ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ರಜತ ಮಹೋತ್ಸವದಂಗವಾಗಿ "ಶ್ರೀ ಸಾಯಿ ರಜತಾಂಗಣ" ಬಯಲು ಮಂದಿರ ಲೋಕಾರ್ಪಣೆ.
ಜುಲೈ 15, 2024
0
ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ರಜತ ಮಹೋತ್ಸವದಂಗವಾಗಿ "ಶ್ರೀ ಸಾಯಿ ರಜತಾಂಗಣ" ಬಯಲು ಮಂದಿರ ಲೋಕಾರ್ಪಣೆ.
ಪೈವಳಿಕೆ: ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ರಜತ ಮಹೋತ್ಸವದ ಸವಿ ನೆನಪಿಗಾಗಿ, ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅನುಗ್ರಹದಿಂದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಿದ ಬಯಲು ರಂಗಮಂದಿರ "ಶ್ರೀ ಸಾಯಿ ರಜತಾಂಗಣ" ವನ್ನು ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ತ್ರೈಮಾಸಿಕ ಪತ್ರಿಕೆಯನ್ನು ಕೂಡಾ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು "ಮೇಲು - ಕೀಳು, ಜಾತಿ - ಭೇದ ರಹಿತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಿ, ನಿಜವಾದ ಭಾರತೀಯರನ್ನು ಹುಟ್ಟು ಹಾಕುವ ಸಂಸ್ಥೆಗಳಲ್ಲಿ ಪ್ರಶಾಂತಿ ವಿದ್ಯಾ ಕೇಂದ್ರದ ಪಾತ್ರವು ಮಹತ್ತರವಾದುದು ಎಂದು ನುಡಿದರು. ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಪ್ರಶಾಂತಿ ಸೇವಾ ಟ್ರಸ್ಟ್ ಬಾಯಾರಿನ ಅಧ್ಯಕ್ಷ ಐ.ವಿ. ಭಟ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಜನೆಯನ್ನು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಹಿರಿಯ ವಿದ್ಯಾರ್ಥಿಗಳಾದ - ಶ್ರೀ ಸಾಯಿ ಚಿನ್ಮಯ್ .ಎಂ - ಸಾಯಿ ಕೃಪಾ ಟ್ರೇಡರ್ಸ್ - ಬಾಯಾರು, ಸಂತೋಷ್ ತುಪ್ಪದ್ - ಉದ್ಯಮಿ ಸಾಯಿ ರಾಮ್ ಎಂಟರ್ಪ್ರೈಸಸ್ ಬೆಳಗಾವಿ, ಮೃತ್ಯುಂಜಯ ಕಲ್ಮಟ್- ನಿರ್ದೇಶಕರು, ಜ್ಞಾನಗಂಗಾ ಶಿಕ್ಷಣ ಸಂಸ್ಥೆಗಳು ಕಿತ್ತೂರು, ಡಾ. ದೀಕ್ಷಿತ್ ಶೆಟ್ಟಿ – ಎಲುಬು ಮತ್ತು ಕೀಲು ತಜ್ಞರು ಎ,ಜೆ. ಆಸ್ಪತ್ರೆ ಮಂಗಳೂರು, ಡಾ. ಶಾಜಿಯಾ ಶೇಖ್, ಜನರಲ್ ಸರ್ಜರಿ- ಶ್ರೀನಿವಾಸ್ ಮತ್ತು ಇಂಡಿಯಾನಾ ಆಸ್ಪತ್ರೆ, ಮಂಗಳೂರು, ಕಾರ್ತಿಕ್ ಸಿ – ನ್ಯಾಯವಾದಿ, ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಸಂದೀಪ್ ರವೀಂದ್ರ ಬಿಜ್ಜರಗಿ- ವ್ಯವಸ್ಥಾಪಕ ಪಾಲುದಾರರು- ಬಿಜ್ಜರಗಿ ಬಜಾಜ್, ಚೇತಕ್, ಕೆ ಟಿ ಎಂ ಮತ್ತು ಟ್ರoಫ್, ಬಿಜಾಪುರ ಮತ್ತು ಸತ್ಯಂ ರಾಜ್, ವ್ಯಾಪಾರ ಗುಪ್ತಚರ ಇಂಜಿನಿಯರ್- ಅಮೆಜಾನ್ ಇವರು ಭಾಗವಹಿಸಿ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಸಂಚಾಲಕರಾದ ಎಚ್ ಮಹಾಲಿಂಗ ಭಟ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿ, ಪ್ರಶಾಂತಿ ಸೇವಾ ಟ್ರಸ್ಟಿನ ಕೋಶಾಧಿಕಾರಿಯಾದ ನಾರಾಯಣ ಭಟ್, ಮಾಣಿಪ್ಪಾಡಿ ಧನ್ಯವಾದವಿತ್ತರು. ಕನ್ನಡ ಶಿಕ್ಷಕ ನಿತ್ಯಾನಂದ. ಕೆ. ಆರ್. ಬೇಕೂರು ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಪೋಷಕ ಬಂಧುಗಳು, ಹಲವು ಗಣ್ಯ ವ್ಯಕ್ತಿಗಳ ಜೊತೆ ಅನೇಕ ಸಾಯಿ ಬಂಧುಗಳು ಭಾಗವಹಿಸಿ ಸಮಾರಂಭದ ಯಶಸ್ವಿಗೆ ಕಾರಣರಾದರು.








