Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ತುಂಗಾಭದ್ರಾನದಿ ಪ್ರವಾಹದಿಂದ ಭಕ್ತರಿಗೆ ಸ್ನಾನ, ದರ್ಶನ ಇತ್ಯಾದಿಗಳಿಗೆ ತೊಂದರೆ, ಸದ್ಯಕ್ಕೆ ಮಂತ್ರಾಲಯ ಯಾತ್ರೆ ಮುಂದೂಡಬೇಕು ಎಂಬ ಸಾಮಾಜಿಕ ಜಾಲತಾಣಗಳ ಸುದ್ದಿ ಸುಳ್ಳು. ಯಾರು ಈ ಬಗ್ಗೆ ಆತಂಕ ಪಡದೆ ರಾಯರ ದರ್ಶನ ಮಾಡಬೇಕೆಂದು ಕ್ಷೇತ್ರದ ಅಧಿಕೃತ ಪ್ರಕಟಣೆ.

ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ತುಂಗಾಭದ್ರಾನದಿ ಪ್ರವಾಹದಿಂದ ಭಕ್ತರಿಗೆ ಸ್ನಾನ, ದರ್ಶನ ಇತ್ಯಾದಿಗಳಿಗೆ ತೊಂದರೆ, ಸದ್ಯಕ್ಕೆ ಮಂತ್ರಾಲಯ ಯಾತ್ರೆ ಮುಂದೂಡಬೇಕು ಎಂಬ ಸಾಮಾಜಿಕ ಜಾಲತಾಣಗಳ ಸುದ್ದಿ ಸುಳ್ಳು. ಯಾರು ಈ ಬಗ್ಗೆ ಆತಂಕ ಪಡದೆ ರಾಯರ ದರ್ಶನ ಮಾಡಬೇಕೆಂದು ಕ್ಷೇತ್ರದ ಅಧಿಕೃತ ಪ್ರಕಟಣೆ.
ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ, ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ತುಂಗಾಭದ್ರಾನದಿ ಪ್ರವಾಹದಿಂದ ಭಕ್ತರಿಗೆ ಸ್ನಾನ, ದರ್ಶನ ಇತ್ಯಾದಿಗಳಿಗೆ ತೊಂದರೆಯಾಗುತ್ತಿದೆಯೆಂದು ಮಂತ್ರಾಲಯ ಯಾತ್ರೆಯನ್ನು ಮುಂದೂಡಿಕೊಳ್ಳಬೇಕೆಂದು ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಿದ್ದರಿಂದ ಮಂತ್ರಾಲಯದಲ್ಲಿಯೂ ಕೂಡ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅಷ್ಟೇ ಹೊರತಾಗಿ ಭಕ್ತರಿಗಾಗಲಿ, ಶ್ರೀಮಠದಲ್ಲಿನ ವ್ಯವಸ್ಥೆಗಳಿಗಾಗಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಕ್ಷೇತ್ರದ ವತಿಯಿಂದ ಭಕ್ತರ ಅನುಕೂಲಕ್ಕಾಗಿ ನದಿ ತೀರದಲ್ಲಿ ಷವರ್ ಗಳ ಮೂಲಕ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಯಾವುದೇ ತೊಂದರೆಯಿಲ್ಲದೆ ಮಂತ್ರಾಲಯ ಯಾತ್ರೆ ಮಾಡಬಹುದು. ಇಷ್ಟೇ ಅಲ್ಲದೆ, ಮುಂಬರುವ ರಾಯರ ಆರಾಧನಾ ಮಹೋತ್ಸವದ ಸಂದರ್ಭಕ್ಕಾಗಿಯೂ ಕೂಡ ಸಕಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನದಿ ಪ್ರವಾಹ ಕಡಿಮೆಯಾಗುತ್ತಿದ್ದು, ಸ್ನಾನಕ್ಕೂ ಕೂಡ ಅನುಮತಿಸಲಾಗುತ್ತಿದೆ. ಭಕ್ತರು ಯಾವುದೇ ಆತಂಕಕ್ಕೆ ಒಳಗಾಗದೆ, ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಿ,
ಗುರುರಾಯರ ದರ್ಶನ, ಪ್ರಸಾದ, ಶ್ರೀಪಾದಂಗಳವರಿಂದ ಅನುಗ್ರಹ ಫಲಮಂತ್ರಾಕ್ಷತೆ ಪಡೆದು ಕೃತಾರ್ಥರಾಗಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ. ಅತಿಶಯೋಕ್ತಿಯಿಂದ ಕೂಡಿದ ಮಾಧ್ಯಮ ವರದಿಗಳಿಗೆ ಕಿವಿಗೊಡಬಾರದು ಎಂದು ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿಯ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.