ಮಂಜೇಶ್ವರದ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಸಚಿವ ಜಾರ್ಜ್ ಕುರಿಯನ್ ರಿಗೆ ಮಂಜೇಶ್ವರ ಗ್ರಾಮ ಪಂಚಾಯತ್ ಮನವಿ.
ಜುಲೈ 13, 2024
0
ಮಂಜೇಶ್ವರದ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಸಚಿವ ಜಾರ್ಜ್ ಕುರಿಯನ್ ರಿಗೆ ಮಂಜೇಶ್ವರ ಗ್ರಾಮ ಪಂಚಾಯತ್
ಮನವಿ.
ಮಂಜೇಶ್ವರ: ಮಂಜೇಶ್ವರದ ವಿವಿಧ ಬೇಡಿಕೆಗಳನ್ನು ಪ್ರಾಮುಖ್ಯವಾಗಿ ಇಟ್ಟುಕೊಂಡು ಮಂಜೇಶ್ವರ ಅಂಡರ್ ಪಾಸ್ ಅಗತ್ಯತೆ ಮತ್ತು ತಲಪಾಡಿ, ಕಣ್ವತಿರ್ಥ ಸಮುದ್ರ ಕಿನಾರೆಯಲ್ಲಿ ಉಂಟಾಗಿರುವ ಸಮುದ್ರ ಕೊರೆತ ಬಗ್ಗೆ ಶಾಶ್ವತ ಪರಿಹಾರಕ್ಕೆ ಬೇಕಾಗಿ ಹಿಂದುಳಿದ ಖಾತೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಜಾರ್ಜ್ ಕುರಿಯನ್ ರಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ನ ವತಿಯಿಂದ ಇಂದು
ಮನವಿ ಮಾಡಲಾಯಿತು.
ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ, ಪಂಚಾಯತ್ ಸದಸ್ಯರಾದ ಆದರ್ಶ ಬಿ ಎಂ, ಯಾದವ ಬಡಾಜೆ, ಲಕ್ಷ್ಮಣ ಕುಚ್ಚಿಕಾಡ್, ಝಕರಿಯ, ಅಹಮ್ಮದ್ ನೈನಾರ್, ರಾಧಾ ಕನಿಲ, ಮೊದಲದವರು ಉಪಸ್ಥಿತರಿದ್ದರು.

