Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಫೆ. 11 ರಂದು ದುಬೈನಲ್ಲಿ ಮಂಜೇಶ್ವರದ ಅನಿವಾಸಿಗರ "ಮೈಸರ್‌ಕಾರ್ ಗಮ್ಮತ್ - 2024" ಕಾರ್ಯಕ್ರಮ.

ಫೆ. 11 ರಂದು ದುಬೈನಲ್ಲಿ ಮಂಜೇಶ್ವರದ ಅನಿವಾಸಿಗರ "ಮೈಸರ್‌ಕಾರ್ ಗಮ್ಮತ್ - 2024" ಕಾರ್ಯಕ್ರಮ.
ದುಬೈ: ಸಪ್ತ ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರವು ವೈವಿಧ್ಯಮಯ ಭಾಷೆ ಸಾಹಿತ್ಯ ಸಾಂಸ್ಕೃತಿಕತೆಗೊಂದು ಕೈಕನ್ನಡಿಯಂತಿದೆ. ಅಲ್ಲಿನ ವಿವಿಧ ಭಾಷೆಗಳನ್ನಾಡುವ ವಿವಿಧ ಜಾತಿಯನ್ನೊಳಗೊಂಡ ಜನರಿದ್ದರೂ ಸದಾ ಸಹೋದರತ್ವದ ಸೌಹರ್ದತೆಯನ್ನು ಸಾರುವ ಈ ಮಣ್ಣಿನ ಅನಿವಾಸಿಗರು ಉದ್ಯೋಗಕ್ಕಾಗಿ ಯು.ಎ.ಇ. ಯಂತಹ ಗಲ್ಫ್ ರಾಷ್ಟ್ರವನ್ನು ಅವಲಂಭಿಸಿದ್ದು, ಇದೀಗ ಮಂಜೇಶ್ವರದ ಜನ ವೈವಿಧ್ಯತೆಯನ್ನು ಒಟ್ಟುಗೂಡಿಸಿಕೊಂಡು ಸಂಭ್ರಮಿಸಲು ಯುಎಇ ಯಲ್ಲಿ ಮೈಸರ್‌ಕಾರ್ ಎಂಬ ಬಳಗವನ್ನು ಕಟ್ಟಿಕೊಂಡು ವಿಭಿನ್ನವಾದ ಪ್ರಯತ್ನವನ್ನು ನಡೆಸಲಾಗಿದೆ. ಇದರ ವಿಸೃತ ರೂಪವೇ ಫೆಬ್ರವರಿ 11 ರಂದು ಜರಗುವ ಸ್ನೇಹ ಸಮ್ಮಿಲನವಾದ "ಗಮ್ಮತ್ 2024" ಎಂಬ ಕಾರ್ಯಕ್ರಮ ಎಂದು ಮೈಸರ್‌ಕಾರ್ ತಂಡದ ರೂವಾರಿ ಡಾ. ಅಬ್ದುಲ್ ರಹಮಾನ್‌ ಬಾವ ತಿಳಿಸಿದ್ದಾರೆ. ಅವರು ಮಾತನಾಡುತ್ತಾ ಕಳೆದ ಎರಡು ವರ್ಷ ಚಿಕ್ಕದಾಗಿ ಚೊಕ್ಕದಾಗಿ ಮೈಸರ್‌ಕಾರ್ ಗಮ್ಮತ್ ಎಂಬ ಕಾರ್ಯಕ್ರಮವನ್ನು ಅಯೊಜಿಸುತ್ತಾ ಮಂಜೇಶ್ಚರದ ಸ್ನೇಹ ಸೌಹರ್ದತೆಯನ್ನು ಕೊಲ್ಲಿ ರಾಷ್ಡ್ರದ ಜನತೆಯಲ್ಲೂ ಜತನವಾಗಿರಿಸಲಾಗಿದೆ. ಈ ವರ್ಷ ಯುಎಇಯ ಎಲ್ಲಾ ರಾಜ್ಯದಲ್ಲಿ ಇರುವ ಮಂಜೇಶ್ವರದವರನ್ನು ಒಟ್ಟುಗೂಡಿಸಿ "ಮೈಸರ್‌ಕಾರ್ ಗಮ್ಮತ್-2024" ಕಾರ್ಯಕ್ರಮಕ್ಕೆ ಯೋಜನೆ ಇರಿಸಿರುವುದರಿಂದ ಅಲ್ಲಿನ ವೈವಿಧ್ಯತೆ ಹಾಗೂ ಏಕತೆಯನ್ನು ಸಾಗರದಾಚೆಗೂ ವಿಸ್ತರಿಸಿ ಮಂಜೇಶ್ವರದ ಜನತೆಯ ಪರಂಪರೆಯನ್ನು ವಿಪುಲಗೊಳಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇದರ ಅಂಗವಾಗಿ ಮಕ್ಕಳಿಗೆ ಮಹಿಳೆಯರಿಗೆ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಮಂಜೇಶದವರದ ಜನತೆಯ ಮಹಾ ಸಮ್ಮೇಳನದ ರೀತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರೀತಿ ಬೋಜನದ ವ್ಯವಸ್ಥೆಯು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಫೆಬ್ರವರಿ 11 ರಂದು ನಗರದ ಪೀಸ್ ಮೊಡರ್ನ್ ಬ್ರಿಟಿಷ್ ಸ್ಕೂಲ್ ರಸೀದೀಯದ ಸಭಾಂಗಣದಲ್ಲಿ ಸಂಜೆ ಮೂರರಿಂದ ರಾತ್ರಿ ಹತ್ತರ ವರೆಗೆ ಜರಗಲಿರುವ "ಮೈಸರ್‌ಕಾರ್ ಗಮ್ಮತ್-2024" ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಗಾಯಕರಾದ ಹಮೀದ್ ಕಲಾಭವನ್ ತಂಡದವರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಒಪ್ಪನ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ಜರಗಲಿದೆ. ಯುಎಇಯಲ್ಲಿ ಇರುವ ಮಂಜೇಶ್ವರದ ಅನಿವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ಈ ಸಂದರ್ಭದಲ್ಲಿ ಸಂಘಟಕರಲ್ಲಿ ಒರ್ವರಾದ ನ್ಯಾಯವಾದಿ ಇಬ್ರಾಹಿಂ ಖಲೀಲ್ ಕೋರಿದ್ದಾರೆ. ಕಾರ್ಯಕ್ರಮದ ಮಾಹಿತಿಯ ಬಗ್ಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶೇಖ್ ಅಮೀನ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.