ವಯನಾಡಿನ ದುರಂತ ಭೂಮಿಯಲ್ಲಿ ದ್ವೇಷ ಪ್ರಚಾರ ನಡೆಸಿದ ಟಿ.ಜಿ ಮೋಹನ್ ದಾಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಪಿ.ಡಿ.ಪಿ.
ಆಗಸ್ಟ್ 06, 2024
0
ವಯನಾಡಿನ ದುರಂತ ಭೂಮಿಯಲ್ಲಿ ದ್ವೇಷ ಪ್ರಚಾರ ನಡೆಸಿದ ಟಿ.ಜಿ ಮೋಹನ್ ದಾಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಪಿ.ಡಿ.ಪಿ.
ಮಂಜೇಶ್ವರ: ವಯನಾಡು ದುರಂತ ಭೂಮಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಸಮಾಜಸೇವಕರ ವಿರುದ್ಧ ವರ್ಗಿಯ ದೃವೀಕರಣ ಕೊಳ್ಳುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಚಾನಲ್ ಚರ್ಚೆಯಲ್ಲಿ ಭಾಗವಹಿಸುವ ಕೆಲವರು ನಡೆಸುತ್ತಿರುವ ಅಮಾನವೀಯ ದ್ವೇಷ ಪ್ರಚಾರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಿಡಿಪಿ ಕೌನ್ಸಿಲ್ ಸಭೆ ಆಗ್ರಹಿಸಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರನ್ನು ಧರ್ಮ ಮತ್ತು ರಾಜಕೀಯ ಹೆಸರಿನಲ್ಲಿ ಹೀಯಾಳಿಸಿದ ಟಿ.ಜಿ ಮೋಹನ್ ದಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಕ್ಷದ ಸ್ಟಿಯರಿಂಗ್ ಸಮಿತಿ ಚೇರ್ ಮ್ಯಾನ್ ಎಸ್.ಎಮ್ ಬಷೀರ್ ಅಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರದಲ್ಲಿ ಸೇರಿದ ಸಭೆಯು ತೀರ್ಮಾನಿಸಿದೆ. ವಯನಾಡು ದುರಂತದಲ್ಲಿ ನಿರಾಶ್ರಿತರಾದ ಕುಟುಂಬಗಳಲ್ಲಿ 20 ಕುಟುಂಬಗಳಿಗೆ ಜೀವನೋಪಾದಿಗೆ ಬೇಕಾದ ವ್ಯಾಪಾರ ವ್ಯವಸ್ಥೆ ಒದಗಿಸಿಕೊಡಲು ತೀರ್ಮಾನಿಸಲಾಯಿತು. ಸಭೆಯನ್ನು ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಆಸಾದ್ ಉದ್ಘಾಟಿಸಿದರು. ಪಿಡಿಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಯುನುಸು ತಲಂಗರ, ಸಯ್ಯಿದ್ ಮುಹಮ್ಮದ್ ಸಕಾಫ್ ತಂಗಳ್, ಸಯ್ಯಿದ್ ಉಮರುಲ್ ಫಾರೂಕ್ ತಂಗಳ್, ಶಾಫಿ ಹಾಜಿ ಅದೂರ್, ಆಬಿದ್ ಮಂಜಪಾರ, ಜಾಸಿ ಪೋಸೋಟ್, ರಫೀಕ್ ಮಂಜೇಶ್ವರ, ಎಮ್.ಎ ಕಳತೂರು, ಇಬ್ರಾಹಿಂ ತೋಕೆ, ಇಬ್ರಾಹಿಂ ಕೋಳಿಯಡ್ಕ, ಮೊದಲಾದ ಜಿಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.


