ಬಿ.ಕೆ.ಎಂ.ಯು ನೇತೃತ್ವದಲ್ಲಿ ಬೆಜ್ಜದಲ್ಲಿ ಮಂಜೇಶ್ವರ ಮಂಡಲ ಮಟ್ಟದ "ಭತ್ತದ ಕೃಷಿ ನಾಟಿ" ಉದ್ಘಾಟನೆ.
ಆಗಸ್ಟ್ 08, 2024
0
ಬಿ.ಕೆ.ಎಂ.ಯು ನೇತೃತ್ವದಲ್ಲಿ ಬೆಜ್ಜದಲ್ಲಿ ಮಂಜೇಶ್ವರ ಮಂಡಲ ಮಟ್ಟದ "ಭತ್ತದ ಕೃಷಿ ನಾಟಿ" ಉದ್ಘಾಟನೆ.
ಮಂಜೇಶ್ವರ: ಕೇರಳ ರಾಜ್ಯ ಕೃಷಿ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ "ನಾವು ಕೃಷಿಯ ಕಡೆಗೆ" ಎಂಬ ಘೋಷಣೆಯೊಂದಿಗೆ ಮಂಜೇಶ್ವರ ಮಂಡಲ ಮಟ್ಟದ ಭತ್ತದ ಕೃಷಿ ನಾಟಿ ಉದ್ಘಾಟನೆ ಯು.ಬಿ.ಕೆ.ಎಂ.ಯು ಬೆಜ್ಜ ಯುನಿಟ್ ಹಾಗೂ ಮಂಡಲ ಕಮಿಟಿ ಜಂಟಿ ನೇತೃತ್ವದಲ್ಲಿ ಹೊಸಂಗಡಿ ಬಳಿಯ ಬೆಜ್ಜದಲ್ಲಿ ಬಂಜರು ಭೂಮಿ ಭತ್ತದ ಕೃಷಿಯ ನೇಜಿ ನೆಡುವ ಮೂಲಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಗೋವಿಂದನ್ ಪಳ್ಳಿಕಾಪಿಲ್ ಉದ್ಘಾಟಿಸಿದರು. ರಾಮಚಂದ್ರ ಬಡಾಜೆ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ.ಎಂ.ಯು ಜಿಲ್ಲಾ ಕಾರ್ಯದರ್ಶಿ ಎಂ ಕುಮಾರನ್, ಸಿ.ಪಿ.ಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಬಿ.ಕೆ.ಎಂ.ಯು ಮಂಡಲ ಕಮಿಟಿ ಸದಸ್ಯರಾದ ಶರತ್ ಬೆಜ್ಜ, ತನಿಯಪ್ಪ ಬೆಜ್ಜ, ಸಿಪಿಐ ಬೆಜ್ಜ ಬ್ರಾಂಚ್ ಕಾರ್ಯದರ್ಶಿ ಭಾಸ್ಕರ, ಎ.ಐ.ವೈ.ಎಫ್ ನೇತಾರರಾದ ಕಿಶನ್ ಹೆಗ್ಡೆ, ದೇವೀಪ್ರಸಾದ್, ಅಜಿತ್ ಕುಮಾರ್, ಲಕ್ಷ್ಮೀಷ, ಸಚಿನ್ ಹೆಗ್ಡೆ, ಪಕ್ಷದ ನೇತಾರರಾದ ರಘುರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುಧಾ ಹೆಗ್ಡೆ ಮೊದಲಾದವರು ನೇತೃತ್ವ ನೀಡಿದರು. ಬಿ.ಕೆ.ಎಂ.ಯು ಮಂಡಲ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಸ್ವಾಗತಿಸಿದರು.


