Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಕೇರಳ ತುಳು ಅಕಾಡೆಮಿಯ ಕಚೇರಿಗೆ ಕೇರಳ ಸರಕಾರದ ಸಾಂಸ್ಕೃತಿಕ ಇಲಾಖೆಯ ಹಿರಿಯ ಹಣಕಾಸು ಅಧಿಕಾರಿ ಪ್ರವೀಣ್. ಪಿ. ಭೇಟಿ.

ಮಂಜೇಶ್ವರ ಕೇರಳ ತುಳು ಅಕಾಡೆಮಿಯ ಕಚೇರಿಗೆ ಕೇರಳ ಸರಕಾರದ ಸಾಂಸ್ಕೃತಿಕ ಇಲಾಖೆಯ ಹಿರಿಯ ಹಣಕಾಸು ಅಧಿಕಾರಿ ಪ್ರವೀಣ್. ಪಿ. ಭೇಟಿ.
ಮಂಜೇಶ್ವರ: ಕೇರಳ ತುಳು ಅಕಾಡೆಮಿಯ ಮುಂದಿನ ಕಾರ್ಯನಿರ್ವಹಣೆಗೆ ಅವಶ್ಯಕವಾದ ಧನ ಸಹಾಯ ನೀಡುವ ಸಲುವಾಗಿ ಕೇರಳ ಸರಕಾರದ ಸಾಂಸ್ಕೃತಿಕ ಇಲಾಖೆಯ ಹಿರಿಯ ಹಣಕಾಸು ಅಧಿಕಾರಿ ಪ್ರವೀಣ್. ಪಿ.ರವರು ಇಂದು ಕೇರಳ ತುಳು ಅಕಾಡೆಮಿಯ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು. ಕೇರಳ ತುಳು ಅಕಾಡೆಮಿಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಅಕಾಡೆಮಿ ಅಧ್ಯಕ್ಷರಾದ ಕೆ. ಆರ್. ಜಯಾನಂದ ಸಂಪೂರ್ಣ ಮಾಹಿತಿ ನೀಡಿದರು. ಸರಕಾರದಿಂದ ಇನ್ನಷ್ಟು ಸವಲತ್ತು, ಧನ ಸಹಾಯ ನೀಡಲು ಶಿಫಾರಸು ಮಾಡುವುದಾಗಿ ಹಣಕಾಸು ಅಧಿಕಾರಿ ಪ್ರವೀಣ್ ರವರು ಭರವಸೆ ನೀಡಿದರು. ಈ ವೇಳೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ ಸಾಲಿಯಾನ್, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿಗಾರ್, ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ. ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷರಾದ ಕೆ. ಆರ್ ಜಯಾನಂದ ರವರು ಅಕಾಡೆಮಿ ಪ್ರಕಟಿತ " ಬರವುದ ಬಿದೆ " ಲಿಪಿ ಪುಸ್ತಕವನ್ನು ಪ್ರವೀಣ್ ರವರಿಗೆ ನೀಡಿ ಗೌರವಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.