Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪೈವಳಿಕೆ ಶಾಲೆಯಲ್ಲಿ ರ‍್ಯಾಗಿಂಗ್; ಜಿಲ್ಲಾ ಮಟ್ಟದ ರ‍್ಯಾಗಿಂಗ್ ನಿಗ್ರಹ ದಳ ರಚನೆಗೆ: ಪಿಡಿಪಿ ಒತ್ತಾಯ.

ಪೈವಳಿಕೆ ಶಾಲೆಯಲ್ಲಿ ರ‍್ಯಾಗಿಂಗ್; ಜಿಲ್ಲಾ ಮಟ್ಟದ ರ‍್ಯಾಗಿಂಗ್ ನಿಗ್ರಹ ದಳ ರಚನೆಗೆ: ಪಿಡಿಪಿ ಒತ್ತಾಯ.
ಉಪ್ಪಳ: ಪೈವಳಿಕೆ ಕಾಯರ್ ಕಟ್ಟೆ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಅಬ್ಬಾಸ್ ತನ್ವೀರ್ ಮೇಲೆ ನಡೆದ ರ‍್ಯಾಗಿಂಗ್ ಅಮಾನವೀಯ ಹಾಗೂ ಖಂಡನೀಯ ಎಂದು ಪಿಡಿಪಿ ಮಂಜೇಶ್ವರ ಕ್ಷೇತ್ರ ಸಮಿತಿ ತಿಳಿಸಿದೆ. ಅಧಿಕಾರಿಗಳು ತುರ್ತಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಇಂತಹ ಪೈಶಾಚಿಕ ಕೃತ್ಯಗಳು ಮರುಕಳಿಸದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪಿಡಿಪಿ ಮಂಜೇಶ್ವರ ಕ್ಷೇತ್ರ ಸಮಿತಿ ಆಗ್ರಹಿಸಿದೆ. ಕಾಸರಗೋಡು ಜಿಲ್ಲೆಯ ಮತ್ತೊಂದು ಶಾಲೆಯ ವಿದ್ಯಾರ್ಥಿಗಳು ಪರಸ್ಪರ ಮೇಲೆ ಗೂಂಡಾಗಿರಿ ನಡೆಸಿದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದ್ದು, ಇಂತಹ ಕೃತ್ಯಗಳ ಹಿಂದೆ ಡ್ರಗ್ಸ್ ಮಾಫಿಯಾಗಳ ಕರಾಳ ಕೈಗಳು ಅಡಗಿವೆಯೇ ಎಂಬ ಬಗ್ಗೆ ತನಿಖೆ ನಡೆಸುವುದು ಅತ್ಯಂತ ಅಗತ್ಯವಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಚಳವಳಿಗಳ ಪ್ರತಿನಿಧಿಗಳ ಸಭೆ ನಡೆಸಿ ಜಿಲ್ಲಾ ಮಟ್ಟದ ರ‍್ಯಾಗಿಂಗ್ ವಿರೋಧಿ ತಂಡ ರಚಿಸಬೇಕು ಎಂದು ಪಿಡಿಪಿ ಆಗ್ರಹಿಸಿದೆ. ಮುಂದಿನ ಕ್ರಮಗಳ ಭಾಗವಾಗಿ ಪಂಚಾಯತ್ ಆಡಳಿತ ಸಮಿತಿಗಳು ಶಾಲೆಗಳ ಸಹಭಾಗಿತ್ವದಲ್ಲಿ ಜಾಗೃತಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಅಂತಹ ಚಟುವಟಿಕೆಗಳು ಸುಲಭವಾಗಿ ಕಾರ್ಯಗತಗೊಳ್ಳುತ್ತವೆ ಮತ್ತು ಸಮೂಹಕ್ಕೆ ಉತ್ತಮ ತಲುಪುತ್ತವೆ ಅವು ಪ್ರಯೋಜನಕಾರಿಯಾಗುತ್ತವೆ ಎಂದು ಪಿಡಿಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ
ಪೈವಳಿಕೆ ರ‍್ಯಾಗಿಂಗ್ ಅಕ್ರಮಣಕ್ಕೆ ಒಳಗಾಗಿ ಕುಂಬಳೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ತಂವೀರ್ ಅಬ್ಬಾಸ್ ರನ್ನು ಪಿಡಿಪಿ ಮುಖಂಡರು ಸಂದರ್ಶಸಿ ವಿದ್ಯಾರ್ಥಿ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ..

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.