
ಕೇರಳ ತುಳು ಅಕಾಡೆಮಿಯ "ಆಟಿದ ಅಟ್ಟಣೆ" ಕಾರ್ಯಕ್ರಮದ ಆಮಂತ್ರಣ ಪತ್ರ ಕೊಂಡೆವೂರು ಶ್ರೀಗಳ ದಿವ್ಯ ಹಸ್ತದಿಂದ ಬಿಡುಗಡೆ.
ಆಗಸ್ಟ್ 06, 2024
0
ಕೇರಳ ತುಳು ಅಕಾಡೆಮಿಯ "ಆಟಿದ ಅಟ್ಟಣೆ" ಕಾರ್ಯಕ್ರಮದ ಆಮಂತ್ರಣ ಪತ್ರ ಕೊಂಡೆವೂರು ಶ್ರೀಗಳ ದಿವ್ಯ ಹಸ್ತದಿಂದ ಬಿಡುಗಡೆ.
ಮಂಜೇಶ್ವರ: ಕೇರಳ ತುಳು ಅಕಾಡೆಮಿ ವತಿಯಿಂದ ಪಾವೂರು ಸಮೀಪದ ಬಚ್ಚುವಳಿಕೆ "ಸ್ನೇಹಾಲಯ"ದಲ್ಲಿ ನಡೆಯುವ ಆಟಿ ತಿಂಗಳ ವಿಶೇಷ ಕಾರ್ಯಕ್ರಮ "ಆಟಿದ ಅಟ್ಟನೆ" ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಉಪ್ಪಳ ಕೊಂಡವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಚಾತುರ್ಮಾಸ್ಯದ ವೃತಾಚರಣೆಯ ವೇಳೆ ತಮ್ಮ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಿ, ಕಾರ್ಯಕ್ರಮಕ್ಕೆ ಶ್ರೀಗಳು ಶುಭ ಹಾರೈಸಿ, ಫಲ ಮಂತ್ರಾಕ್ಷತೆಯನ್ನು ನೀಡಿದರು. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ತುಳು ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ತನ್ನ ಸದಾ ಬೆಂಬಲ, ಆಶೀರ್ವಾದವಿದೆಯೆಂದು ತಮ್ಮ ಅನುಗ್ರಹ ಸಂದೇಶದಲ್ಲಿ ತಿಳಿಸಿದರು. ಅಲ್ಲದೆ ಮುಂದೆ ಅಕಾಡೆಮಿ ನಡೆಸುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷರಾದ ಕೆ. ಆರ್. ಜಯಾನಂದರವರು ಮೊದಲ ಆಮಂತ್ರಣ ಪತ್ರವನ್ನು ಸ್ವಾಮೀಜಿಯವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ, ಸಾಮಾಜಿಕ ಕಾರ್ಯಕರ್ತರಾದ ವಿನಯ ಕುಮಾರ್ ಬಾಯಾರ್ ಈ ವೇಳೆ ಉಪಸ್ಥಿತರಿದ್ದರು. ಆಗಸ್ಟ್ ತಿಂಗಳ 11 ರಂದು ನಡೆಯಲಿರುವ "ಆಟಿದ ಅಟ್ಟನೆ" ಕಾರ್ಯಕ್ರಮದ ಸಂಪೂರ್ಣ ವಿವರ ಈ 👇 ಕೆಳಗಿನಂತಿದೆ.-





