರನ್ನು ಒಂದುಗೂಡಿಸಿ ಸಕರಾತ್ಮಕ ಚಿಂತನೆಗಳಿಗೆ ಪ್ರೇರಣೆ ನೀಡುವುದರೊಂದಿಗೆ ಆದರ್ಶ ಸಮಾಜಕ್ಕೆ ಸಾಕ್ಷಿಯಾಗುತ್ತದೆ. ಸರಕಾರಿ ಉದ್ಯೋಗಿಗಳು ಸಾರ್ವಜನಿಕರ ಜೊತೆ ಸೇರಿ ಕಷ್ಟ ಸುಖಗಳ ವಿನಿಮಯ ಮಾಡುವವರು ಕ್ರಿಕೇಟ್ ಎಂಬ ಆಟ ಸಂತೋಷಕ್ಕಾಗಿ ಎಲ್ಲರನ್ನು ಒಟ್ಟಾಗಿಸಿದೆ. ಇಂತಹ ಶ್ರಮ ನಿಜಕ್ಕೂ ಅಭಿನಂದನೀಯ" ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಧೂರು ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಬೆದ್ರಡ್ಕರವರು ಮಾತನಾಡಿ,"ಕ್ರೀಡೆಗಳು ಮಾನಸಿಕವಾಗಿಯೂ ದೈಹಿಕವಾಗಿಯೂ ಮನಸ್ಸಿಗೆ ಉಲ್ಲಾಸವನ್ನು ತರುವಂತದಾಗಿದ್ದು ,ಈ ನಿಟ್ಟಿನಲ್ಲಿ ಉದ್ಯೋಗಸ್ಥರೆಲ್ಲರೂ ಸೇರಿಕೊಂಡು ಆಡುವ ಈ ರೀತಿಯ ಕ್ರೀಡಾ ಕೂಟಗಳು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ವೇದಿಕೆಯಾಗಿದೆ " ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೈರಳಿ ವೆಲ್ಫೇರ್ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಸಿಪಿ ರಹಿಸ್ ಸುಲ್ತಾನ್, ಅಧ್ಯಾಪಕರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಗವಹಿಸಿ ಚಿನ್ನದ ಪದಕ ಪಡೆದಿದ್ದ ಶ್ರೀಮತಿ ಚಿತ್ರಾವತಿ ಟೀಚರ್ ಚಿಗುರುಪಾದೆ (ಮುಖ್ಯೋಪಾಧ್ಯಾಯಿನಿ), ಪ್ರದೀಪ್ ಡಿಸೋಜ ಮೀಯಪದವು (ಅಧ್ಯಾಪಕರು), ಹಾಗೂ ಮುಖ್ಯೋಪಾಧ್ಯಾಯರಾಗಿ ಭಡ್ತಿ ಪಡೆದ ಕ್ರೀಡಾ ಸಂಘಟಕರು ಇಸ್ಮಾಯಿಲ್ ಮಾಸ್ತರ್ ಮೀಯಪದವು ರವರನ್ನು ಗೌರವಿಸಿ ಅಭಿನಂದಿಸಲಾಯಿತು. ಇ ಪಿ ಲ್ ಕ್ರೀಡಾಕೂಟದ ಸಂಘಟಕರಾದ ಅಶೋಕ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೋಪಾಲ ಕೃಷ್ಣ ಕೂಡ್ಲು, ಮನೋಜ್ ಮಂಜೇಶ್ವರ ವ್ಯವಸ್ಥಾಪಕರು ಧ್ವನಿ ಮೀಡಿಯ, ಸುನಿಲ್ ಡಿಸೋಜ ಬಾಯಿಕಟ್ಟೆ, ರವಿ ರಾವ್ ಮೀಯಪದವು, ಮನ್ಸೂರ್ ಮಚ್ಚ0ಪಾಡಿ, ಸುನಿಲ್ ಮೊಂತೆರೋ ಮೀಯಪದವು, ರಝಾಕ್ ಕಿಟ್ಟಗುಂಡಿ, ರಘುರಾಮ್ ಛತ್ರ0ಪಳ್ಳ, ಪ್ರಿಜ್ಜು ಬಲ್ಲಾರ್, ಅಮಿತಾ ಮಂಜೇಶ್ವರ, ಮಂಜು ಕಾರ್ಲೆ, ಸಂಜೀವ ಮಾಸ್ತರ್, ರಘುರಾವ್ ಮಾಸ್ತರ್ ಮೀಯಪದವು ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಮಾಸ್ಟರ್ಸ್ ಸ್ಟ್ರೈಕರ್ಸ್ ಮೀಯಪದವು ಪ್ರಥಮ ಸ್ಥಾನ, ಕ್ರಿಕೆಟ್ ಮಾಸ್ಟರ್ಸ್ ಕಾಸರಗೋಡು ದ್ವಿತೀಯ ಸ್ಥಾನ, ಮಾಸ್ಟರ್ ಸೂಪರ್ ಕಿಂಗ್ಸ್ ಕುಂಬಳೆ ತೃತೀಯ ಹಾಗೂ ತುಳುನಾಡ್ ಸ್ಟ್ರೈಕರ್ಸ್ ಕಾಸರಗೋಡು ಚತುರ್ಥ ಸ್ಥಾನ ಪಡೆದರು. ರಾಜೇಶ್ ಕೊಡ್ಲಮೊಗರು ಸ್ವಾಗತಿಸಿ, ಸಂಘಟಕರಾದ ಉದಯ್ ಸಾರಂಗ್ ವಂದಿಸಿದರು.









