Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಶ್ರೀ ಮತ್ ಅನಂತೇಶ್ವರ ದೇವಸ್ಥಾನದಲ್ಲಿ "ಶ್ರೀ ನಾಗರ ಪಂಚಮಿ ಮಹೋತ್ಸವ " ಈ ತಿಂಗಳ 9ರಂದು ಮುಂಜಾನೆಯಿಂದ ಪ್ರಾರಂಭ.

ಮಂಜೇಶ್ವರ ಶ್ರೀ ಮತ್ ಅನಂತೇಶ್ವರ ದೇವಸ್ಥಾನದಲ್ಲಿ "ಶ್ರೀ ನಾಗರ ಪಂಚಮಿ ಮಹೋತ್ಸವ " ಈ ತಿಂಗಳ 9ರಂದು ಮುಂಜಾನೆಯಿಂದ ಪ್ರಾರಂಭ.
ಮಂಜೇಶ್ವರ: ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಮಂಜೇಶ್ವರ ಶ್ರೀ ಮತ್ ಅನಂತೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಮಹೋತ್ಸವ ಈ ತಿಂಗಳ 9 ಶುಕ್ರವಾರದಂದು ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಅಂದು ಬೆಳಗ್ಗೆ 6.15 ರಿಂದ ಕ್ಷೇತ್ರದ ಮುಂಭಾಗವಿರುವ ನಾಗನ ಕಟ್ಟೆಯಲ್ಲಿ ನಾಗನ ಪೂಜೆ ಆರಂಭಗೊಳ್ಳಲಿದ್ದು, ನಾಗ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಹಾಲಾಭಿಷೇಕ, ನಾಗ ತಂಬಿಲ, ಮಹಾಪೂಜೆ ನಡೆಯಲಿದೆ.
ಕ್ಷೇತ್ರದೊಳಗಡೆ ಇರುವ ಶ್ರೀಮತ್ ಅನಂತೇಶ್ವರ ದೇವರಿಗೆ ಬೆಳಗ್ಗೆ 9.00 ರಿಂದ ಅಭಿಷೇಕಗಳು ಆರಂಭಗೊಳ್ಳಲಿದೆ. 10.30 ಕ್ಕೆ ಅಭಿಷೇಕ ಆರತಿ, 12.30 ಕ್ಕೆ ಮಹಾಪೂಜೆ, ಸರ್ಪದ ಮೂಲಸ್ಥಾನದಲ್ಲಿ ವಾಸುಕಿ ಪೂಜೆ, ಕಾರ್ತಿಕ ಪೂಜೆ, ಗೋಪೂಜೆ, ಸೇವಾದಾರರಿಗೆ ಪ್ರಸಾದ ವಿತರಣೆ, ಬಳಿಕ ಭಕ್ತಾದಿಗಳಿಗೆ ಭೋಜನ ವಿತರಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವಾಮನ್ ಶರ್ಮಾ ರವರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.