ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನ ಕಳವು ಪ್ರಕರಣ. ಕ್ಷೇತಕ್ಕೆ ಕೇರಳ ತುಳು ಅಕಾಡೆಮಿ ಪದಾಧಿಕಾರಿಗಳು ಭೇಟಿ. ಕಳವು ಆರೋಪಿಗಳ ಬಂಧನಕ್ಕೆ ಪೊಲೀಸರಲ್ಲಿ ಆಗ್ರಹ.
ಜುಲೈ 28, 2024
0
ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನ ಕಳವು ಪ್ರಕರಣ. ಕ್ಷೇತಕ್ಕೆ ಕೇರಳ ತುಳು ಅಕಾಡೆಮಿ ಪದಾಧಿಕಾರಿಗಳು ಭೇಟಿ. ಕಳವು ಆರೋಪಿಗಳ ಬಂಧನಕ್ಕೆ ಪೊಲೀಸರಲ್ಲಿ ಆಗ್ರಹ.
ಮೀಂಜ: ಇತಿಹಾಸ ಪ್ರಸಿದ್ದ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ನಡೆದ ಬೆಳ್ಳಿ ಚಿನ್ನಾಭರಣ ಕಳವು ಪ್ರಕರಣ ವಿಷಯ ತಿಳಿದು ಕ್ಷೇತ್ರಕ್ಕೆ ತುಳು ಆಕಾಡೆಮಿ ಅಧ್ಯಕ್ಷ ಕೆ. ಆರ್ ಜಯಾನಂದ, ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಸುಳ್ಯಮೆ, ತುಳು ಆಕಾಡೆಮಿ ಸದಸ್ಯ ಅಜಿತ್ ಎಂ.ಸಿ ಲಾಲ್ ಬಾಗ್ ಮೊದಲಾದವರು ಭೇಟಿ ನೀಡಿದರು. ಕ್ಷೇತ್ರದ ಕಳುವು ಘಟನೆಯನ್ನು ಖಂಡಿಸಿ, ಕಳವು ಪ್ರಕರಣವನ್ನು ಪತ್ತೆ ಹಚ್ಚಬೇಕು ಎಂದು ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯಲ್ಲಿ ಆಗ್ರಹಿಸಿದರು.