Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಿಂದ ಇಂದು ಮಂಗಲ್ಪಾಡಿ ಪಂಚಾಯತ್ ನ ವಿವಿಧೆಡೆ ಭೇಟಿ.

ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಿಂದ ಇಂದು ಮಂಗಲ್ಪಾಡಿ ಪಂಚಾಯತ್ ನ ವಿವಿಧೆಡೆ ಭೇಟಿ.
ಮಂಜೇಶ್ವರ: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ರವೀಶ್ ತಂತ್ರಿ ಕುಂಟಾರ್ ರವರು ಇಂದು ಮಂಗಲ್ಪಾಡಿ ಪಂಚಾಯತ್ ವಿವಿಧ ಪ್ರದೇಶಗಳಿಗೆ ಸಂದರ್ಶನ ನೀಡಿದರು. ಹಲವಾರು ದಿನಗಳ ಅನಾರೋಗ್ಯದ ಕಾರಣ ನಿನ್ನೆಯ ದಿನ ಭಗವಂತನ ಪಾದ ಸೇರಿದ ಮಂಗಲ್ಪಾಡಿ ಪಂಚಾಯತ್ ಅಡ್ಕ ನಿವಾಸಿ ಶ್ರೀಮತಿ ಐಶ್ವರ್ಯ ಹಾಗೂ ಇತ್ತೀಚಿಗೆ ಅಕಾಲಿಕ ಮರಣಕ್ಕೀಡಾದ ಪ್ರತಾಪ ನಗರ ನಿವಾಸಿ ವಿಶ್ವನಾಥ ಅಚಾರ್ಯರ ಮನೆಗೆ ಹಾಗೂ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇತ್ತಿಚೆಗೆ ನಿಧನರಾದರ ಐಲ ಶಿವಾಜಿ ನಗರ ನಿವಾಸಿ ವಸಂತರವರ ಮನೆಗೆ ತೆರಳಿ ಸಾಂತ್ವನದ ನುಡಿಯನ್ನು ನೀಡಿ ಕುಟುಂಬದವರ ದುಖ:ದಲ್ಲಿ ಪಾಲ್ಗೊಂಡರು. ಮತ್ತು ತೀವ್ರ ಕಡಲ್ಕೊರತದ ಪ್ರದೇಶದವಾದ ಉಪ್ಪಳ ಐಲ ಶಿವಾಜಿ ನಗರದ ಸಮುದ್ರ ತೀರ ಪ್ರದೇಶವನ್ನು ಭೇಟಿ ನೀಡಿ ಕಡಲ್ಕೊರೆತದಿಂದ ಹಾನಿಯಾದ ಗಣೇಶ ದೇವರ ಕಟ್ಟೆಯನ್ನು ಹಾಗೂ ದೋಣಿಯ ಶೆಡ್ಡ್ ಗಳನ್ನೂ ವಿಕ್ಷೀಸಿ ತಕ್ಷಣ ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿನಂತಿಸಿದರು. ಈ ಸಂದರ್ಭ ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನೀಲ್ ಅನಂತಪುರ, ಪ್ರಧಾನ ಕಾರ್ಯದರ್ಶಿ ವಸಂತ್ ಮಯ್ಯ ಮೊದಲಾದವರು ಜೊತೆಯಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.