Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೊಡುಗೈ ದಾನಿ, ಸಾಮಾಜಿಕ, ಧಾರ್ಮಿಕ ಮುಂದಾಳು, ಕುಳೂರು ಸದಾಶಿವ ಶೆಟ್ಟಿಯವರ ಅಭಿಮಾನಿ ವರ್ಗದವರಿಂದ "ಕುಳೂರು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ" ಅಸ್ತಿತ್ವಕ್ಕೆ. ಕೇಂದ್ರ ಸಮಿತಿಯ ಸಭೆ.

ಕೊಡುಗೈ ದಾನಿ, ಸಾಮಾಜಿಕ, ಧಾರ್ಮಿಕ ಮುಂದಾಳು, ಕುಳೂರು ಸದಾಶಿವ ಶೆಟ್ಟಿಯವರ ಅಭಿಮಾನಿ ವರ್ಗದವರಿಂದ "ಕುಳೂರು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ" ತುಳುನಾಡ್ ಅಸ್ತಿತ್ವಕ್ಕೆ. ಕೇಂದ್ರ ಸಮಿತಿಯ ಸಭೆ.
ಮಂಜೇಶ್ವರ: ಕೊಡುಗೈ ದಾನಿ, ಸಾಮಾಜಿಕ, ಧಾರ್ಮಿಕ ಮುಂದಾಳು ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರ ಅಭಿಮಾನಿಗಳು ಒಟ್ಟು ಸೇರಿಕೊಂಡು "ಕುಳೂರು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ತುಳುನಾಡ್" ಎಂಬ ನಾಮಂಕಿತದಲ್ಲಿ ನೂತನ ಕೇಂದ್ರ ಸಮಿತಿಯನ್ನ ರೂಪಿಕರಿಸಿ, ಮೊದಲ ಸಭೆಯನ್ನು ಹೊಸಂಗಡಿ ಪ್ರೇರಣ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯಲ್ಲಿ ಕಾಸರಗೋಡು ಜಿಲ್ಲೆ ಹಾಗೂ ಉಳ್ಳಾಲ ವಲಯದ ಸುಮಾರು ಎಪ್ಪತ್ತರಷ್ಟು ಅಭಿಮಾನಿ ಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಕೇಂದ್ರ ಸಮಿತಿಯ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ರೂಪಿಕರಣದ ಬಗ್ಗೆ ಚರ್ಚಿಸಿ, ಸೂಕ್ತ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಧಾರ್ಮಿಕ ಮುಂದಾಳು, ಸಾಮಾಜಿಕ ಹಿತ ಚಿಂತಕರೂ, ಹಿರಿಯ ಮಾರ್ಗದರ್ಶಕರೂ, ಹಿರಿಯ ಪ್ರಗತಿಪರ ಕೃಷಿಕರಾದ, ಕೆ. ನಾರಾಯಣ ನಾಯ್ಕ್ ನಡುಹಿತ್ಲು ಕುಳೂರುರವರು ಸೇವಾ ಬಳಗದ ಕೇಂದ್ರ ಸಮಿತಿಯ ಕಾರ್ಯ ವೈಖರಿಯ ಬಗ್ಗೆ ವಿವರಿಸಿದರು. ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಸುರೇಶ್ ಶೆಟ್ಟಿ ಪರಂಕಿಲ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.