Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಲ್ಪಾಡಿ ಪ್ರತಾಪನಗರ ನಿವಾಸಿ ವಿಶ್ವನಾಥ ಆಚಾರ್ಯ (50) ಕಾಲುಜಾರಿ ಬಾವಿಗೆ ಬಿದ್ದು, ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನ.

ಮಂಗಲ್ಪಾಡಿ ಪ್ರತಾಪನಗರ ನಿವಾಸಿ ವಿಶ್ವನಾಥ ಆಚಾರ್ಯ (50) ಕಾಲುಜಾರಿ ಬಾವಿಗೆ ಬಿದ್ದು, ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನ.
ಮಂಜೇಶ್ವರ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ವಿಶ್ವನಾಥ ಆಚಾರ್ಯ (50) ಕಾಲು ಜಾರಿ ಬಾವಿಗೆ ಬಿದ್ದು, ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾಗಿದ್ದಾರೆ. ಮೃತರು ಅಂಬಾರು ಚೆರುಗೋಳಿಯಲ್ಲಿರುವ "ವಿಶ್ವ ಶ್ರೀ ಜ್ಯುವೆಲ್ಲರಿ"ಯ ಮಾಲಕರಾಗಿದ್ದಾರೆ. ಕೈಕಂಬದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ನ ಅಪ್ರೈಸರ್ ರಾಗಿ ಸೇವೆ ಸಲ್ಲಿಸುತ್ತಿದ್ದರು. ಭಜನಾ ಸಂಕೀರ್ತನೆ ಗಾರರಾಗಿದ್ದು, ಪ್ರತಾಪನಗರದ ಸಾರ್ವಜನಿಕ ಶ್ರೀ ಗೌರಿ ಗಣೇಶ ಮಂದಿರದ ಸಕ್ರೀಯ ಸದಸ್ಯ,ಪ್ರತಾಪನಗರದ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ, ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಸದಸ್ಯ, ವಿಶ್ವವಿನಾಯಕ ಸ್ವ ಸಹಾಯ ಸಂಘದ ಸದಸ್ಯರಾಗಿದ್ದಾರೆ. ಮೃತರು ಇಂದು ಬೆಳಗ್ಗೆ ಮನೆ ಮಾಡಿನ ಕೆಲಸದಲ್ಲಿ ನಿರತರಾಗಿದ್ದಾಗ ಕಾಲು ಜಾರಿ ಬಾವಿಗೆ ಬಿದ್ದರು. ಘಟನೆ ತಿಳಿದು ಸ್ಥಳೀಯರು ಕೂಡಲೇ ಉಪ್ಪಳದ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದವರು ಊರವರ ಸಹಾಯದೊಂದಿಗೆ ಗಂಭೀರ ಗಾಯಗೊಂಡ ವಿಶ್ವನಾಥರನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನ ಸಂಭವಿಸಿದೆ. ಬಳಿಕ ಮೃತದೇಹವನ್ನು ಮಹಜರಿಗಾಗಿ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ರಾತ್ರಿ ಮನೆಗೆ ತರಲಾಗುವುದು ಬಳಿಕ ಅಂತ್ಯಕ್ರಿಯೆ ಪುಳಿಕುತ್ತಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ದಿ. ಪುರುಷೋತ್ತಮ ಆಚಾರ್ಯ - ವೇದಾವತಿ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಶಶಿಕಲಾ, ಪುತ್ರ: ಶರತ್, ಸೊಸೆ ರಮ್ಯಾ, ಸಹೋದರಿಯರಾದ: ಅನುಸೂಯ, ಪ್ರೇಮಾ, ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ವಾಸುದೇವ ಈ ಹಿಂದೆ ನಿಧನರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.