ಚಿತ್ರ ಕಲಾವಿದ, ವಿನ್ಯಾಸಗಾರ, ಮಣ್ಣಿನ ವಿಗ್ರಹ ರಚನೆಗಾರ, ಕುಂಬಳೆ ವಿಶ್ವಕರ್ಮ ಗ್ರಾಫಿಕ್ಸ್ (ಜಯ ಕೃಷ್ಣ ಪ್ರಿಂಟಿಂಗ್ ಪ್ರೆಸ್) ನ ಮಾಲಕ,ಕೆ. ಆರ್.ಕೆ ನಾಗಪ್ರಸಾದ್ ಆಚಾರ್ಯ (35) ನಿಧನ.
ಆಗಸ್ಟ್ 08, 2024
0
ಚಿತ್ರ ಕಲಾವಿದ, ವಿನ್ಯಾಸಗಾರ, ಮಣ್ಣಿನ ವಿಗ್ರಹ ರಚನೆಗಾರ, ಕುಂಬಳೆ ವಿಶ್ವಕರ್ಮ ಗ್ರಾಫಿಕ್ಸ್ (ಜಯ ಕೃಷ್ಣ ಪ್ರಿಂಟಿಂಗ್ ಪ್ರೆಸ್) ನ ಮಾಲಕ,ಕೆ. ಆರ್.ಕೆ ನಾಗಪ್ರಸಾದ್ ಆಚಾರ್ಯ (35) ನಿಧನ.
ಕುಂಬಳೆ: ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನದ ತಂತ್ರಿವರ್ಯ ಕೆಳಗಿನ ಮನೆ ಪುರೋಹಿತ ರಾಮಕೃಷ್ಣ ಆಚಾರ್ಯರ ದ್ವಿತೀಯ ಪುತ್ರ ಕೆ. ಆರ್.ಕೆ ನಾಗಪ್ರಸಾದ್ ಆಚಾರ್ಯ (35) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮುಂಜಾನೆ 2.00 ಘಂಟೆಗೆ ನಿಧನರಾದರು. ಮೃತರು ಕುಂಬಳೆ ಪೊಲೀಸ್ ಸ್ಟೇಷನ್ ರಸ್ತೆಯಲ್ಲಿರುವ ಶ್ರೀ ವಿಶ್ವಕರ್ಮ ಗ್ರಾಫಿಕ್ಸ್ (ಜಯ ಕೃಷ್ಣ ಪ್ರಿಂಟಿಂಗ್ ಪ್ರೆಸ್) ನ ಮಾಲಕರಾಗಿದ್ದಾರೆ. ಸರಳ ಸಜ್ಜನಿಕೆ ಮತ್ತು ಸದಾ ನಗುಮುಖ ವ್ಯಕ್ತಿತ್ವದವರಾಗಿದ್ದ ಮೃತರು, ಚಿತ್ರ ಕಲಾವಿದರೂ, ಮಣ್ಣಿನ ವಿಗ್ರಹ ರಚನಕಾರರಾಗಿ, ಉಡುಪಿ ಪಡು ಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಮಾಧ್ಯಮ ವಿಭಾಗದ ಪ್ರಧಾನ ಕಂಪ್ಯೂಟರ್ ವಿನ್ಯಾಸಗಾರರಾಗಿ, ಲೋಗೋ, ಆಮಂತ್ರಣ ಪತ್ರಿಕೆಗಳು, ಋಷಿ ಸ್ವರಂ ಇವುಗಳ ವಿನ್ಯಾಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರು. ಅಲ್ಲದೇ ಕಾರ್ಲೆ ಶ್ರೀ ಕಾಳಿಕಾಂಬ ದೇವಸ್ಥಾನದ ಕ್ಷೇತ್ರಾಭಿವೃದ್ದಿ ಸಮಿತಿಯ ಕೋಶಾಧಿಕಾರಿ, ಯುವಕ ಸಂಘದ ಸದಸ್ಯರಾಗಿದ್ದಾರೆ. ಮೃತರು ತಂದೆ, ತಾಯಿ: ಶ್ರೀಮತಿ ಜಯಲಕ್ಷ್ಮಿ, ಪತ್ನಿ: ಹರ್ಷಲತಾ, ಪುತ್ರಿ: ಅನುಗ್ರಹ, ಸಹೋದರರಾದ: ಲಕ್ಷ್ಮೀ ಪ್ರಸಾದ್ ಆಚಾರ್ಯ, ಪು. ದುರ್ಗಾ ಪ್ರಸಾದ್ ಆಚಾರ್ಯ, ವಿನಾಯಕ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮನೆ ಹಿತ್ತಲಿನಲ್ಲಿ ನಡೆಯಿತು. ಮೃತರ ನಿಧನಕ್ಕೆ ಕುಂಬಳೆ ಕಾರ್ಲೆ ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಸಮಿತಿ, ಕ್ಷೇತ್ರಾಭಿವೃದ್ಧಿ ಸಮಿತಿ, ಯುವಕ ಸಂಘ, ಮಾತೃ ಸಂಘ, ಉತ್ಸವ ಸಮಿತಿ, ಉಡುಪಿ ಪಡುಕುತ್ಯಾರಿನ ಶ್ರೀ ಆನೆಗುಂದಿ ಪ್ರತಿಷ್ಠಾನದ ವಿಶ್ವಸ್ಥರು, ಅಧ್ಯಕ್ಷರು, ಪದಾಧಿಕಾರಿಗಳು, ಹಿಂದೂ ಸ್ಥಾನ್ ವಾಟ್ಸಾಪ್ ಗ್ರೂಪ್ ನ ಸದಸ್ಯರು ಗಾಢವಾದ ಸಂತಾಪ ಸೂಚಿಸಿದ್ದಾರೆ.

