Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಕಳವು. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನ ಕೂಡಲೇ ಬಂಧಿಸಬೇಕೆಂದು ಭಾರತೀಯ ಜನತಾ ಪಕ್ಷ ಕೇರಳ ರಾಜ್ಯ ಘಟಕ ಕಾರ್ಯದರ್ಶಿ ಅಡ್ವ. ಕೆ. ಶ್ರೀಕಾಂತ್ ಆಗ್ರಹ. ಕಳವು ಆರೋಪಿಗಳನ್ನ ಕೂಡಲೇ ಬಂಧಿಸಬೇಕು - ಬಿಜೆಪಿ ಮಂಜೇಶ್ವರ ಮಂಡಲ.

ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಕಳವು. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನ ಕೂಡಲೇ ಬಂಧಿಸಬೇಕೆಂದು ಭಾರತೀಯ ಜನತಾ ಪಕ್ಷ ಕೇರಳ ರಾಜ್ಯ ಘಟಕ ಕಾರ್ಯದರ್ಶಿ ಅಡ್ವ. ಕೆ. ಶ್ರೀಕಾಂತ್ ಆಗ್ರಹ.
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಭಾರತೀಯ ಜನತಾ ಪಕ್ಷ ಕೇರಳ ರಾಜ್ಯ ಘಟಕ ಕಾರ್ಯದರ್ಶಿ ಅಡ್ವ. ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಐತಿಹಾಸಿಕವಾದ ಕ್ಷೇತ್ರವನ್ನು ಅಪವಿತ್ರಗೊಳಿಸಿ ದೇವಸ್ಥಾನದ ಸೊತ್ತುಗಳನ್ನು ದೋಚುವ ಸಂಚು ನಡೆಸಲಾಗಿದೆ. ಹಿಂದೂ ಶ್ರದ್ಧಾ ಕೇಂದ್ರವನ್ನು ದಾಳಿ ಮಾಡಿ ಕೆಡಹುವ ಹುನ್ನಾರ ನಡೆದಿದೆಯೆಂದು ಕೆ. ಶ್ರೀಕಾಂತ್ ಆರೋಪಿಸಿದ್ದಾರೆ. ಕೋಳ್ಯೂರು ದೇವಸ್ಥಾನದ ಪರಿಸರ ಪ್ರದೇಶದಲ್ಲಿ ಇತ್ತೀಚೆಗೆ ಹಲವಾರು ಕಳವು ಪ್ರಕರಣಗಳು ನಡೆದಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ. ಪೋಲೀಸರ ನಿರಂತರ ವೈಫಲ್ಯ, ಕಳ್ಳತನ ಮಾಡಲು ಪ್ರೋತ್ಸಾಹಿಸಿದಂತಾಗಿದೆ ಎಂದು ಶ್ರೀಕಾಂತ್ ಕಟುವಾಗಿ ಟೀಕಿಸಿದ್ದಾರೆ. ಕೋಳ್ಯೂರು ದೇವಾಲಯದ ಕಳ್ಳತನ ಪ್ರಕರಣದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಇದರ ಹಿಂದಿರುವ ಒಳಸಂಚನ್ನು ಬಯಲಿಗೆಳೆಯಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜಿಪಿ ನೇತಾರ ರಾಜ್ಯ ಸರಕಾರ ಹಾಗೂ ಪೋಲಿಸ್ ಇಲಾಖೆಯನ್ನ ಆಗ್ರಹಿಸಿದ್ದಾರೆ. ಕಳವು ಆರೋಪಿಗಳನ್ನ ಕೂಡಲೇ ಬಂಧಿಸಬೇಕು - ಬಿಜೆಪಿ.
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಭಾರತೀಯ ಜನತಾ ಪಕ್ಷ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಗ್ರಹಿಸಿದೆ. ಐತಿಹಾಸಿಕವಾದ ಕ್ಷೇತ್ರವನ್ನು ಅಪವಿತ್ರಗೊಳಿಸಿ ದೇವಸ್ಥಾನದ ಸೊತ್ತುಗಳನ್ನು ದೋಚುವ ಪ್ರಯತ್ನ ಮಾತ್ರವಲ್ಲ ಇದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಸವಾಲು ಎಂದು ಬಿಜೆಪಿ ಹೇಳಿದೆ. ಪೊಲೀಸರು ನಿಷ್ಕ್ರಿಯತೆ ಎದ್ದು ಕಾಣುತಿದೆ. ಪೋಲೀಸರ ನಿರಂತರ ವೈಫಲ್ಯ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಇಲಾಖೆಗೆ ಅಗ್ರಹಿಸಿದೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ ಪ್ರಕರಣ ಅಧಿಕ ವಾಗುತ್ತಿದೆ. ಇದುವರೆಗೆ ನಡೆದ ಯಾವುದೇ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸ್ ಬಂಧಿಸಿಲ್ಲ ಎಂದು ಆರೋಪಿಸಿದೆ. ದೇವಸ್ಥಾನ ಕಳವು ಸ್ಥಳಕ್ಕೆ ಬಿಜೆಪಿ ನೇತಾರರದ ವಿಜಯ ಕುಮಾರ್ ರೈ, ಆದರ್ಶ ಬಿ.ಎಂ, ಮಣಿಕಂಠ ರೈ, ಪದ್ಮನಾಭ ರೈ ಉಂಬಲ್ತೊಡಿ, ಸಂತೋಷ್ ದೈಗೋಳಿ, ಕೆ.ವಿ ಭಟ್, ನಾರಾಯಣ ತುಂಗ ಮೊದಲಾದವರು ಭೇಟಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.