Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ 2023 - 24 ನೇ ಸಾಲಿನ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ.

ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ 2023 - 24 ನೇ ಸಾಲಿನ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿ.
ಮಂಜೇಶ್ವರ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಸೋಂಕು ನಿಯಂತ್ರಣವನ್ನು ಮೌಲ್ಯಮಾಪನ ಮಾಡುವ ಕಾಯಕಲ್ಪ ಪ್ರಶಸ್ತಿ ಲಭಿಸಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮೂರು ಆಸ್ಪತ್ರೆಗಳಿಗೆ ಪ್ರಶಸ್ತಿ ಲಭಿಸಿದ್ದು, ಜಿಲ್ಲಾ ಆಸ್ಪತ್ರೆಗಳ ವಿಭಾಗದಲ್ಲಿ ಜನರಲ್ ಆಸ್ಪತ್ರೆ ಕಾಸರಗೋಡು ಹಾಗೂ
ತಾಲೂಕು ಆಸ್ಪತ್ರೆಗಳ ವಿಭಾಗದಲ್ಲಿ ಮಂಗಲ್ಪಾಡಿ ಹಾಗೂ ತ್ರಿಕರಿಪುರ ಆಸ್ಪತ್ರೆಗಳು ಪ್ರಶಸ್ತಿ ಪಡೆದುಕೊಂಡಿವೆ. ಜಿಲ್ಲಾ ಮಟ್ಟದ ತಪಾಸಣೆ ಮತ್ತು ನಂತರ ರಾಜ್ಯ ಮಟ್ಟದ ತಪಾಸಣೆ ಮೂಲಕ ಪ್ರಶಸ್ತಿಗಳನ್ನು ನಿರ್ಧರಿಸಲಾಯಿತು. ಜನವರಿಯಲ್ಲಿ ಆಸ್ಪತ್ರೆಗಳಲ್ಲಿ ರಾಜ್ಯ ಮಟ್ಟದ ತಪಾಸಣೆ ನಡೆಸಲಾಗಿತ್ತು.
ತಾಲೂಕು ಆಸ್ಪತ್ರೆ ಮಂಗಲ್ಪಾಡಿ ಕಾಯಕಲ್ಪ ತಪಾಸಣೆಯ ಭಾಗವಾಗಿರುವುದು, ಇದು 2 ನೇ ಬಾರಿ ಸಿಬ್ಬಂದಿಗಳ ಕೊರತೆಯಿದ್ದರೂ ನಿಯುಕ್ತ ಸಿಬ್ಬಂದಿಗಳ ಅವಿರತ ನಿಸ್ವಾರ್ಥ ಸೇವೆಯಿಂದ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.