ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ "ಯಕ್ಷಚಿಗುರು - 2024" ಸಂಪನ್ನ.
ಆಗಸ್ಟ್ 13, 2024
0
ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ "ಯಕ್ಷಚಿಗುರು - 2024" ಸಂಪನ್ನ.
ಮೀಯಪದವು: ಶ್ರೀ ಗುರು ನರಸಿಂಹ ಯಕ್ಷಬಳಗ ಮೀಯಪದವು ತಂಡದ ವಾರ್ಷಿಕ ಕಾರ್ಯಕ್ರಮ ʼಯಕ್ಷಚಿಗುರು - 2024ʼ ದೇಲಂತೊಟ್ಟು ಬಜೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿತು. ಯಕ್ಷಚಿಗುರು – 24 ಪ್ರಶಸ್ತಿಯನ್ನು ಯಕ್ಷಗಾನ ವೇಷಭೂಷಣ ಒದಗಿಸುತ್ತಿರುವ ಪ್ರಸಿದ್ಧ ಸಂಸ್ಥೆಯಾದ “ಗಣೇಶ ಕಲಾವೃಂದ ಪೈವಳಿಕೆ” ಸಂಸ್ಥೆಗೆ ಗಣ್ಯರ ಸಮಕ್ಷಮದಲ್ಲಿ ಪ್ರದಾನ ಗೈಯಲಾಯಿತು. ಸಮಾರಂಭದಲ್ಲಿ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ಡಾ. ಗಿರಿಧರ ರಾವ್ ಎಂ.ಎಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿ “ಸರ್ವ ಸಂಪನ್ನವಾದ ಯಕ್ಷಗಾನಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ , ಸ್ವಚ್ಚ ಸುಂದರ ಕನ್ನಡ ಭಾಷೆ ಉಳಿಸುವಲ್ಲಿ, ಪೌರಾಣಿಕ ಕತೆಗಳನ್ನು ಜನರಿಗೆ ತಲಪಿಸುವಲ್ಲಿ ಯಕ್ಷಗಾನದ ಪಾತ್ರ ದೊಡ್ಡದು. ಗುರು ನರಸಿಂಹ ಯಕ್ಷಬಳಗ ತಂಡ ಗ್ರಾಮೀಣ ಪ್ರದೇಶದಲ್ಲಿ ಯಕ್ಷಗಾನ ಉಳಿಸುವಲ್ಲಿ ಬೆಳೆಸುವಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ. ಯಕ್ಷ ಚಿಗುರು ವಾರ್ಷಿಕ ಪ್ರಶಸ್ತಿ ತಂಡಗಳಿಗೆ ನೀಡುತ್ತಿರುವುದು ಉತ್ತಮ ಕಾರ್ಯ” ಎಂದು ಶ್ಲಾಘಿಸಿದರು.
ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ, ದಾಮೋದರ ಮಯ್ಯ, ಬಜೆ ಶ್ರೀಮಹಾವಿಷ್ಣುಸೇವಾ ಬಳಗ ಶ್ರೀಮಹಾವಿಷ್ಣುದೇವಸ್ಥಾನ ಬಜೆ, ಭಾಗವಹಿಸಿದ್ದರು ದೇವಕಾನ ಶ್ರೀಕೃಷ್ಣಭಟ್ ಸಂಚಾಲಕರು ಗಣೇಶ ಕಲಾವೃಂದ ಪೈವಳಿಕೆ , ಗುರುನರಸಿಂಹ ಯಕ್ಷಬಳಗದ ಅಧ್ಯಕ್ಷರಾದ ಗಣೇಶ ನಾವಡ ಮೀಯಪದವು ಉಪಸ್ಥಿತರಿದ್ದರು.
ರಾಜಾರಾಮ ರಾವ್ ಮೀಯಪದವು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ ನಿರೂಪಿಸಿ, ಗುರುರಾಜಹೊಳ್ಳ ಬಾಯಾರು ಅಭಿನಂದನಾ ನುಡಿಗಳನ್ನಾಡಿದರು. ಯೋಗೀಶ ರಾವ್ ಚಿಗುರುಪಾದೆ ಧನ್ಯವಾದವಿತ್ತರು. ಪಾವನಿ ಮಯ್ಯ ಬಜೆ ಪ್ರಾರ್ಥನೆ ಹಾಡಿದರು. ಬಳಿಕ ಪ್ರಸಿದ್ದ ಕಲಾವಿದರಿಂದ ಕರ್ಣ ಬೇಧನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಲವಕುಮಾರ್ ಐಲ, ಕು| ವಂದನಾ ಮಾಲೆಂಕಿ, ಗೌತಮ ನಾವಡ ಮಜಿಬೈಲು ಭಾಗವಹಿಸಿದ್ದು, ಅರ್ಥಧಾರಿಗಳಾಗಿ ಕೃಷ್ಣನ ಪಾತ್ರದಲ್ಲಿ ವಾಸುದೇವ ರಂಗಾ ಭಟ್ ಮಧೂರು, ಕರ್ಣ ನಾಗಿ ಜಯಪ್ರಕಾಶ ಶೆಟ್ಟಿ ಪೆರ್ಮುದೆ, ಕುಂತಿಯಾಗಿ ನಾ ಕಾರಂತ ಪೆರಾಜೆ ಪಾತ್ರ ವಹಿಸಿದ್ದರು.
ರಾತ್ರಿ ಗುರು ನರಸಿಂಹ ಯಕ್ಷಬಳಗ ಮೀಯಪದವು ತಂಡದ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ದಕ್ಷಾಧ್ವರ ಗಿರಿಜಾಕಲ್ಯಾಣ ಯಕ್ಷಗಾನ ಬಯಲಾಟ ಜರಗಿತು.

