ಬಾಕ್ರಬೈಲಿನಲ್ಲಿ ಆಟೋ ಮಾಲಕರು ಹಾಗೂ ಚಾಲಕರ ಸಂಘದ ಮೊದಲ ಸಭೆ. ನೂತನ ಪದಾಧಿಕಾರಿಗಳ ಪದಗ್ರಹಣ.
ಜುಲೈ 29, 2024
0
ಬಾಕ್ರಬೈಲಿನಲ್ಲಿ ಆಟೋ ಮಾಲಕರು ಹಾಗೂ ಚಾಲಕರ ಸಂಘದ ಮೊದಲ ಸಭೆ. ನೂತನ ಪದಾಧಿಕಾರಿಗಳ ಪದಗ್ರಹಣ.
ಮಂಜೇಶ್ವರ: ಬಾಕ್ರಬೈಲಿನ ಆಟೋ ಮಾಲಕರು ಹಾಗೂ ಚಾಲಕರ ಸಂಘದ ಮೊದಲ ಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಬಾಕ್ರಬೈಲಿನ ಶಾಲೆಯಲ್ಲಿ ನಡೆಯಿತು. P.B ಅಬ್ದುಲ್ ಮಜೀದ್ ಘನ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಹರೀಶ್ ರವರು ವಹಿಸಿದರು. D.B ಖಾದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ, ಚಾಲಕರಿಗಾಗುವ ತೊಂದರೆಗಳು ಹಾಗೂ ಚಾಲಕರ ಸಂಘದ ಕುರಿತು ಮತ್ತು ಸಂಘದ ವಿವಿದೋದ್ದೇಶಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಬಾಕ್ರಬೈಲು ಸ್ಟ್ಯಾಂಡ್ ನ ಆಟೋ ಚಾಲಕರೆಲ್ಲರೂ ಭಾಗವಹಿಸಿದರು. ಈ ವೇಳೆ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಗೌರವ ಅಧ್ಯಕ್ಷರಾಗಿ:- P. B ಮಜೀದ್, ಅಧ್ಯಕ್ಷರಾಗಿ:- ಖಾದರ್ D.B, ಪ್ರಧಾನ ಕಾರ್ಯದರ್ಶಿಯಾಗಿ:- ಸುಧೀರ್, ಕೋಶಾಧಿಕಾರಿಯಾಗಿ:- ಹರೀಶ್, ಉಪಾಧ್ಯಕ್ಷರಾಗಿ: ಬಷೀರ್, ಜಯರಾಂ, ಜೊತೆ ಕಾರ್ಯದರ್ಶಿಯಾಗಿ:- ಸಂತೋಷ್ ಅಡಪ್ಪ, ಸಂಶು ಮೊದಲಾದವರು ಆಯ್ಕೆಯಾದರು. ಅಬೂಬಕ್ಕರ್ ಕಜೆ ಧನ್ಯವಾದವಿತ್ತರು.




