ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನಿಂದ "ವಾಚನಾ ಪಕ್ಷಾಚರಣೆಯ ಸಮಾರೋಪ" ಮತ್ತು "ಐ. ವಿ. ದಾಸ್ ಸಂಸ್ಮರಣಾ" ಕಾರ್ಯಕ್ರಮ.
ಜುಲೈ 08, 2024
0
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನಿಂದ "ವಾಚನಾ ಪಕ್ಷಾಚರಣೆಯ ಸಮಾರೋಪ" ಮತ್ತು "ಐ. ವಿ. ದಾಸ್ ಸಂಸ್ಮರಣಾ" ಕಾರ್ಯಕ್ರಮ.
ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಯೋಜಿಸಿದ್ದ ವಾಚನಾ ಪಕ್ಷಾಚರಣೆಯ ಸಮಾರೋಪ ಮತ್ತು ಐ. ವಿ. ದಾಸ್ ಸಂಸ್ಮರಣೆ ಕಾರ್ಯಕ್ರಮ ಮೀಯಪದವು ವಿದ್ಯಾವರ್ಧಕ ಎ.ಯು.ಪಿ. ಶಾಲೆಯಲ್ಲಿ ನಡೆಯಿತು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷರಾದ ಕೆ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೆ.ಎಂ. ಮೃದುಲಾ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯರಾದ ಪಿ.ಕೆ. ಅಹ್ಮದ್ ಹುಸೇನ್ ಸಂಸ್ಮರಣಾ ಉಪನ್ಯಾಸ ನೀಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ, ಕಾರ್ಯಕಾರಿ ಸಮಿತಿ ಸದಸ್ಯರಾದ ದಾಸಪ್ಪ ಶೆಟ್ಟಿ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ಶ್ರೀಮತಿ ವನಿತಾ ಆರ್. ಶೆಟ್ಟಿ, ಕುಳೂರು ನವಯವಕ ಕಲಾವೃಂದ ಗ್ರಂಥಾಲಯದ ಅಧ್ಯಕ್ಷ ಯೋಗೀಶ್ ಕೆ, ಸತೀಶ್ ಬಿ., ಮೀಯಪದವು ಶ್ರೀ ವಿದ್ಯಾವರ್ಧಕ ಹಳೆಯ ವಿದ್ಯಾರ್ಥಿಗಳ ಸಂಘ ಗ್ರಂಥಾಲಯ ಕಾರ್ಯದರ್ಶಿ ಸುರೇಶ್ ಬಂಗೇರ ಕೆ. ಉಪಸ್ಥಿತರಿದ್ದರು. ತಾಲೂಕು ಲೈಬ್ರರಿ ಜತೆ ಕಾರ್ಯದರ್ಶಿ ಶ್ರೀಮತಿ ಕುಮಾರಿ ಕೆ. ಸ್ವಾಗತಿಸಿ, ಮೀಂಜ ಪಂಚಾಯತ್ ಸಮಿತಿ ಸಂಚಾಲಕರಾದ ರಾಮಚಂದ್ರ ಟಿ. ಧನ್ಯವಾದ ಸಲ್ಲಿಸಿದರು.








