Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಅಮ್ಮನ ಅನುಗ್ರಹ ಇದ್ದರೆ ಕ್ರೋಧ ಕಡಿಮೆ ಆಗುತ್ತೆ - ಆನೆಗುಂದಿ ಶ್ರೀ. ಚಾತುರ್ಮಾಸ್ಯದ ಪೂರ್ವಭಾವಿ ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನಕ್ಕೆ ಸಂದರ್ಶನ. ಆಮಂತ್ರಣ ಪತ್ರಿಕೆ ವಿತರಣೆ.

ಅಮ್ಮನ ಅನುಗ್ರಹ ಇದ್ದರೆ ಕ್ರೋಧ ಕಡಿಮೆ ಆಗುತ್ತೆ - ಆನೆಗುಂದಿ ಶ್ರೀ.
ಮಂಗಳೂರು: ಈ ಸಂವತ್ಸರ ಕ್ರೋಧ ನಾಮ ಸಂವತ್ಸರ ಹೆಸರೇ ಹೇಳುವಂತೆ ಕ್ರೋಧವು ಅಮ್ಮನ ಅನುಗ್ರಹ ಇದ್ದರೆ ಕಡಿಮೆ ಆಗುತ್ತೆ - ಹೆಸರಲ್ಲೇ ಕ್ರೋಧ ಇರುವಂತೆ ಇಷ್ಟವಿಲ್ಲದ ಮಾತು ಆಡಿದಾಗ ನಮಗೆ ಕ್ರೋಧ ಬರುತ್ತದೆ. ಹಾಗೇ ಎಲ್ಲಾ ಕಡೇ ನಾನೇ ನನ್ನಿಂದ ಆದದ್ದು ಎಂದು ಎನಿಸಿದರೆ ದುರಂಕಾರ ಬರುತ್ತದೆ. ದುರಂಕಾರ ಕ್ರೋಧವೆಲ್ಲಾ ಬಿಟ್ಟು ತಾಳ್ಮೆಯಿಂದ ಇರಬೇಕು, ಇದೆಲ್ಲವೂ ಜಗನ್ಮಾತೆ ಶ್ರೀ ಕಾಳಿಕಾಂಬೆಯ ಅನುಗ್ರಹದಿಂದ ಖಂಡಿತಾ ಸಾಧ್ಯ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ವ್ರತಚಾರಣೆ ಸಲುವಾಗಿ ಚಾತುರ್ಮಾಸ್ಯ ವ್ರತ ಸಂಕಲ್ಪದ ಪೂರ್ವಭಾವೀ ಕ್ಷೇತ್ರ ಸಂದರ್ಶನದ ಭಾಗವಾಗಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ನಿನ್ನೆ ಜಗದ್ಗುರುಗಳವರು ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಆಶೀರ್ವಚನದಲ್ಲಿ ಹೇಳಿದರು.
ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ ಇವರಿಗೆ ಚಾತುರ್ಮಾಸ್ಯ ವ್ರತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು. ಆನೆಗುಂದಿ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್ ರವರು ಗುರು ಪೀಠ, ಚಾತುರ್ಮಸ್ಯ ವ್ರತಚಾರಣೆಯ ಮಹತ್ವದ ಬಗ್ಗೆ ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದರು. ಚಾತುರ್ಮಸ್ಯವ್ರತಚಾರಣೆ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ಕೆ.ಎಂ ಗಂಗಾಧರ ಆಚಾರ್ಯ ಕೊಂಡೆವೂರು, ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ ಮಂಗಳೂರು, ನಿಕಟಪೂರ್ವ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ,ಲೋಕೇಶ್ ಆಚಾರ್ಯ ಚಿಲಿಂಬಿ, ಗುರು ಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಶುಪತಿ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ವಿಶ್ವಕರ್ಮ ಯುವ ಮಿಲನ ,ವಿಶ್ವಕರ್ಮ ಯುವ ವೇದಿಕೆ, ಗುರು ಸೇವಾ ಪರಿಷತ್ ಮಂಗಳೂರು ಘಟಕದ ಸದಸ್ಯರ
ು ಹಾಗೂ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.