Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ 82 ನೇ ಯೋಜನೆಯ ಮೊತ್ತ ಫಲಾನುಭವಿಗೆ ಹಸ್ತಾಂತರ.

ಮಂಜೇಶ್ವರ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ 82 ನೇ ಯೋಜನೆಯ ಮೊತ್ತ ಫಲಾನುಭವಿಗೆ ಹಸ್ತಾಂತರ.
ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ 82 ನೇ ಯೋಜನೆಯ ವಾಗ್ದಾನದ ವಿತರಣೆ ಫಲಾನುಭವಿಗಳ ಮನೆಯಲ್ಲಿ ನಡೆಯಿತು. ಮೀಂಜ ಗ್ರಾಮ ಪಂಚಾಯತ್ ಗೊಳ್ಳಪಟ್ಟ ಪಜಿಂಗಾರ್ ನಿವಾಸಿ ಲೀಲಾರವರು ಅರ್ಬುದ ರೋಗದಿಂದ ಬಳಲುತ್ತಿದ್ದ, ಇವರಿಗೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ನಡೆಯುತ್ತಿದೆ. ಈ ಮಾಹಿತಿಯನ್ನರಿತು ಇದಕ್ಕಾಗಿ ಸಂಸ್ಥೆಯ ಸದಸ್ಯರು ಸಂಗ್ರಹಿಸಿದರು. ಒಟ್ಟು ಗೂಡಿಸಿದ ಮೊತ್ತವನ್ನು ಜೈ ಶ್ರೀರಾಮ್ ಸಮಾಜ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನ್ಯಾ. ನವೀನ್ ರಾಜ್ ಕೆ.ಜೆ ನೇತೃತ್ವದ ನಿಯೋಗವು ಮನೆಗೆ ತೆರಳಿ ಹಸ್ತಾಂತರಿಸಿದರು. ಈ ವೇಳೆ ಬೆಜ್ಜ ವಾರ್ಡ್ ಸದಸ್ಯ ನವೀನ್ ಬೆಜ್ಜ, ಮಾಜಿ ಪಂಚಾಯತ್ ಸದಸ್ಯ ಕೃಷ್ಣ ಬೆಜ್ಜ, ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಮತಿ ಆಶಾ ಲೊಕೇಶ್ ಮಾಡ, ಕೃಷ್ಣ ಆಟ್ಟೆಗೋಳಿ, ಅಂಕಿತ್ ಪಾವೂರ್, ಶರತ್ ಅರಿಮಲೆ, ಸುಕೇಶ್ ಬೆಜ್ಜ, ನಿತೇಶ್ ಪಜಿಂಗಾರ್, ನಂದ ಹೊಸಂಗಡಿ, ಶಿವ ಕರಿಬೈಲ್, ವಿಜೇಶ್ ಕರಿಬೈಲ್, ಪ್ರದೀಪ್ ಮೊರತ್ತನೆ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.