ರವಿ ನಾಯ್ಕಾಪುಗೆ ದುಬಾಯಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಜನವರಿ 24, 2024
0
ರವಿ ನಾಯ್ಕಾಪುಗೆ ದುಬಾಯಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ದುಬಾಯಿ: ಪತ್ರಿಕಾ ರಂಗದ ಸಮಗ್ರ ಸಾಧನೆಗೆ ನವದೆಹಲಿಯ ಅಸೋಸಿಯೇಷನ್ ಫಾರ್ ಎಕನಾಮಿಕ್ ಗ್ರೋತ್ ಸಂಘಟನೆಯು ಕೊಡಮಾಡುವ ಈ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿ 'ಇಂಟರ್ನ್ಯಾಷನಲ್ ಸ್ಟೇಟಸ್ ಅವಾರ್ಡ್ ಫಾರ್ ಜರ್ನಲಿಸಂ' ಕಾಸರಗೋಡಿನ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರಿಗೆ ಪ್ರದಾನ ಮಾಡಲಾಯಿತು. ಈ ತಿಂಗಳ 18 ರಂದು ಜಗತ್ತಿನ ಪ್ರಮುಖ ಪ್ರವಾಸಿ ತಾಣ ದುಬಾಯಿಯ ಬರ್ ದುಬಾಯಿಯಲ್ಲಿರುವ ಹಾಲಿಡೇ ಇನ್ ಹೊಟೇಲ್ ನಲ್ಲಿ ಜರಗಿದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಯು.ಎ.ಇಯ ಅಲ್ ಐದ್ರೂಸ್ ಸಮೂಹ ಸಂಸ್ಥೆಗಳ ಸ್ಥಾಪಕ ಮುಹಮ್ಮದ್ ಅಲ್ ಐದ್ರೂಸ್ ಶಾಲು, ಸ್ಮರಣಿಕೆ, ಪ್ರಶಸ್ತಿ ಫಲಕ, ಪದಕ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಮಾಧ್ಯಮ ತಜ್ಞೆ, ಗಲ್ಫ್ ಕೊರಿಯನ್ ಟೈಮ್ಸ್ ಮಾಲಕಿ ಮಿಸೂಕ್ ಜಂಗ್, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಅಹಮ್ಮದ್ ಅಲ್ ಅವಾದಿ, ಪೀಟರ್ ಗ್ರೆಸ್ ಮ್ಯಾನ್, ಯು.ಎ.ಇಯ ಹಿರಿಯ ಕಾನೂನು ಸಲಹೆಗಾರ ನ್ಯಾಯವಾದಿ ಇಬ್ರಾಹಿಂ ಖಲೀಲ್ ಸಹಿತ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಮುಖರು ಮಾತನಾಡಿದರು. ಸಂಘಟನೆಯ ಕಾರ್ಯದರ್ಶಿ ಜಫರ್ ಶಮೀನ್ ಸ್ವಾಗತಿಸಿ, ಸಂಯೋಜಕ ರಾಜೀವ್ ಮಂಚಾoದೋ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕಾಸರಗೋಡಿನ ಪತ್ರಕರ್ತರಾದ ಗಂಗಾಧರ ತೆಕ್ಕೆಮೂಲೆ ಹಾಗೂ ಪುರುಷೋತ್ತಮ ಪೆರ್ಲ ಭಾಗವಹಿಸಿದರು.
ಪ್ರಶಸ್ತಿ ಭಾಜನರಾದ ರವಿ ನಾಯ್ಕಾಪು ಅವರನ್ನು ವಿವಿಧ ಕನ್ನಡಪರ ಸಂಘಟನೆಗಳು ಅಭಿನಂದಿಸಿವೆ.



