ಸಂಭ್ರಮದಿಂದ ನಡೆದ ದೇಶದ 78 ನೇ ಸ್ವಾತಂತ್ರೋತ್ಸವ. ದೆಹಲಿ ಸೇರಿದಂತೆ, ಮಂಜೇಶ್ವರದ ವಿವಿಧೆಡೆ ಧ್ವಜಾರೋಹಣ.
ಆಗಸ್ಟ್ 15, 2024
0
ಸಂಭ್ರಮದಿಂದ ನಡೆದ ದೇಶದ 78 ನೇ ಸ್ವಾತಂತ್ರೋತ್ಸವ. ದೆಹಲಿ ಸೇರಿದಂತೆ, ವಿವಿಧೆಡೆ ಧ್ವಜಾರೋಹಣ.
ಪೈವಳಿಕೆ: ಸುಭಾಷ್ ಫ್ರೆಂಡ್ಸ್ ಸರ್ಕಲ್ (ರಿ.) ಲಾಲ್ ಬಾಗ್ ಆಶ್ರಯದಲ್ಲಿ ಲಾಲ್ ಬಾಗ್ ನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಊರಿನವರ ಜೊತೆಯಲ್ಲಿ ಆಚರಿಸಲಾಯಿತು. ಉಮ್ಮರ್ ಮಾಸಿಕುಮೇರಿ ಧ್ವಜಾರೋಹಣ ಮಾಡಿದರು. ಕ್ಲಬ್ಬಿನ ಗೌರವಾಧ್ಯಕ್ಷರಾದ ಅಶೋಕ್ಎಂ.ಸಿ ಲಾಲ್ಬಾಗ್ ಸ್ವಾಗತಿಸಿ, ಪ್ರಸ್ತಾವಿಕಾವಾಗಿ ಮಾತನಾಡಿದರು. ಹರೀಶ್ ಪೂಜಾರಿ ಲಾಲ್ ಬಾಗ್ ಅಧ್ಯಕ್ಷತೆ ವಹಿಸಿದರು. ಸಿಹಿ ತಿಂಡಿ ಹಂಚಿ, ಕ್ಲಬ್ಬಿನ ಕಾರ್ಯದರ್ಶಿ ವಸಂತ ನಾಯ್ಕ್ ವಂದಿಸಿದರು.ಮಂಜೇಶ್ವರ: 78 ನೇ ಸ್ವಾತಂತ್ರೋತ್ಸವವನ್ನು ಮರ್ಸಿ ಅಮ್ಮನವರ ದೇವಾಲಯ ಮಂಜೇಶ್ವರ, ಭಾರತೀಯ ಕಥೋಲಿಕ ಯುವ ಚಂಚಲನ ಹಾಗೂ ಕಥೋಲಿಕ ಸಭಾ ಇದರ ಜಂಟಿ ಸಹಭಾಗಿತ್ವದಲ್ಲಿ ಮಂಜೇಶ್ವರ ಕುಂಡುಕೊಳಕೆ ಸಮುದ್ರ ದಡ ಸ್ವಚ್ಛತಾ ಅಭಿಯಾನದ ಮೂಲಕ ವಿಶೇಷ ರೀತಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲವೀನಾ ಮೊಂತೇರೋ, ಮಂಜೇಶ್ವರ ಚರ್ಚ್ ಫಾ| ಎಡ್ವಿನ್ ಫ್ರಾನ್ಸಿಸ್ ಪಿಂಟೋ, ಉಪಾಧ್ಯಕ್ಷರಾದ ವಿಜಿತ್ ಡಿ'ಸೋಜಾ, ಕಾರ್ಯದರ್ಶಿ ಕ್ರಿಶ್ಟಿನ್ ಟೀಚರ್, ಕೆಥೋಲಿಕ್ ಅಧ್ಯಕ್ಷರು ಜಾರ್ಜ್ ಮೊಂತೇರೋ, ಐಸಿವೈಎಮ್ ಅಧ್ಯಕ್ಷರು ರೆನ್ವಿಲ್ ವೇಗಸ್, ಅಲ್ಲದೇ ಸದಸ್ಯರು ಉಪಸ್ಥಿತರಿದ್ದರು.ದೈಗೋಳಿ:ದೇಶದೆಲ್ಲೆಡೆ 78 ನೆ ಸ್ವಾತಂತ್ರ್ಯ ದಿನಾಚರಣೆ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್ ವಿ ಹರ್ಷ ಮೆಲೋಡೀಸ್ ಹೊಸಂಗಡಿ ತಂಡದಿಂದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಯ ನಿರಾಶ್ರಿತರ ಜೊತೆ ಸತತ ಮೂರನೇ ವರ್ಷ ಆಚರಿಸಲಾಯಿತು. ಕಾರ್ಯಕ್ರಮದಂಗವಾಗಿ ತಂಡದ ಗಾಯಕ ಗಾಯಕಿಯರಿಂದ ದೇಶ ಭಕ್ತಿ ಮೂಡಿಸುವ ಗೀತೆಗಳು ಹಾಗೂ ವಿವಿಧ ಮನೋರಂಜನಾ ಆಟ ನೃತ್ಯಗಳೊಂದಿಗೆ ಆಶ್ರಮ ನಿವಾಸಿಗಳ ಮನಗೆದ್ದರು . ಈ ಸಂದರ್ಭದಲ್ಲಿ ಸೇವಾಶ್ರಮದ ವ್ಯವಸ್ಥಾಪಕರಾದ ಡಾ . ಉದಯ್ ಕುಮಾರ್ ನೂಜಿ ಹಾಗು ಡಾ.ಶಾರದಾ ಉದಯ್ ಕುಮಾರ್ ರವರು ತಂಡದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲು ಹೊದಿಸಿ ಅಭಿನಂದಿಸಿದರು.ಎಸ್ ವಿ ಹರ್ಷ ಮೆಲೋಡೀಸ್ ಹೊಸಂಗಡಿ ತಂಡದ ವ್ಯವಸ್ಥಾಪಕರಾದ ಪವನ್ ಹೊಸಂಗಡಿ, ಶೈಲು ಕುಂಪಲ, ಮಂಜುನಾಥ್ ಕೊಡ್ಲಮೊಗರು, ಮಂಜುನಾಥ್ ಸೊಂಕಾಲ್,ಶಿಲ್ಪ ಮಂಗಳೂರು,ನಾಗಿನಿ ಪವನ್ ಹೊಸಂಗಡಿ,ಸಬಿತಾ ಶೈಲು ಕುಂಪಲ,ತಂಡದ ಸಂಚಾಲಕರಾದ ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದರು.ಮಂಜೇಶ್ವರ: ದೇಶದಾದ್ಯಂತ ಆಚರಿಸುವ 78 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಂದ ನಡೆದ ಆಕರ್ಷಕ ಮೆರವಣಿಗೆಗೆ ನಿವೃತ್ತ ಸೇನಾಧಿಕಾರಿ ಸೀತಾರಾಮ ಶೆಟ್ಟಿ ಎಲಿಯಾಣ ರವರು ಚಾಲನೆಯಿತ್ತರು. ಬಳಿಕ ನಡೆದ ಧ್ವಜಾರೋಹಣವನ್ನು ಶಾಲಾ ಮುಖ್ಯ ಶಿಕ್ಷಕಿ ಮಾಲತಿ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿ ಕುಳೂರು, ನಿವೃತ್ತ ಸೇನಾಧಿಕಾರಿ ಸೀತಾರಾಮ ಶೆಟ್ಟಿ ಎಲಿಯಾಣ, ನಿವೃತ್ತ ಕುಳೂರು ಶಾಲಾ ಶಿಕ್ಷಕರಾದ ಶ್ಯಾಮ್ ಭಟ್ ಆಗಮಿಸಿ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು, ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ನಾರಾಯಣ ನೈಕ್ ನಡುಹಿತ್ಲು, ಯುವ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಉಷಾ ಆಚಾರ್ಯ ಆದರ್ಶ ನಗರ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಅನುಪಮ ಉಪಸ್ಠಿತರಿದ್ದು ಶುಭ ಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಸತೀಶ್ ಎಲಿಯಾಣ ಹಾಗೂ ಹಳೆ ವಿದ್ಯಾರ್ಥಿ ಶಶಿಕುಮಾರ್ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಯೂ, ಸುಧೀರ್ಘ 31 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹಲವಾರು ಪದಕಗಳನ್ನು ಪಡೆದ ನಿವೃತ್ತ ಸೇನಾಧಿಕಾರಿಯೂ ಆಗಿರುವ ಸೀತಾರಾಮ ಶೆಟ್ಟಿ ಎಲಿಯಾಣ ಹಾಗೂ ಕುಳೂರು ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಶ್ಯಾಮ್ ಭಟ್ ರವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು. ಶಾಲೆಯಲ್ಲಿ ಹಲವಾರು ವರ್ಷಗಳಿಂದ ಅಡುಗೆ ಕೆಲಸ ಮಾಡಿ ಸೇವೆ ಸಲ್ಲಿಸುತ್ತಿರುವ ಜಲಜ ಪೊಯ್ಯೇಲು ರವರನ್ನು ಶತಮಾನೋತ್ಸವದ ಪರವಾಗಿ ಗೌರವಿಸಲಾಯಿತು. ಬಳಿಕ ಶಾಲಾ ಶಿಕ್ಷಕಿ ಅಶ್ವಿನಿ ಎಂ ರವರು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಬಹುಮಾನದ ಪ್ರಾಯೋಜಕತ್ವವನ್ನು ಜಯರಾಜ್ ಶೆಟ್ಟಿ ಚಾರ್ಲ ಹಾಗೂ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು.
ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಶ್ವೇತ ಇ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಎಲ್ಲರಿಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ವರ್ಕಾಡಿ: ಭಾರತವಿಂದು ವಿಶ್ವ ಗುರುವಾಗುವತ್ತ ಸಾಗುತ್ತಿದ್ದು,ಭಾರತ ಇಡೀ ಜಗತ್ತಿಗೆ ಅತ್ಯಂತ ದೊಡ್ಡ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ವಾಗಿ ಬೆಳೆದು ನಿಂತಿದ್ದು, ಇದಕ್ಕೆಲ್ಲ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರವನ್ನು ಒದಗಿಸಿ ಕೊಟ್ಟಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳದೆ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಶ್ರೀ ಸಾಯಿ ನಿಕೇತನ ಸೇವಾ ಸಂಸ್ಥೆಯ ಮುಖ್ಯಸ್ಥ ಡಾ. ಉದಯ್ ಕುಮಾರ್ ನೂಜಿ
ಹೇಳಿದರು. ಅವರು ಶ್ರೀ ಸಾಯಿನಿಕೇತನ ಸೇವಾಶ್ರಮ ಸಂಸ್ಥೆಯಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯಲ್ಲಿ ಮಾತನಾಡಿದರು. ಸ್ವಾತಂತ್ರ್ಯೋತ್ಸವ
ದಿನಾಚರಣೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಡಾ.ಶಾರದಾ, ಸಿಬ್ಬಂದಿ ವರ್ಗ, ಆಶ್ರಮವಾಸಿ ಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮಂಜೇಶ್ವರ-ಉಪ್ಪಳ ದ ಅಧ್ಯಕ್ಷರು ಮತ್ತು ಸದಸ್ಯರು ಆಶ್ರಮಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಹಣ್ಣು ಹಂಪಲು ಹಂಚಿದರು.
ಬಳಿಕ ಎಸ್.ವಿ ಹರ್ಷ ಮೆಲೋಡಿಸ್ ಹೊಸಂಗಡಿ ಇವರ ವತಿಯಿಂದ ಸ್ವಾಮಿ ಪ್ರೀಯ ಸೌಂಡ್ಸ್ ಅಂಡ್ ಲೈಟಿಂಗ್ ಸಹಕಾರದಿಂದ ಮನೋರಂಜನಾ ರಸಮಂಜರಿ ಕಾರ್ಯಕ್ರಮ ನಡೆಯಿತು.ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಇದರ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಸರಗೋಡು ನಗರದ 32ನೇ ವಾರ್ಡಿನ ಅಂಗನಾಡಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ವಾರ್ಡ್ ಕೌನ್ಸಿಲರ್ ಶ್ರೀಮತಿ ಶ್ರೀಲತಾ ಟೀಚರ್ ಧ್ವಜಾರೋಹಣಗೈದು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಲಕ್ಷಾಂತರ ಮಂದಿ ತ್ಯಾಗ ಬಲಿದಾನಗೈದ ಚರಿತ್ರೆಗಳನ್ನು ವಿವರಿಸಿದರು ಹಾಗೂ ಪ್ರಸ್ತುತ ಸರಕಾರ ಅಂಗನವಾಡಿಗಳಿಗೆ ಜ್ಯಾರಿಗೆ ತಂದ ವಿವಿಧ ಯೋಜನೆ ಸದುಪಯೋಗ ಪಡಿಸುವ ಕುರಿತು ಮಾತನಾಡಿ ಯೂನಿಟ್ ವತಿಯಿಂದ ಮಕ್ಕಳ ತೂಕ ನೋಡುವ ಅಳತೆ ಯಂತ್ರ ಅಂಗನವಾಡಿ ಅಧ್ಯಾಪಿಕೆಯವರಿಗೆ ಹಸ್ತಾಂತರಿಸಿ ಶುಭಹಾರೈಸಿದರು. ಕಾಸರಗೋಡು ವನಿತಾ ಸೆಲ್ ಪೋಲಿಸರುಗಳಾದ ಸನಿಲಾ ಮತ್ತು ಜಯಲಕ್ಷ್ಮಿ ಅವರು ಸಿಹಿ ತಿಂಡಿ ವಿತರಿಸಿದರು, ವಾರ್ಡ್ ಆಶಾ ಕಾರ್ಯಕರ್ತೆ ಶ್ರೀಮತಿ ಶಶಿಕಲಾ ಶುಭಹಾರೈಸಿದರು. ಈ ಸಂದರ್ಭದಲ್ಲಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ, ಕಾಸರಗೋಡು ವಲಯ ಅಧ್ಯಕ್ಷರಾದ ವಾಸು.ಎ, ವಲಯ ಜತೆ ಕಾರ್ಯದರ್ಶಿ ಮನೋಜ್ ಕುಮಾರ್, ಯೂನಿಟ್ ಉಪಾಧ್ಯಕ್ಷ ಹಾಗೂ ಸಾಂತ್ವನ ಕೋರ್ಡಿನೇಟರ್ ಗಣೇಶ್ ರೈ, ಕೋಶಾಧಿಕಾರಿ ಅಮಿತ್ ಕುಮಾರ್, ಜತೆ ಕಾರ್ಯದರ್ಶಿ ವಿಶಾಖ್, ಪಿ.ಆರ್.ಒ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಸದಸ್ಯ ಮೌನೇಶ್ ಕುಮಾರ್, ಅಂಗನವಾಡಿ ಪುಟಾಣಿಗಳು ಹೆತ್ತವರು ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ ಅಂಗನವಾಡಿ ಅದ್ಯಾಪಿಕೆ ಶ್ರೀಮತಿ ಪುಷ್ಪಾ ಅವರು ಧನ್ಯವಾದ ನೀಡಿದರು.ಮಂಜೇಶ್ವರ: ದೇಶದಾದ್ಯಂತ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕೆಲವು ಕಡೆ ಅತಿ ಸರಳವಾಗಿ ಆಚರಣೆ ಮಾಡಿದರೆ, ಇನ್ನು ಕೆಲವೆಡೆ ಅದ್ದೂರಿಯಾಗಿ ಆಚರಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ನಡೆದ ಮಕ್ಕಳ ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿದೆ. ವಿಶೇಷ ಚೇತನ ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಮಾತನಾಡಿದರು. ತಮ್ಮ 98 ನಿಮಿಷಗಳ ಸುದೀರ್ಘ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆಚರಣೆಗಳ ಥೀಮ್ – ವಿಕಸಿತ್ ಭಾರತ್ 2047 ಬಗ್ಗೆ ಮಾತನಾಡಿದ್ದಾರೆ. ವಿಕಸಿತ್ ಭಾರತ್ 2047 ಗಾಗಿ, ನಾವು ದೇಶವಾಸಿಗಳಿಂದ ಸಲಹೆಗಳನ್ನು ಆಹ್ವಾನಿಸಿದ್ದೇವೆ. ನಾವು ಸ್ವೀಕರಿಸಿದ ಅನೇಕ ಸಲಹೆಗಳು ನಮ್ಮ ನಾಗರಿಕರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ರಾಷ್ಟ್ರದ ಜನರು ಅಂತಹ ದೊಡ್ಡ ಕನಸುಗಳನ್ನು ಹೊಂದಿರುವಾಗ, ಅದು ನಮ್ಮ ಆತ್ಮವಿಶ್ವಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ನಾವು ಹೆಚ್ಚು ದೃಢನಿಶ್ಚಯವನ್ನು ಹೊಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ವಿಷಯದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದಾರೆ. ದೇಶ, ಸಮಾಜ, ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳ ತ್ವರಿತ ತನಿಖೆ, ಅಪರಾಧವೆಸಗುವವರಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯನ್ನು ನೀಡಬೇಕು. ಇದು ಸಮಾಜದಲ್ಲಿ ಆತ್ಮವಿಶ್ವಾಸವನ್ನು ತುಂಬಲು ಮುಖ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದು ದೇಶದ ಸುವರ್ಣ ಯುಗ ಎಂದು ಘೋಷಿಸಿದ ಪ್ರಧಾನಮಂತ್ರಿಯವರು, ಕ್ಷೇತ್ರಗಳಾದ್ಯಂತ ಅಭಿವೃದ್ಧಿ, ಆರ್ಥಿಕ ಸುಧಾರಣೆಗಳು ಮತ್ತು ದೇಶದ ಯುವಜನರಿಗೆ ಭರವಸೆಗಳನ್ನು ನೀಡುವ ಹಲವಾರು ಯೋಜನೆಗಳನ್ನು ವಿವರಿಸಿದರು. ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸುವುದರಿಂದ ಹಿಡಿದು ಜಾತ್ಯತೀತ ನಾಗರಿಕ ಸಂಹಿತೆಯವರೆಗೆ ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯವರೆಗೆ, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ನಾವು ನಿರ್ಣಯದೊಂದಿಗೆ ಮುಂದುವರಿಯುತ್ತಿದ್ದೇವೆ ಆದರೆ ಕೆಲವು ಜನರು ಪ್ರಗತಿಯನ್ನು ಕಾಣುವುದಿಲ್ಲ ಅಥವಾ ಅವರಿಗೆ ಪ್ರಯೋಜನವಾಗದ ಹೊರತು ಭಾರತದ ಒಳಿತನ್ನು ಯೋಚಿಸುವುದಿಲ್ಲ.ದೇಶವು ಈ ಬೆರಳೆಣಿಕೆಯ ನಿರಾಶಾವಾದಿ ಜನರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಮೋದಿ ವಿಪಕ್ಷ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರ ಮಾಡಿರುವ ಸತತ 11 ನೇ ಭಾಷಣದಲ್ಲಿ ಸುದೀರ್ಘ ಭಾಷಣ ಇದಾಗಿದೆ. 98 ನಿಮಿಷಗಳ ಈ ಭಾಷಣವು 2016 ರ ಭಾಷಣದಲ್ಲಿ ಅವರ ಹಿಂದಿನ 96 ನಿಮಿಷಗಳ ದಾಖಲೆಯನ್ನು ಮೀರಿಸಿದೆ. 2017 ರಲ್ಲಿ ಅವರು ಮಾಡಿದ ಚಿಕ್ಕ ಭಾಷಣ 56 ನಿಮಿಷಗಳ ಅವಧಿಯದ್ದಾಗಿತ್ತು. ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಗಳು ಸರಾಸರಿ 82 ನಿಮಿಷಗಳು. ಅಂದಹಾಗೆ ಇದು ಭಾರತದ ಇತಿಹಾಸದಲ್ಲಿ ಯಾವುದೇ ಇತರ ಪ್ರಧಾನ ಮಂತ್ರಿಗಳು ಮಾಡಿದ ಭಾಷಣದ ಅವಧಿಗಿಂತ ಹೆಚ್ಚು. ಮೋದಿಯವರಿಗಿಂತ ಮೊದಲು ಜವಾಹರಲಾಲ್ ನೆಹರು ಅವರು 72 ನಿಮಿಷಗಳ ಸುದೀರ್ಘ ಭಾಷಣವನ್ನು ಮಾಡಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರು 1954 ಮತ್ತು 1966 ರಲ್ಲಿ ಕ್ರಮವಾಗಿ 14 ನಿಮಿಷಗಳಲ್ಲಿ ಅತಿ ಕಡಿಮೆ ಅವಧಿಯ ಭಾಷಣ ಮಾಡಿದ್ದು, ವಿಶೇಷವಾಗಿತ್ತು.ಕಾಸರಗೋಡು ವಿದ್ಯಾನಗರ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಪರೇಡ್ ನಲ್ಲಿ ವಿದ್ಯುತ್ ಸಚಿವ ಕೆ. ಕೃಷ್ಣನ್ ಕುಟ್ಟಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಕಾಸರಗೋಡು ಜಿಲ್ಲಾಧಿಕಾರಿ ಇಂಪಶೇಖರನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ವಿವಿಧ ಪೆರೇಡ್ ಗಳು ನಡೆಯಿತು.ಕೇರಳ ತುಳು ಅಕಾಡೆಮಿಯ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವವನ್ನು ತುಳು ಭವನದಲ್ಲಿ ಆಚರಿಸಲಾಯಿತು. ತುಳು ಅಕಾಡೆಮಿ ಅಧ್ಯಕ್ಷರಾದ ಶ್ರೀ ಕೆ ಆರ್ ಜಯಾನಂದರವರು ಧ್ವಜ ಆರೋಹಣಗೈದರು. ಬಳಿಕ ಮಾತನಾಡಿದ ಅವರು 1857ರಲ್ಲಿ ನಡೆದ ಭಾರತದ ಒಂದನೇ ಸ್ವಾತಂತ್ರ ಸಮರವು ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಆರಂಭಕ್ಕೆ ಹೊಸ ಸಂಚಲನವನ್ನು ಸೃಷ್ಟಿಸಿತು ಎಂದರು. ತುಳು ನಾಡಿನಲ್ಲಿ 1837 ರಲ್ಲಿ ನಡೆದ "" ಮಂಗಳೂರು ಕ್ರಾಂತಿ "" ಈ ಭಾಗದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಹೊಸ ಆವೇಶವನ್ನು ಸೃಷ್ಟಿಸಿತು ಎಂದರು. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ನಂತರ ಎಲ್ಲಾ ವಿಭಾಗದ ಜನರು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ಆಕರ್ಷಿತರಾದರು. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಅರವಿಂದ ಭೋಸ್ ಮೊದಲಾದ ವಿಪ್ಲವ ಕ್ರಾಂತಿಕಾರಿ ವೀರರ ತ್ಯಾಗ ನಮಗೆಲ್ಲ ಆದರ್ಶಪ್ರಾಯವಾಗಿದೆ ಎಂದರು. ಈ ರೀತಿ ಅಹೋರಾತ್ರಿ ನಡೆಸಿದ ಹೋರಾಟದ ಫಲವಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಈಗ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು. ಕೇರಳ ತುಳು ಅಕಾಡೆಮಿ ಸೆಕ್ರೆಟರಿ ಶ್ರೀ ಪ್ರದೀಪ್ ಕುಮಾರ್.ಬಿ . ಸ್ವಾಗತಿಸಿದರೆ , ಅಕಾಡೆಮಿ ಸದಸ್ಯರಾದ ಶ್ರೀಮತಿ ಕೃಷ್ಣವೇಣಿ ಟೀಚರ್ ವಂದಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ಗಂಗಾಧರ ದುರ್ಗಿಪಳ್ಳ , ಬಿ. ಎಂ. ರಾಮಯ್ಯ ಶೆಟ್ಟಿ ಲೈಬ್ರರಿ ಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.ಬಾಯಾರು: ದೇಶ ಪರಕೀಯರ ಆಳ್ವಿಕೆಗೂ ಮುನ್ನ ಸನಾತನ ಧರ್ಮದ ಮೂಲಕ ದೇಶ ಸಂಪತ್ಬರಿತವಾಗಿತ್ತು ,ಆದರೆ ಮೈಮರೆವಿನಿಂದ ನಾವು ಪರರ ಪ್ರಭುತ್ವದ ಕಷ್ಟವನ್ನು ಅನುಭವಿಸಬೇಕಾಯಿತು,ದೇಶದ ಪ್ರಗತಿಗಾಗಿ ಕೈಜೋಡಿಸಿ ,ದೇಶಪ್ರೇಮವನ್ನು ಬೆಳೆಸೋಣ, ಎಂದು ಅಗಸ್ಟ್ ೧೫ರಂದು ಪ್ರಶಾಂತಿ ವಿದ್ಯಾಕೇಂದ್ರ ಬಾಯಾರಿನಲ್ಲಿ ಆಚರಿಸಲಾದ ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ, ಧ್ವಜಾರೋಹಣವನ್ನು ಕೈಗೊಂಡು ಮಾತನಾಡಿದ ತಲೆಂಗಳ ನಾರಾಯಣ ಭಟ್ ಅವರು ಸ್ವಾವಲಂಬಿಯಾಗಿರುವುದೇ ನಿಜವಾದ ಸ್ವಾತಂತ್ರ್ಯ, ಎಎಲ್ಲಾ ವಿದ್ಯಾರ್ಥಿಗಳು ದೇಶದ ಉತ್ತಮ ನಾಗರಿಕರಾಗುವುದರ ಜೊತೆಗೆ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಸಿ. ರಾಮಚಂದ್ರರವರು 'ನಮ್ಮ ಹಿರಿಯರು ಅನೇಕ ನಾಯಕರ ಮಾರ್ಗದರ್ಶನದಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಭಾಗಿಯಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಇಂತಹ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಅಗತ್ಯವಿದೆ' ಎಂದು ಹೇಳಿ ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದಂತಹ ಅನುಭವ ಪ್ರಶಾಂತಿಯ ಶಾಲೆಯಲ್ಲಿ ದೊರೆಯಿತು' ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಸಂಸ್ಥೆಯ ಪ್ರಾಂಶುಪಾಲರಾದ ವಾಮನನ್ ರವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬರೋಡಾ ಬ್ಯಾಂಕ್ ವ್ಯವಸ್ಥಾಪಕರಾದ ವಿಶಾಖ್ ಕೆ ವಿಮಲ್ ರವರು, ಪ್ರಕಾಶ್ ಬರ್ಲ ಬದಿಯಡ್ಕ, ಶಾಲೆಯ ಹಳೇಯ ವಿದ್ಯಾರ್ಥಿ
ಅಜಯ್ ರಾಥೋಡ್, ರವರು ಶುಭಾಶಂಸನೆಗೈದರು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ವ್ಯವಸ್ಥಾಪಕರಾದ ಹಿರಣ್ಯ ಮಹಾಲಿಂಗ ಭಟ್, ಟ್ರಸ್ಟಿನ ಸದಸ್ಯರಾದ ಸದಾಶಿವ ಭಟ್, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀಹರಿ ಭಟ್,ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್ ,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಗಣ್ಯರನ್ನು ಶಿಕ್ಷಕಿಯಾದ ಸ್ವಪ್ನರವರು ವಂದಿಸಿದರು. ಶಿಕ್ಷಕರಾದ ಮಹೇಶ್ ಪೈ ಹಾಗೂ ನಿತ್ಯಾನಂದ ಕೆ.ಆರ್ ಬೇಕೂರು ರವರು ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು .ಬಾಡೂರು: ಶ್ರೀ ದುರ್ಗಾ ಯುವಕ ಸಂಘ ಇದರ ವತಿಯಿಂದ ಕಛೇರಿ ಪರಿಸರದಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂಘದ ಗೌರವಾಧ್ಯಕ್ಷರು ಕೋಳಾರು ಶ್ರೀ ಸತೀಶ್ಚಂದ್ರ ಭಂಡಾರಿ ಅವರು ಧ್ವಜಾರೋಹಣ ಗೈದು, ಸಂಘದ ಕಾರ್ಯಕರ್ತ ಅಭಿತ್ ತೋಟ ಅವರು ಸ್ವಾತಂತ್ರ್ಯ ದಿನದ ಬಗ್ಗೆ ಔಪಚಾರಿಕ ಮಾತುಗಳನಿತ್ತು ಶುಭಾಂಶನೆ ನೀಡಿದರು. ತದನಂತರ ಸಿಹಿತಿಂಡಿ ವಿತರಿಸಿ ರಾಷ್ಟ್ರ ಗೀತೆ ಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಕಾರ್ಯಕ್ರಮದ ಸ್ವಾಗತ ವನ್ನು ಸಂಘದ ಕಾರ್ಯದರ್ಶಿ ಭರತ್ ಬಾಡೂರು ಹಾಗೂ ಧನ್ಯವಾದ ಸಂಘದ ಅಧ್ಯಕ್ಷರು ಮನೋಜ್ ಕುಮಾರ್ ಅವರು ನೀಡಿದರು.ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ 78 ವರ್ಷದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಕುಲಾಲ ಸಂಘದ ವಠಾರದಲ್ಲಿ ಜರಗಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಆನಂದ ಮಾಸ್ಟರ್ ಧ್ವಜಾರೋಹಣ ಗೈದರು ಮಂಜೇಶ್ವರ ಪಂಚಾಯತ್ ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಯುತ ಯಾಧವ ಬಡಾಜೆ. ಹಾಗು ಮಜಿಭೈಲ್ ಕೋಪರೆಟಿವ್ ಸೊಸೈಟಿ ಕಾರ್ಯದರ್ಶಿಯಾದ ಶ್ರೀಯುತ ರಾಮದಾಸ್ ಕಡಂಬಾರ್ ಮತ್ತು ಕುಲಾಲ ವೇಧಿಕೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು ಈಶ್ವರ ಮಾಸ್ಟರ್ ಸ್ವಾಗತಿಸಿದರು ಕಿಶನ್ ಕಣ್ವತೀರ್ಥ ಧನ್ಯವಾದ ನಿಡಿದರು.ಅರಸು ಪ್ರೆಂಡ್ಸ್ ಕ್ಲಬ್ (ರಿ.) ಮಜಲು ಇದರ ವತಿಯಿಂದ 78 ವರ್ಷದ ಸ್ವಾತಂತ್ರೋತ್ಸವ ದಿನಾಚರಣೆಯೂ ಮಜಲು ಕ್ಲಭಿನ ವಠಾರದಲ್ಲಿ ಜರಗಿತು ಕ್ಲಭಿನ ಗೌರವಾಧ್ಯಕ್ಷರಾದ ಶ್ರೀಯುತ ಕೃಷ್ಣ ಶಿವಕೃಪ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯಿತ್ ಸದಸ್ಯರಾದ ರಾಜೇಶ ಮಜಲು ಧ್ವಜಾರೋಹಣ ಗೈದರು ಕ್ಲಭಿನ ಅಧ್ಯಕ್ಷ ರಾದ ಶ್ರೀಯುತ ಮೋಹನ ಮಜಲು. ಮಜಿಬೈಲ್ ಕೋಪರೆಟಿವ್ ಸೊಸೈಟಿಯ ಕಾರ್ಯದರ್ಶಿಯಾದ ಶ್ರೀಯುತ ರಾಮದಾಸ್ ಕಡಂಬಾರ್ .ಕ್ಲಭಿನ ನಿಕಟ ಪೂರ್ವ ಅಧ್ಯಕ್ಷರಾದ ರವಿ ಮಜಲು. ರಾಮ ಮಜಲು. ಹಾಗು ಕ್ಲಭಿನ ಸದಸ್ಯರು ಮತ್ತು ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು ಅಕ್ಷಯ ಮಜಲು ಸ್ವಾಗತಿಸಿದರು ಹರೀಶ್ ಮಜಲು ಧನ್ಯವಾದ ನೀಡಿದರು.ಯುವಕ ಸಂಘ (ರಿ.) ಬಡಾಜೆ ಮಂಜೇಶ್ವರ ಇದರ 78 ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9.00 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಹೊಸಂಗಡಿ Cure & Care ಆಸ್ಪತ್ರೆಯ ಡೈರೆಕ್ಟರ್ & ಡಾಕ್ಟರ್ ಶ್ರೀಯುತ ವೆಂಕಟ್ ರೆಡ್ಡಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಸ್ಫೂರ್ತಿ ವಿದ್ಯಾನಿಕೇತನ ಶಾಲೆಯ ಮುಖ್ಯಸ್ಥರಾದ ಶ್ರೀಯುತ ಮಧುಸೂದನ್ ಬಳ್ಳಕುರಾಯ, ಸಂಘದ ಅಧ್ಯಕ್ಷರಾದ ಉಮೇಶ್ ಕಲ್ಲಕಂಡ, ಕಾರ್ಯದರ್ಶಿಯಾದ ಚೇತನ್ ಕಲ್ಲಕಂಡ, ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಮಾತೃ ಮಂಡಳಿಯ ಸದಸ್ಯರುಗಳು ಭಾಗವಹಿಸಿದ್ದರು..ಬಿಲಾಲ್ ವಾಮಂಜೂರು ಮಸೀದಿಯಲ್ಲಿ ಬಿ.ಎಸ್ ಇಬ್ರಾಹಿಂ ಹಾಜಿ ಬಿಲಾಲ್ ಮಸೀದಿ ಸಂಯೋಜಕರಿಂದ ಧ್ವಜಾರೋಹಣ ನೆರವೇರಿಸಲಾಯಿತು.ಎ.ಎಲ್.ಪಿ ಶಾಲೆ ಕಿಳಿಂಗಾರಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ಶಾಲಾ ವ್ಯವಸ್ಥಾಪಕರಾದ ಕೆ.ಎನ್ ಕೃಷ್ಣ ಭಟ್ ಧ್ವಜಾರೋಹಣಗೈದರು.ಮಂಜೇಶ್ವರ ಪಾವೂರು ಮಹಾತ್ಮಾ ಗಾಂಧಿ ಸರ್ಕಲ್ ನಲ್ಲಿ ನಡೆದ 78ನೇ ಸ್ವಾತಂತ್ರಕ್ಕೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಧ್ವಜಾರೋಹಣ ನೆರವೇರಿಸಿದರು ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ತ್ಯಂಪಣ್ಣ ರೈ ಅಶೋಕ್ ಪಾವೂರು ದಯಾನಂದ ಪಾವೂರು ಸಿದ್ದಿಕ್ ಪಾವೂರು ಇನ್ನು ಹಲವಾರು ನಾಗರಿಕರು ಭಾಗವಹಿಸಿದರು ಈ ಕಾರ್ಯಕ್ರಮವನ್ನು ಪಾವೂರು ನಾಗರೀಕ ಸಮಿತಿ ಆಯೋಜನೆ ಮಾಡಿದೆ. ಮಂಜೇಶ್ವರ ಪಾವೂರು ಅಂಗನವಾಡಿಯಲ್ಲಿ ನಡೆದ 78 ನೇ ಸ್ವಾತಂತ್ರಕ್ಕೆ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಕಮರುಂಣ್ಣಿಸ ಮುಸ್ತಾಪ ಧ್ವಜಾರೋಹಣ ಮಾಡಿದರು. ಕಾರ್ಯಕ್ರಮದಲ್ಲಿ ಹಾರಿಸ್ ಪಾವೂರು ಗಣೇಶ್ ಪಾವೂರು ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತೆ ಶೈಲಜಾ ಸ್ವಾಗತಿಸಿ ಸಹಾಯಕಿ ಸುಚಿತ್ರ ವಂದಿಸಿದರು.ಮಂಗಳೂರು: ವಿದ್ವತ್ ಪಿಯು ಕಾಲೇಜಿನಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಯವರು ಧ್ವಜಾರೋಹಣ ನೆರವೇರಿಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಆಡಳಿತಾಧಿಕಾರಿಗಳಾದ ಶ್ರೀ ಚಂದ್ರಶೇಖರ ಗೌಡ ರವರು ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ ಬಲಿದಾನದ ಇತಿಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಂತರ ವಿದ್ವತ್ ಪಿಯು ಕಾಲೇಜಿನ ತನ್ನ ಪ್ರಪ್ರಥಮ
ಸ್ವಾತಂತ್ರ್ಯ ದಿನಾಚರಣೆಯನ್ನ ಸ್ಮರಣೀಯ ಮಾಡಲು “ವಿಜ್ಞಾನ-ವಿಸ್ಮಯ ಮತ್ತು ಕುತೂಹಲ” ಎಂಬ ಶೀರ್ಷಿಕೆಯಡಿಯಲ್ಲಿ ಬೆಳಗ್ಗೆ 11.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ವಿನೂತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಜಗತ್ತಿನ ವಿಸ್ಮಯಕ್ಕೆ ಒಳಗಣ್ಣು ತೆರೆದಿಟ್ಟು, ಅನುಭವಿಸಿ, ಅರ್ಥೈಸಿ, ವಿವೇಚನೆಗೊಳಪಡಿಸುವ ವಿಶೇಷ ಸಂವಾದ ಇದಾಗಿತ್ತು, ಯುವ ಮನಸ್ಸುಗಳ ಮೇಲೆ ವೈಜ್ಞಾನಿಕ ವಿಶ್ಲೇಷಣೆಯ ಪ್ರಭಾವ ಬೀರಿ ಊಹೆಗೆ ನಿಲುಕದ ಪ್ರಕೃತಿಯ ವಿಸ್ಮಯವನ್ನು ಅರ್ಥೈಸಿಕೊಳ್ಳುವ ಒಂದು ವಿಶೇಷ ಪ್ರಯತ್ನ ಇದಾಗಿತ್ತು. ಸಾಂಪ್ರದಾಯಿಕ ಪಾಠ-ಪ್ರವಚನ ಮತ್ತು ಪರೀಕ್ಷಾ ಪದ್ಧತಿಗಿಂತ ವಿಭಿನ್ನವಾಗಿ ಆಲೋಚಿಸುವ ಪ್ರಯತ್ನ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ. ಮಂಡಗಳಲೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ಎಮ್.ಎಸ್. ಹಾಗೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರತಾಪ್ ದೊಡ್ಡಮನೆ ಅವರು ತಮ್ಮ ಸುದೀರ್ಘ ಶೈಕ್ಷಣಿಕ ಅನುಭವದ ಆಧಾರದ ಮೇಲೆ ವಿಜ್ಞಾನದ ವಿಸ್ಮಯವನ್ನು ವ್ಯಾಖ್ಯಾನಿಸಿದರು. ಈ ಅಪರೂಪದ ಕಾರ್ಯಾಗಾರಕ್ಕೆ 7 ಪ್ರೌಢಶಾಲಾ ಹಾಗೂ ಪಿಯು ಕಾಲೇಜಿನ 52 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂವಾದ ಕಾರ್ಯಗಾರದಲ್ಲಿ ಉತ್ತಮ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಲಾಯಿತು. ಈ ಅರ್ಥಪೂರ್ಣ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.ಮಂಗಳೂರಿನ ಹಂಪನ್ ಕಟ್ಟೆ ಜಂಕ್ಷನ್ ನಲ್ಲಿ ಕೆನರಾ ಜೂವೆಲ್ಲೆರ್ಸ್ ನ ಎದುರು ಮೂಡಬಿದ್ರಿಯ ಎಸ್ ಕೆ ಎಫ್ ಎಲ್ಲಿಕ್ಸರ್ ರವರು ಸಾರ್ವಜನಿಕರಿಗೆ ಕುಡಿಯುವ (ತಂಪು ಸಾದ, ಬಿಸಿ) ನೀರಿನ ವ್ಯವಸ್ಥೆಯನ್ನು ಸಂಸದರಾದ ಕ್ಯಾ. ಬ್ರಿಜೇಶ್ ಚೌಟರವರು ಸ್ವಾತಂತ್ರ ದಿನದಂದು ಬೆಳಿಗ್ಗೆ ಉದ್ಘಾಟಿಸಿದರು. ಮಂಗಳೂರಿನ ಹೃದಯಭಾಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಭಾರತದ ಸ್ವಾತಂತ್ಯೋತ್ಸವ ಪುಣ್ಯದ ದಿನದಂದು ಮಾಡಿದ ಎಸ್ ಕೆ ಎಫ್ ಎಲ್ಲಿಕ್ಸರ್ ಇವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕರಾದ ವೇದವ್ಯಾಸ ಡಿ ಕಾಮತ್, ಮ ನ ಪಾ ಮೇಯರ್ ಸುಧೀರ್ ಶೆಟ್ಟಿ ಶುಭ ಹಾರೈಸಿದರು. ಎಸ್ ಕೆ ಎಫ್ ಎಲ್ಲಿಕ್ಸರ್ ಆಡಳಿತ ನಿರ್ದೇಶಕರಾದ ಡಾ. ಜಿ ರಾಮಕೃಷ್ಣ ಆಚಾರ್ ಸ್ವಚ್ ಭಾರತ್ , ಪ್ಲಾಸ್ಟಿಕ್ ಮುಕ್ತ ,ಯೋಜನೆ ಅನುಷ್ಠಾನ ಗೊಳಿಸುವ ಯೋಜನೆಯಲ್ಲಿ ಒಂದಾದ ನೀರನ್ನು ಸಾರ್ವಜನಿಕರಿಗೆ ನೀಡುವ ಸಧುದ್ದೇಶದಿಂದ ಈ ಒಂದು ಕುಡಿಯುವ ನೀರಿನ ವ್ಯವಸ್ಥೆ ಎಸ್ ಕೆ ಎಫ್ ಎಲ್ಲಿಕ್ಸರ್ ಮಾಡಿದೆ ಎಂದರು. ಕೆನರಾ ಜೂವೆಲ್ಲೆರ್ಸ್ ನ ಧನಂಜಯ ಪಾಲ್ಕೆ 1905 ನೇ ಇಸವಿಯಲ್ಲಿ ಅಪ್ಪಣ್ಣ ಎಂಬವರು ಇದೇ ಜಾಗದಲ್ಲಿ ಬಾವಿಯಿಂದ ನೀರು ಎಳೆದು ಸಾರ್ವಜನಿಕರಿಗೆ ನೀರು ನೀಡುತ್ತಿದ್ದರು ಅಪ್ಪಣ್ಣ ಕಟ್ಟೆ ಇದ್ದುದು ಬ್ರಿಟಿಷರ ಕಾಲದಲ್ಲಿ ಹಂಪನ್ ಕಟ್ಟೆ ಎಂದು ಆಯಿತು. ಇಂದಿನ ಆಧುನಿಕ ಯುಗದಲ್ಲೂ ಪಾರಂಪರಿಕ ಬಾವಿಕಟ್ಟೆ ಯನ್ನು ಉಳಿಸಿಕೊಂಡು ಎಸ್ ಕೆ ಎಫ್ ಎಲ್ಲಿಕ್ಸರ್ ನವರು ನೀಡಿದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಇದಕ್ಕೆ ನಿರಂತರ ನೀರು ಸರಬರಾಜನ್ನು ಕೆನರಾ ಜೂವೆಲ್ಲೆರ್ಸ್ ವತಿಯಿಂದ ಯಿಂದ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಎಸ್ ಕೆ ಎಫ್ ಎಲ್ಲಿಕ್ಸರ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಡಾ. ಲಕ್ಷ್ಮೀಶ್ ರೈ, ಎಕ್ಸಕ್ಯೂಟಿವ್ ಡೈರೆಕ್ಟರ್
ವಿಜಿತ್ ಜೈನ್, ಮಾರ್ಕೆಟಿಂಗ್ ಮ್ಯಾನೇಜರ್
ಶ್ರುತಿ ವಿ ಸಾಲಿಯಾನ್
ಟೆಕ್ನಿಷಿಯನ್
ಸುಕೇಶ್, ಬಿ ಜೆ ಪಿ ಮುಖಂಡರಾದ ಸಂಜಯ ಪ್ರಭು, ಬಿ ಮೋಹನ್, ಕೆನರಾ ಜೂವೆಲ್ಲೆರ್ಸ್ ನ ಉದ್ಯೋಗಿಗಳು ಹಾಗೂ ಸ್ವರ್ಣ ಶಿಲ್ಪಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರುಶ್ರೀ ವಿಶ್ವಕರ್ಮ ಬಂಧುಗಳು ಲಕ್ಷ್ಮೀ ಬಿಲ್ಡಿಂಗ್ ಮಂಗಳೂರು ಇದರ ವತಿಯಿಂದ 78 ನೇ ಸ್ವಾತಂತ್ರೋತ್ಸವ ನಡೆಯಿತು. ಸದಸ್ಯರೆಲ್ಲರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜರೋಹಣವನ್ನು ಟಿ. ಮೋಹನ್ ಮಾಂಗಲ್ಯ ಜ್ಯುವೆಲ್ಲೆರ್ಸ್ ಸುರತ್ಕಲ್ ಇವರು ನೆರವೇರಿಸಿದರು. ಅಧ್ಯಕ್ಷರಾದ ಸುಧೀರ್ ಜಿ ಯವರು ಸ್ವಾತಂತ್ರೋತ್ಸವದ ಬಗ್ಗೆ ಶುಭ ಕೋರಿದರು. ಸದಸ್ಯರಾದ ಅಶೋಕ್ ಧನ್ಯವಾದ ಮಾಡಿದರು. ಹಾಗೂ ಸಿಹಿ ತಿಂಡಿಯ ಜೊತೆ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು. ಮಂಗಳೂರು ಮಹಾನಗರ ಪಾಲಿಕೆಯ
ಮಣ್ಣಗುಡ್ಡೆಯ ಗಾಂಧಿನಗರ ಪಾರ್ಕ್ ಟ್ರಸ್ಟ್ ಹಾಗೂ ವರ್ಟೆಕ್ಸ್ ಸಂಸ್ಥೆಯ ಸಹಯೋಗದೊಂದಿಗೆ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸ್ಥಳೀಯ ಮನಪಾ ಸದಸ್ಯರಾದ ಶ್ರೀಮತಿ ಸಂಧ್ಯಾ ಮೋಹನ್ ಆಚಾರ್ಯರು ನೆರವೇರಿಸಿ ಶುಭಕೋರಿದರು. ದೇಶಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಂದನಾ ನಾಯಕ್ ಸ್ವಾಗತಿಸಿ,ವಂದನಾರ್ಪಣೆ ನೀಡಿದರು.
ಹಿರಿಯ ನಾಗರೀಕರು, ಸ್ಥಳೀಯ ಗಣ್ಯರು, "ಗಾಂಧಿನಗರ ಪಾರ್ಕ್ ಟ್ರಸ್ಟ್ ಹಾಗೂ ವರ್ಟೆಕ್ಸ್ " ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದರು.ಮಂಜೇಶ್ವರ: ಹೊಸಂಗಡಿ ಬಿ.ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯದಲ್ಲಿ ಜರಗಿದ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲೈಬ್ರರಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿ ಯವರು ಧ್ವಜಾರೋಹಣ ನೆರವೇರಿಸಿದರು. ಶ್ರೀ ದಯಾಕರ, ಕೆ. ಕರುಣಾಕರ ಶೆಟ್ಟಿ, ಪ್ರಸಾದ್, ಲೋಹಿತ್, ಇಬ್ರಾಹಿಂ, ಸಚಿನ್ ಕನಿಲ, ರಜನಿಕಾಂತ್, ಗ್ರಂಥಾಪಾಲಕಿ ಶ್ರೀಮತಿ ಪವಿತ್ರ ಪ್ರಸಾದ್, ಶ್ರೀಮತಿ ಯಶೋದಾ, ಅಕ್ಷತ್, ಶ್ರೀ ಗುರುವ,ಆದಾಂ ಕುಂಜಿ ಭಾಗವಹಿಸಿದರು. ಆರಂಭದಲ್ಲಿ ದಯಾಕರ ಸ್ವಾಗತಿಸಿ, ಕೆ. ಕರುಣಾಕರ ಶೆಟ್ಟಿ ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತುಸಾಕೇತ ವಿಕಾಸ ಪರಿಷತ್ ನಾಯ್ಕಪು ಮತ್ತು ಮಹಿಳಾ ಸಮಾಜ ಇದರ ಜಂಟಿ ಅಶ್ರಯದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಾಯ್ಕಪು ಅಂಗನವಾಡಿ ಪರಿಸರದಲ್ಲಿ ಆಚರಿಸಲಾಯಿತು. ವಾರ್ಡ್ ಸದಸ್ಯೆ ಶ್ರೀಮತಿ ಸುಲೋಚನ ಅವರು ಧ್ವಜಾರೋಹಣ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಕ್ಲಬಿನ ಅಧ್ಯಕ್ಷ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಧಿ ಯಾಗಿ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಅಡಿಗರು ಭಾಗವಹಿಸಿದರು. ಮುಖ್ಯ ಭಾಷಣವನ್ನು ಹಿರಿಯ ಸಾಹಿತಿ ವಿ.ಬಿ ಕುಳಮರ್ವ ನವರು ನಿರ್ವಹಿಸಿದರು. ಪತ್ರಕರ್ತರಾದ ರವಿ ನಾಯ್ಕಪು ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು..













































