Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಜನವರಿ 28 ರಂದು ಮಂಗಳೂರಿನಲ್ಲಿ ವಿಶ್ವಕರ್ಮ ಯುವ ಮಿಲನ್(ರಿ.)ಕರ್ನಾಟಕ ರಾಜ್ಯ ಆಶ್ರಯದಲ್ಲಿ "ವಿಶ್ವಕರ್ಮ ಯಜ್ಞ-ಯುವ ಸಮಾವೇಶ".

ಜನವರಿ 28 ರಂದು ಮಂಗಳೂರಿನಲ್ಲಿ ವಿಶ್ವಕರ್ಮ ಯುವ ಮಿಲನ್(ರಿ.)ಕರ್ನಾಟಕ ರಾಜ್ಯ ಆಶ್ರಯದಲ್ಲಿ "ವಿಶ್ವಕರ್ಮ ಯಜ್ಞ-ಯುವ ಸಮಾವೇಶ"
ಮಂಗಳೂರು: ನಾಗರೀಕತೆಯ ಆರಂಭದಿಂದಲೂ ವಿಶ್ವ ಬ್ರಾಹ್ಮಣರು ಶಿಲ್ಪ ಕಾರ್ಯ ಹಾಗೂ ವೈದಿಕ ಕರ್ಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ಥಕ ಜೀವನವನ್ನು ಕಂಡವರು. ಒಂದು ಕಾಲದಲ್ಲಿ ರಾಜಾಶ್ರಯದಲ್ಲಿ ಶಿಲ್ಪಿಗಳ ಕೈಚಳಕದಿಂದ ವಿಶ್ವವೇ ಹೆಮ್ಮೆ ಪಡುವಂತಹ ಅತ್ಯದ್ಭುತವಾದ ಕಲಾಕೃತಿಗಳು ಮೂಡಿಬಂದಿದೆ. ನಂತರದ ದಿನಗಳಲ್ಲಿ ನಮ್ಮಲ್ಲಿ ಐಕ್ಯತೆ ಹಾಗೂ ಸಂಘಟನೆಯ ಕೊರತೆಯಿಂದಾಗಿ ತುಂಬಾ ಕಷ್ಟಕರವಾದ ಜೀವನ ನಡೆಸುವ ಸಂದರ್ಭ ಒದಗಿ ಬಂದಿರುತ್ತದೆ. ಈ ಸಂದರ್ಭದಲ್ಲಿ ಮತ್ತೆ ಉನ್ನತಿಯತ್ತ ಸಾಗುವ ಪ್ರಯತ್ನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವಬ್ರಾಹ್ಮಣರು ಒಗ್ಗೂಡಿ ಸಂಘ ಸಂಸ್ಥೆಗಳ ಮುಖಾoತರ ಸಮಾಜದ ಅಬ್ಯುದಯದ ಗುರಿಯಾಗಿಟ್ಟುಕೊಂಡು ಕಾರ್ಯ ಪ್ರವ್ರತ್ತರಾಗಿರುತ್ತಾರೆ. ವಿಶ್ವಕರ್ಮ ಯುವ ಮಿಲನದ ಸಂಘಟನೆಯ ಮೂಲಕ ವತಿಯಿಂದ ವಿಶ್ವಬ್ರಾಹ್ಮಣ ಸಮಾಜ ಮತ್ತು ಸಂಘಟನೆಗಳ ಏಕತೆ ಗಾಗಿ ಶ್ರಮ ವಹಿಸುವುದು. ಸರಕಾರದ ಸವಲತ್ತುಗಳು (ಕೇಂದ್ರ ಮತ್ತು ರಾಜ್ಯ) ಸಮಾಜದ ಬಡ ಜನರಿಗೆ ಮುಟ್ಟಿಸುವ ಕಾರ್ಯ, ಅಲ್ಲದೇ ಶಿಕ್ಷಣ ಯೋಜನೆ, ವೈದ್ಯಕೀಯ ಸೌಲಭ್ಯ ಯೋಜನೆಗಳು ಉದ್ಯೋಗ ಯೋಜನೆ, ನಮ್ಮ ಸಮಾಜದ ಪಂಚ ಕುಲಕಸುಬುವಿನ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳುವುದು, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವಂತಹ ಅನೇಕ ಸಮಾಜೋಪಯೋಗಿ ಕಾರ್ಯ ಗಳನ್ನು ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚಿಂತನೆ ಸಮಾಜದ ಎಲ್ಲಾ ಹಿರಿಯ- ಅನುಭವಿ - ಉತ್ಸಾಹಿ ಯುವ ಸಮೂಹ ವನ್ನು ಒಗ್ಗೂಡಿಸಿ ವಿಶ್ವಕರ್ಮ ಯಜ್ಞ -ಯುವ ಸಮಾವೇಶ ಸಮಿತಿಯನ್ನು ರಚಿಸಿ ವಿಶ್ವಬ್ರಾಹ್ಮಣ ಸಮಾಜದ ಅಭಿವೃದ್ದಿಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ "ವಿಶ್ವಕರ್ಮ ಮಹಾ ಯಜ್ಞ" ಹಾಗೂ ಸಮಾಜದ ಸಂಘಟನೆಗಾಗಿ "ವಿಶ್ವಕರ್ಮ ಯುವ ಸಮಾವೇಶ" ಮಂಗಳೂರಿನ "ಗೋಲ್ಡ್ ಫಿಂಚ್ ಸಿಟಿ" ಮೈದಾನ ಬಂಗ್ರಕೂಳೂರು ಇಲ್ಲಿ 28-01-2024 ರಂದು ಹಮ್ಮಿಕೊಂಡಿದ್ದೇವೆ. ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪೀಠಾಧೀಶ್ವರರು ಜಗದ್ಗುರು ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ, ಪಡುಕುತ್ಯಾರು ಉಡುಪಿ ಜಿಲ್ಲೆ ಹಾಗೂ ಪರಮಪೂಜ್ಯ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರು ಪೀಠಾಧೀಶ್ವರರು ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೆಮಾದನಹಳ್ಳಿ ಅರಕಲಗೂಡು ಹಾಸನ ಜಿಲ್ಲೆ ಇವರ ದಿವ್ಯ ಅನುಗ್ರಹ ಹಾಗೂ ಉಪಸ್ಥಿತಿಯಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 6.30 ರಿಂದ "ವಿಶ್ವಕರ್ಮ ಮಹಾ ಯಜ್ಞ " ಜರಗಲಿರುವುದು. ನಂತರ "ವಿಶ್ವಕರ್ಮ ಕಲಾ ಸಂಭ್ರಮ" ವೈವಿಧ್ಯಮಯ ನೃತ್ಯ ಸ್ಪರ್ಧೆ ಹಾಗೂ "ವಿಶ್ವಕರ್ಮ ಕಲಾ ಪ್ರದರ್ಶನ" ವಸ್ತು ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ ಗಂಟೆ 11.30 ರಿಂದ ಅಮರ ಶಿಲ್ಪಿ ಜಕಾಣಾಚಾರ್ಯರ ವೇದಿಕೆಯಲ್ಲಿ " ವಿಶ್ವಕರ್ಮ ಯುವ ಸಮಾವೇಶ" ಸಮಾಜದ, ರಾಜ್ಯದ, ರಾಷ್ಟ್ರದ ಗಣ್ಯ ವ್ಯಕ್ತಿಗಳ ಉಪಸ್ಥಿಯಲ್ಲಿ ಸಂಪನ್ನಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಆಗಮಿಸಿ ಸರ್ವ ರೀತಿಯ ಸಹಕಾರದೊಂದಿಗೆ ಬ್ರಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅಭೂತ ಪೂರ್ವ ಕಾರ್ಯಕ್ರಮದ ಯಶಸ್ಸಿಗೆ ಕಾರಣಿಕರ್ತರಾಗಬೇಕಾಗಿ ವಿಶ್ವಕರ್ಮ ಯುವ ಮಿಲನ್ (ರಿ ) ಕರ್ನಾಟಕ ರಾಜ್ಯ ಮತ್ತು ವಿಶ್ವಕರ್ಮ ಯ
ಜ್ಞ ಯುವ ಸಮಾವೇಶ ಸಮಿತಿಯವರು ವಿನಂತಿಸಿದ್ದಾರೆ. ಈ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ಆಚಾರ್ಯ ಮಂಗಳಾದೇವಿ, ಅಧ್ಯಕ್ಷರು, ವಿಶ್ವಕರ್ಮ ಯಜ್ಞ - ಯುವ ಸಮಾವೇಶ ಸಮಿತಿ. ಯುವ ಮಿಲನದ ಯೋಜನೆ ಬಗ್ಗೆ ವಿಶ್ವಕರ್ಮ ಯುವ ಮಿಲನ್ (ರಿ ) ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ವಿಕ್ರಮ್ ಐ ಆಚಾರ್ಯ ಮಾಹಿತಿ ನೀಡಿದರು. ವಿಶ್ವಕರ್ಮ ಯಜ್ಞ ಯುವ ಸಮಾವೇಶ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಆಚಾರ್ಯ, ಬೆಳುವಾಯಿ, ವಿಶ್ವಕರ್ಮ ಯಜ್ಞ ಯುವ ಸಮಾವೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಂದರ ಆಚಾರ್ಯ ಮರೋಳಿ , ವಿಶ್ವಕರ್ಮ ಯುವ ಮಿಲನ್, (ರಿ) ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಆಚಾರ್ಯ ಕಲ್ಲಡ್ಕ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಗೀತಾ ನಾಗೇಂದ್ರನಾಥ್, ಕಾರ್ಯಧ್ಯಕ್ಷೆ ಶ್ರೀಮತಿ ಅರುಣಾ ಸುರೇಶ್ ಮತ್ತು ಪ್ರಚಾರ ಸಮಿತಿಯ ಸುಜೀರ್ ವಿನೋದ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.