ಬಿ.ಎಂ.ಎಸ್ ಕುಂಜತ್ತೂರು ಯೂನಿಟ್ ವತಿಯಿಂದ ಬಿ.ಎಂ.ಎಸ್ ಸ್ಥಾಪನಾ ದಿನದ ಅಂಗವಾಗಿ "ಕುಟುಂಬ ಮಿಲನ".
ಜುಲೈ 15, 2024
0
ಬಿ.ಎಂ.ಎಸ್ ಕುಂಜತ್ತೂರು ಯೂನಿಟ್ ವತಿಯಿಂದ ಬಿ.ಎಂ.ಎಸ್ ಸ್ಥಾಪನಾ ದಿನದ ಅಂಗವಾಗಿ "ಕುಟುಂಬ ಮಿಲನ".
ಮಂಜೇಶ್ವರ: ಬಿ.ಎಂ.ಎಸ್ ಕುಂಜತ್ತೂರು ಯೂನಿಟ್ ವತಿಯಿಂದ ಬಿ.ಎಂ.ಎಸ್ ಸ್ಥಾಪನಾ ದಿನದ ಅಂಗವಾಗಿ "ಕುಟುಂಬ ಮಿಲನ" ಕಾರ್ಯಕ್ರಮ ಕುಂಜತ್ತೂರಿನ ಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿ.ಎಂ.ಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಬೆಳ್ತಂಗಡಿ ಉದ್ಘಾಟಿಸಿದರು. ಬಿ.ಎಂ.ಎಸ್ ಕಾಸರಗೋಡು ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಶ್ರೀ ಕ್ರಷ್ಣ ಶಿವಕ್ರಪಾ ಕುಂಜತ್ತೂರು. ಬಿ.ಎಂ.ಎಸ್ ಮಂಜೇಶ್ವರ ವಲಯ ಅಧ್ಯಕ್ಷ ರವಿ ಎಂ.ಕೆ ಕೋಳ್ಯೂರು, ವಾರ್ಡ್ ಸದಸ್ಯ ರಾಜೇಶ್ ಮಜಾಲ್, ಹಲವಾರು ಕಾರ್ಮಿಕರು ಭಾಗವಹಿಸಿದರು ಯೂನಿಟ್ ಅಧ್ಯಕ್ಷ ರಾಘವ ಮಜಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಮಜಲ್ ಸ್ವಾಗತಿಸಿ, ನವೀನ ಕಣ್ವತೀರ್ಥ ಧನ್ಯವಾದವಿತ್ತರು.



