Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ತೆಂಗಿನಗರಿ ಕೊಯ್ಯುವ ವೇಳೆ ವಿದ್ಯುತ್ ಶಾಕ್ ತಗುಲಿ, ಉಪ್ಪಳದ ಪೆಟ್ರೋಲ್ ಬಂಕ್ ನೌಕರ, ಮಂಜೇಶ್ವರ ಹೊಸಬೆಟ್ಟು ನಿವಾಸಿ ಯಶವಂತ್ (21) ಮೃತ್ಯು.

ತೆಂಗಿನಗರಿ ಕೊಯ್ಯುವ ವೇಳೆ ವಿದ್ಯುತ್ ಶಾಕ್ ತಗುಲಿ, ಉಪ್ಪಳದ ಪೆಟ್ರೋಲ್ ಬಂಕ್ ನೌಕರ, ಮಂಜೇಶ್ವರ ಹೊಸಬೆಟ್ಟು ನಿವಾಸಿ ಯಶವಂತ್ (21) ಮೃತ್ಯು.
ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಬೆಟ್ಟುವಿನ ಗೋವಿಂದ ಪೈ ಕಾಲೇಜ್ ಬಳಿ ಇಂದು ಸಂಜೆ ನಡೆದಿದೆ. ಮೃತಪಟ್ಟ ಯುವಕನನ್ನು ಯಶವಂತ (21) ಎಂದು ಗುರುತಿಸಲಾಗಿದೆ. ಉಪ್ಪಳದ ಶಾಲಾ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ನಲ್ಲಿ ಕಳೆದ 2 ವರ್ಷಗಳಿಂದ ನೌಕರನಾಗಿರುವ ಯಶವಂತ್ ಇಂದು ಸಂಜೆ 5.30 ಗಂಟೆಗೆ ಕೆಲಸಕ್ಕೆ ತೆರಳಲು ಸಜ್ಜಾಗುತ್ತಿದ್ದನು. ಈ ವೇಳೆ ಮನೆ ಟ್ಯಾರೀಸ್ ನಲ್ಲಿ ತೆಂಗಿನ ಮರದಗರಿಯನ್ನ ಕಂಡು ಅದನ್ನ ಕಡಿದು ತೆಗೆಯಲು ತೆರಳಿದ್ದ ಯಶವಂತ್ ಮರದ ಪಕ್ಕವೇ ಹರಿಯುತ್ತಿದ್ದ ಯಚ್.ಟಿ ಲೈನ್ ನ ವಿದ್ಯುತ್ ಸ್ಪರ್ಶದಿಂದ ಅಲ್ಲೇ ಕುಸಿದು ಬಿದ್ದಿದ್ದ. ಗರಿ ತೆಗೆಯಲು ತೆರಳಿದ ಸಹೋದರ ಮರಳಿ ಬಾರದ ಹಿನ್ನಲೆಯಲ್ಲಿ ಸಹೋದರಿ ಟ್ಯಾರೀಸ್ ಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿ ಯಶವಂತ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ, ಯಶವಂತ್ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟ ಯಶವಂತ್ ತಂದೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ ರಾಮಚಂದ್ರ, ತಾಯಿ: ಬಬಿತಾ, ಸಹೋದರ - ಸಹೋದರಿಯರಾದ: ಸುಶ್ಮಿತಾ, ಜಯಸ್ಮಿತಾ, ಸುದೀಶ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.