ವರ್ಕಾಡಿ ಕೆದಕ್ಕಾರು ಗುಡ್ಡ ಕುಸಿತ. ಜಿಲ್ಲಾ ಪಂಚಾಯತ್ ಸದಸ್ಯೆಯಿಂದ ಜಿಲ್ಲಾಧಿಕಾರಿಗೆ ಮನವಿ.
ಆಗಸ್ಟ್ 05, 2024
0
ವರ್ಕಾಡಿ ಕೆದಕ್ಕಾರು ಗುಡ್ಡ ಕುಸಿತ. ಜಿಲ್ಲಾ ಪಂಚಾಯತ್ ಸದಸ್ಯೆಯಿಂದ ಜಿಲ್ಲಾಧಿಕಾರಿಗೆ ಮನವಿ.
ವರ್ಕಾಡಿ: ಇಲ್ಲಿನ ಪೊಯ್ಯತ್ತಬೈಲು - ಕೆದಕ್ಕಾರು ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾಸರಗೋಡು ಜಿ.ಪಂ.ಸದಸ್ಯರಾದ ಕಮಲಾಕ್ಷಿಯವರು ಕಾಸರಗೋಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಾಜೀ ಜಿ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಹಾಲಿ ಜಿ.ಪಂ.ಸದಸ್ಯರಾದ ಗೋಲ್ಡನ್ ಅಬ್ದುಲ್ ರಹ್ಮಾನ್, ಜಮೀಲಾ ಸಿದ್ದೀಕ್, ಜಾಸ್ಮೀನ್ ಕಬೀರ್ ಉಪಸ್ಥಿತರಿದ್ದರು.


