ಜೈ ತುಲುನಾಡ್ (ರಿ.) ಕಾಸರಗೋಡು, ಕೇರಳ ತುಳು ಅಕಾಡೆಮಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಸಂಪನ್ನಗೊಂಡ "ಆಟಿದ ಕೂಟ" ಕಾರ್ಯಕ್ರಮ.
ಜುಲೈ 29, 2024
0
ಜೈ ತುಲುನಾಡ್ (ರಿ.) ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿಯ ಸಹಕಾರದೊಂದಿಗೆ ಹೊಸಂಗಡಿಯಲ್ಲಿ ಸಂಪನ್ನಗೊಂಡ "ಆಟಿದ ಕೂಟ" ಕಾರ್ಯಕ್ರಮ.
ಮಂಜೇಶ್ವರ: ಜೈ ತುಲುನಾಡ್ (ರಿ.) ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿಯ ಸಹಕಾರದೊಂದಿಗೆ ಹೊಸಂಗಡಿಯ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿಯ ಸಭಾಂಗಣದಲ್ಲಿ "ಆಟಿದ ಕೂಟ" ಕಾರ್ಯಕ್ರಮ ನಡೆಯಿತು. ಜೈ ತುಲುನಾಡ್ (ರಿ.) ಕಾಸರಗೋಡಿನ ಅಧ್ಯಕ್ಷರಾದ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜೈ ತುಲುನಾಡ್ (ರಿ.) ಸಂಘದ ಹಿರಿಯ ಸದಸ್ಯ ಉಮೇಶ್ ಸಾಲಿಯಾನ್ ಸಿರಿಯಾ "ಆಟಿ" ತಿಂಗಳ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ ಶುಭ ಹಾರೈಸಿದರು. ಜೈ ತುಲುನಾಡ್ (ರಿ.) ಕೇಂದ್ರ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ವಿನೋದ ಪ್ರಸಾದ್ ರೈ ಹಾಗೂ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಶುಭಾಶಂಸನೆಗೈದರು. ಕಾರ್ತಿಕ್ ಕೆ.ಎನ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಶ್ರೀಮತಿ ಪವಿತ್ರ ಧನ್ಯವಾದವಿತ್ತರು. ಜಗನ್ನಾಥ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಯಜ್ಞೇಶ್, ಪ್ರವೀಶ್, ಚೈತ್ರ, ಮೇಘನಾ ಕೆ. ಎನ್ ಪೆರ್ಲ ಸಹಕರಿಸಿದರು. ಬಳಿಕ ಆಟಿ ತಿಂಗಳಿನ ವಿವಿಧ ತಿಂಡಿ ತಿನಸುಗಳನ್ನು ಹಂಚಲಾಯಿತು.








