Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೃಷಿಕರ ದಿನಾಚರಣೆ - ಸ್ಥಳೀಯ ಬ್ಲೋಕ್ ಪಂಚಾಯತ್ ಸದಸ್ಯರಿಗೆ ಅಹ್ವಾನ ನೀಡದ ವರ್ಕಾಡಿ ಗ್ರಾಮ ಪಂಚಾಯತ್.

ಕೃಷಿಕರ ದಿನಾಚರಣೆ - ಸ್ಥಳೀಯ ಬ್ಲೋಕ್ ಪಂಚಾಯತ್ ಸದಸ್ಯರಿಗೆ ಅಹ್ವಾನ ನೀಡದ ವರ್ಕಾಡಿ ಗ್ರಾಮ ಪಂಚಾಯತ್.
ಮಂಜೇಶ್ವರ: ಇಲ್ಲಿನ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಕಾಡಿ ಕೃಷಿ ಭವನದಲ್ಲಿ ಆಗಸ್ಟ್ 17 ರಂದು ನಡೆದ ಕೃಷಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಸ್ಥಳೀಯ ವರ್ಕಾಡಿ ಡಿವಿಷನ್ ನ ಬ್ಲೋಕ್ ಪಂ. ಸದಸ್ಯರಾದ ಮೋಯ್ದಿನ್ ಕುಂಞ ತಲಕ್ಕಿ ಯವರಿಗೆ ಆಹ್ವಾನ ನೀಡದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ವರ್ಕಾಡಿ ಪಂ ಹಾಗೂ ಕೃಷಿಭವನ ಪ್ರಕಟಿಸಿದ ನೋಟಿಸಿನಲ್ಲೂ ಸ್ಥಳೀಯ ಬ್ಲೋಕ್ ಪಂ ಸದಸ್ಯರ ಹೆಸರು ಕಂಡುಬಂದಿಲ್ಲ. ಕೃಷಿಕರ ದಿನಾಚರಣೆಗೆ ಸಂಬಂಧಿಸಿ ಸರಕಾರದ ಸ್ಪಷ್ಟವಾದ ಸುತ್ತೋಲೆ ಇದ್ದು ಇದರಲ್ಲಿ ಸ್ಥಳೀಯ ಬ್ಲೋಕ್ ಪಂ ಹೆಸರನ್ನು ಒಳಪಡಿಸಲು ಆದೇಶವಿದ್ದರೂ ಸರಕಾರದ ಆದೇಶವನ್ನು ವರ್ಕಾಡಿ ಪಂ ಅಧಿಕೃತರು ಹಾಗೂ ಕೃಷಿ ಅಧಿಕಾರಿಗಳು ಉಲ್ಲಂಘಿಸಿದ್ದು ವಿವಾದಕ್ಕೆ ಕಾರಣವಾಗಿದೆ. ವರ್ಕಾಡಿ ಪಂ ಆಡಳಿತ ಎಡರಂಗದ ಕೈಯಲ್ಲಿದ್ದರೂ ಅದೇ ಪಕ್ಷದ ಬ್ರೋಕ್ ಪಂ ಸದಸ್ಯರನ್ನು ಕೃಷಿ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.