Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ಆಗಸ್ಟ್ 11 ರಂದು "ಆಟಿದ ಅಟ್ಟಣೆ" ಪೂರ್ವಭಾವಿ ಸಿದ್ದತಾ ಸಭೆ.

ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ಆಗಸ್ಟ್ 11 ರಂದು "ಆಟಿದ ಅಟ್ಟಣೆ" ಪೂರ್ವಭಾವಿ ಸಿದ್ದತಾ ಸಭೆ.
ಮಂಜೇಶ್ವರ: ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ "ಆಟಿದ ಅಟ್ಟಣೆ" ಕಾರ್ಯಕ್ರಮದ ಸಿದ್ದತಾ ಸಭೆ ಜಿಲ್ಲಾಧಿಕಾರಿ ಇಂಬಶೇಖರ್ ರವರ ನೇತೃತ್ವದಲ್ಲಿ ಹೊಸಂಗಡಿ ಬಳಿಯ ದುರ್ಗಿಪಳ್ಳದಲ್ಲಿರುವ ತುಳು ಅಕಾಡೆಮಿ ಕಚೇರಿ "ತುಳು ಭವನ"ದಲ್ಲಿ ನಡೆಯಿತು. ಆಟಿ ಪ್ರಯುಕ್ತ ಕಾರ್ಯಕ್ರಮವನ್ನು ಆಗಸ್ಟ್ 11 ರಂದು ಮಂಜೇಶ್ವರದ ಪಾವೂರು "ಸ್ನೇಹಾಲಯ"ದಲ್ಲಿ ವಿವಿಧ ಗೋಷ್ಠಿ ಹಾಗೂ ಸಾoಸ್ಕೃತಿಕ ಕಾರ್ಯಕ್ರಮ ದೊಂದಿಗೆ ಆಯೋಜಿಸಲು ಸಭೆ ತೀರ್ಮಾನಿಸಿತ್ತು. ಸಭೆಯ ಅಧ್ಯಕ್ಷತೆಯನ್ನು ಕೇರಳ ತುಳು ಅಕಾಡೆಮಿ ಅಕಾಡೆಮಿ ಅಧ್ಯಕ್ಷರಾದ ಕೆ. ಆರ್. ಜಯಾನಂದ ವಹಿಸಿದ್ದರು. ಸದಸ್ಯರಾದ ನ್ಯಾ. ಚಂದ್ರಮೋಹನ್, ಭುಜಂಗ ಶೆಟ್ಟಿ, ಚಂದ್ರಶೇಖರ.ಎ., ಅಜಿತ್ ಎಂ. ಸಿ. ಲಾಲ್ ಭಾಗ್, ಶ್ರೀಮತಿ ಭಾರತಿ. ಎಸ್., ಶ್ರೀಮತಿ ಜಯಂತಿ, ಉದಯ ಸಾರಂಗ್, ಅಬ್ದುಲ್ಲ ಕೆ., ಜೋಸೆಫ್ ಕ್ರಾಸ್ತ, ಗಂಗಾಧರ ದುರ್ಗಿಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ ಸ್ವಾಗತಿಸಿ, ಅಜಿತ್ ಎಂ.ಸಿ. ಲಾಲ್ಬಾಗ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.