ಪೆರ್ಲ ಏಕದಂತ ಬಳಗ ಹಾಗೂ ಏಕದಂತ ಕಲಾವಿದೆರ್ ಕುಡ್ಲ ವತಿಯಿಂದ "ಆಟಿ ಸಂಭ್ರಮ, ಸನ್ಮಾನ ಕಾರ್ಯಕ್ರಮ.
ಆಗಸ್ಟ್ 05, 2024
0
ಪೆರ್ಲ ಏಕದಂತ ಬಳಗ ಹಾಗೂ ಏಕದಂತ ಕಲಾವಿದೆರ್ ಕುಡ್ಲ ವತಿಯಿಂದ "ಆಟಿ ಸಂಭ್ರಮ, ಸನ್ಮಾನ ಕಾರ್ಯಕ್ರಮ.
ಪೆರ್ಲ: ಏಕದಂತ ಬಳಗ ಪೆರ್ಲ ಹಾಗೂ ಏಕದಂತ ಕಲಾವಿದೆರ್ ಕುಡ್ಲ ವತಿಯಿಂದ "ಆಟಿ ಸಂಭ್ರಮ, ಸನ್ಮಾನ ಕಾರ್ಯಕ್ರಮ" ಪೆರ್ಲ ವ್ಯಾಪಾರಿ ಭವನದಲ್ಲಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಏಕದಂತ ನೃತ್ಯ ಭಜನಾ ತಂಡದ ಮಕ್ಕಳಿಂದ ಕುಣಿತ ಭಜನೆ, ವಿವಿಧ ನೃತ್ಯ ಪ್ರದರ್ಶನ ನಡೆಯಿತು. ಸನ್ಮಿತಾ ಬೆದ್ರಂಪಳ್ಳ ನಿರೂಪಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು
ಹೊಂಬೆಳಕು ಟ್ಯೂಷನ್ ಸೆಂಟರ್ ನ ಪ್ರಾಂಶುಪಾಲರಾದ ಕಿಶೋರ್ ಕುಮಾರ್ ರೈ ಶೇಣಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಯಮಿ ಪ್ರಸಾದ್ ಟಿ ಪೆರ್ಲ ಅಧ್ಯಕ್ಷತೆ ವಹಿಸಿದರು. ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕರಾದ ರಘು ಇಡ್ಕಿದು ಆಟಿ ತಿಂಗಳ ಬಗ್ಗೆ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಪತ್ರಕರ್ತ ಪುರುಷೋತ್ತಮ ಪೆರ್ಲ, ಮಣಿ ಎಂ. ಎಸ್ ಪೆರ್ಲ ಉಪಸ್ಥಿತರಿದ್ದರು. ನಾಟಿ ವೈದ್ಯೆ ನಳಿನಾಕ್ಷಿ .ಕೆ ರೈ ಪೆರಿಯಾಲ್, ಮಹಮ್ಮಾಯಿ (ಗೊಂದೋಳು ಪೂಜೆ )ಅಮ್ಮನ ದರ್ಶನ ಪಾತ್ರಿ ಐತಪ್ಪ ನಾಯ್ಕ್ ಬಜಕೂಡ್ಲು ಎಂಬಿವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಮೋನಿಶ್ ವಿಟ್ಲ ಹಾಗೂ ಶರಣ್ಯ ಸೇರಾಜೆ ವಾಚಿಸಿದರು. ಜಯಂತ ಸೇರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು, ರಮೇಶ್ ಕುರಡ್ಕ ನಿರೂಪಿಸಿ ಸುಮಿತ್ರಾ ಕುರಡ್ಕ ವಂದಿಸಿದರು. ಸಂದರ್ಭದಲ್ಲಿ ಆಟಿ ತಿಂಗಳಲ್ಲಿ ಮಾಡುವ ತಿನಸುಗಳನ್ನು ಪ್ರದರ್ಶಿಸಲಾಯಿತು.



