ಪೈವಳಿಕೆ ಸರ್ವೀಸ್ ಕೋ - ಓಪರೇಟಿವ್ ಬ್ಯಾಂಕ್ ನ ವಾರ್ಷಿಕ ಮಹಾಸಭೆ. ಪ್ರಸ್ತುತ ವರ್ಷದಲ್ಲಿ 120 ಕೋಟಿ ರೂಪಾಯಿ ವ್ಯವಹಾರ ನಡೆಸಿ, 36 ಲಕ್ಷ ರೂಪಾಯಿ ಲಾಭ ಗಳಿಕೆ.
ಅಕ್ಟೋಬರ್ 01, 2024
0
ಪೈವಳಿಕೆ ಸರ್ವೀಸ್ ಕೋ - ಓಪರೇಟಿವ್ ಬ್ಯಾಂಕ್ ನ ವಾರ್ಷಿಕ ಮಹಾಸಭೆ. ಪ್ರಸ್ತುತ ವರ್ಷದಲ್ಲಿ 120 ಕೋಟಿ ರೂಪಾಯಿ ವ್ಯವಹಾರ ನಡೆಸಿ, 36 ಲಕ್ಷ ರೂಪಾಯಿ ಲಾಭ ಗಳಿಕೆ.
ಪೈವಳಿಕೆ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ನ 2023 - 24 ನೇ ವರ್ಷದ ವಾರ್ಷಿಕ ಮಹಾಸಭೆಯು ಬ್ಯಾಂಕ್ ನ ಅಧ್ಯಕ್ಷ ಶ್ರೀಧರ ಹೊಳ್ಳರವರ ಅಧ್ಯಕ್ಷತೆಯಲ್ಲಿ ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ ಬ್ಯಾಂಕ್ ನ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ವರದಿ ವಾಚಿಸಿದರು. ಸಭಾದ್ಯಕ್ಷರಾದ ಶ್ರೀಧರ ಹೊಳ್ಳ ಕಯ್ಯಾರು ಬ್ಯಾಂಕ್ ನ ಪ್ರಗತಿಯ ಬಗ್ಗೆ ಸದಸ್ಯರಿಗೆ ತಿಳಿಸಿದರು. ಪ್ರಸ್ತುತ ವರ್ಷದ ಬ್ಯಾಂಕ್ 120 ಕೋಟಿ ರೂ ವ್ಯವಹಾರ ನಡೆಸಿ, 36 ಲಕ್ಷ ರೂ ಲಾಭಗಳಿಸಿದೆ. ಬ್ಯಾಂಕ್ ನ ಮಾಜಿ ಅಧ್ಯಕ್ಷ ಅಂದುಞಿ ಹಾಜಿ ಸಿರಂತ್ತಡ್ಕ, ಮಾಜಿ ನಿರ್ದೇಶಕ ನಾರಾಯಣ ಬೆಳ್ಚಪ್ಪಾಡ ಪಾಂಡ್ಯಡ್ಕ, ಮಾಜಿ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಕಲ್ಲೇಕ್ಕರ್ ಅವರಿಗೆ ಸಭೆಯು ಶ್ರದ್ಧಾಂಜಲಿ ಅರ್ಪಿಸಿತು. ಬ್ಯಾಂಕ್ ನ ನಿರ್ದೇಕರಾದ ಗಣಪತಿ ಭಟ್ ಕುಂಡೇರಿ, ಅಬ್ದುಲ್ ಅಜೀಜ್ ಕಲಾಯಿ, ಮಾಜಿ ನಿರ್ದೇಕರಾದ ತಿರುಮಲೇಶ್ವರ , ಅಬ್ದುಲ್ ರಹಿಮಾನ್ ಮಾಸ್ಟರ್, ಮಾಜಿ ಕಾರ್ಯದರ್ಶಿ ಪರಮೇಶ್ವರ ಪೈವಳಿಕೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಥಮವಾಗಿ ಐ. ಸಿ. ಎಂ ಕಣ್ಣೂರು ಇವರ ಪ್ರತಿನಿಧಿ ಅಭಿಲಾಷ್ ರವರು ಸಹಕಾರಿ ತತ್ವಗಳ ಬಗ್ಗೆ ತರಗತಿ ನಡೆಸಿದರು. ಮಹಾಸಭೆಯಲ್ಲಿ ಬ್ಯಾಂಕ್ ನ ನಿರ್ದೇಕರಾದ ಅಬ್ಬು ಸಾಲಿ ಕಲಾಯಿ, ಮಾರ್ಸೆಲ್ ಡಿ ಸೋಜಾ, ಪ್ರಶಾಂತ್ ಕುಮಾರ್, ಆಶಾದೇವಿ, ಪುಷ್ಪಾ ಬಾಯಿಕಟ್ಟೆ ಬ್ಯಾಂಕ್ ನ ಉಪಾಧ್ಯಕ್ಷರಾದ ಶಾಲಿನಿ ಕುಮಾರಿ, ಸುಂದರ ಜೋಡುಕಲ್ಲು ಭಾಗವಹಿಸಿದರು. ಬ್ಯಾಂಕ್ ನ ನಿರ್ದೇಶಕ ಅಶ್ವಥ್ ಪೂಜಾರಿ ಲಾಲ್ ಬಾಗ್ ಸ್ವಾಗತಿಸಿ, ನಿರೂಪಿಸಿ, ಬ್ಯಾಂಕ್ ನ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ ವಂದಿಸಿದರು.


