Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಟೆಯ ಸಂಭ್ರಮದ ನಡುವೆ, ಯುವ ಕವಿ ಕಡಂಬಾರು ಮೌನೇಶ ಆಚಾರ್ಯರ "ಕರ ಸೇವೆ"ಯಲ್ಲಿ ನಿರ್ಮಾಣವಾದ ಗಾಜಿನ ಕರಡಿಗೆಯೊಳಗೆ ಸ್ಥಾಪಿತ ಚಿಕ್ಕ "ರಾಮ ಮಂದಿರ".

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಟೆಯ ಸಂಭ್ರಮದ ನಡುವೆ, ಯುವ ಕವಿ ಕಡಂಬಾರು ಮೌನೇಶ ಆಚಾರ್ಯರ "ಕರ ಸೇವೆ"ಯಲ್ಲಿ ನಿರ್ಮಾಣವಾದ ಗಾಜಿನ ಕರಡಿಗೆಯೊಳಗೆ ಸ್ಥಾಪಿತ ಚಿಕ್ಕ "ರಾಮ ಮಂದಿರ".
ಮಂಜೇಶ್ವರ: ಕೋಟ್ಯಾಂತರ ಶ್ರೀ ರಾಮ ಭಕ್ತರ ಪ್ರಧಾನ ಮಂದಿರವಾದ, ಇತಿಹಾಸ ಪ್ರಸಿದ್ಧ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ರಾಮ ದೇವರ ಪ್ರತಿಷ್ಠಾ ಕಾರ್ಯಕ್ಕೆ ದೇಶದಾದ್ಯಂತ ಜನ ಸಂಭ್ರಮದಿಂದ ಹಾಗೂ ಕಾತರದಿಂದ ಎದುರು ನೋಡುತ್ತಿರುವ ವೇಳೆ ಹಲವೆಡೆ ವಿವಿಧ ರೀತಿಗಳಲ್ಲಿ ಶ್ರೀ ರಾಮನ ಭಾವಚಿತ್ರಗಳ ಅಲಂಕಾರ, ಫ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸಿ ಸಂಭ್ರಮಿಸಿ, ಶ್ರೀ ರಾಮನ ಮೇಲಿರುವ ಭಕ್ತಿಯನ್ನು ಸಾರುತ್ತಿದ್ದಾರೆ. ಈ ನಡುವೆ ಇದೀಗ ಅಯೋಧ್ಯೆ ಟ್ರಸ್ಟ್ ವತಿಯಿಂದ ನೀಡಿದ ಶ್ರೀ ರಾಮನ ಮಂತ್ರಾಕ್ಷತೆಗೆ ಪ್ರತೀದಿನ ಪ್ರತೀ ಮನೆಯಲ್ಲಿ ಪೂಜೆ, ಪುನಸ್ಕಾರ, ಪ್ರಾರ್ಥನೆಗಳು ನಡೆಯುತ್ತಿದೆಯೋ.. ದೇವರ ರಾಮ ಮಂದಿರ ನಿರ್ಮಾಣದ ಸಾರ್ಥಕ ಸಂಭ್ರಮದಲ್ಲಿ ಸರ್ವರೂ ಒಂದಲ್ಲ ಒಂದು ವಿಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ರಾಮನ ಮೇಲಿನ ಭಕ್ತಿಯ ಪ್ರತೀಕ. ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರತಿಷ್ಠಾ ಕಾರ್ಯವನ್ನು ಸ್ಮರಣೀಯಗೊಳಿಸಲು ಇಲ್ಲೊಬ್ಬರು ತಮ್ಮ ಕಲ್ಪನೆಯ ರಾಮ ಮಂದಿರ ನಿರ್ಮಾಣಕ್ಕೆ ಮೂರ್ತ ರೂಪ ನೀಡಿ, ವಿಸ್ಮಯ ಸೃಷ್ಠಿಸಿದ್ದಾರೆ. ಮಂಜೇಶ್ವರದ ಕಡಂಬಾರ್ ಚೆಂಬಪದವು ನಿವಾಸಿ ಮೌನೇಶ್ ಆಚಾರ್ಯ ಅವರು ಮತ್ತೊಮ್ಮೆ ಉರಿದ ಊದುಬತ್ತಿಯ ಕಡ್ಡಿಗಳಿಂದ ಸುಂದರವಾದ ರಾಮ ಮಂದಿರದ ಕಲ್ಪನೆಗೆ ಮೂರ್ತ ರೂಪ ನೀಡಿದ್ದಾರೆ. ಇದ್ದನ್ನ ಈ ಬಾರಿ ಇವರು ಸಣ್ಣ ಗಾಜಿನ ಬಾಟಲಿಯ ಒಳಗೆ ಇರಿಸುವ ಮೂಲಕ, ತಮ್ಮ ಕೈ ಚಳಕ ದಿಂದ ವಿಶೇಷವಾದ ಸಾಧನೆ ತೋರಿದ್ದಾರೆ.
ಕೇವಲ 20 ಊದು ಬತ್ತಿಯ ಉರಿದ ಕಡ್ಡಿಯನ್ನ ಬಳಸಿ, ಗಮ್ ಮೂಲಕ ಅಂಟಿಸಿ, 2.50 ಇಂಚು ಅಗಲ ಹಾಗೂ 1.50 ಇಂಚು ಉದ್ದದಲ್ಲಿ ನಿರ್ಮಿಸಿ, ಬಳಿಕ ಅದನ್ನ 3 ಇಂಚು ಉದ್ದದ ಗಾಜಿನ ಕರಡಿಗೆಯ ಒಳಗೆ ನಾಜೂಕಾಗಿ ಇರಿಸಿದ್ದಾರೆ. ಅತೀ ತಾಳ್ಮೆ ಹಾಗೂ ಸೂಕ್ಷ್ಮ ರೀತಿಯಲ್ಲಿ ಈ ಕಾರ್ಯವನ್ನು 3 ಗಂಟೆಯ ಅವಧಿಯಲ್ಲಿ ಪೂರ್ತಿಕರಿಸಿದ್ದಾರೆ. ಅಂಗೈಯೊಳಗೆ ಅಡಕವಾಗುವ ಅತೀ ಚಿಕ್ಕ ರಾಮ ಮಂದಿರ ನೋಡುಗರಿಗೆ ವಿಸ್ಮಯ ಸೃಷ್ಠಿಸುತ್ತಿದೆ. ಪ್ರತಿಯೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಂದು ವಿಧದಲ್ಲಿ ಸಹಕಾರಿಗಳಾಗುವಾಗ ಈ ಸ್ಮರಣೀಯ ಕ್ಷಣಕ್ಕಾಗಿ ತನ್ನದು ಇದು ವಿಶೇಷ ಕಲ್ಪನೆಯ ಕರ ಕುಶಲ ಸೇವೆ ಎನ್ನುವ ಮೌನೇಶ್ ಆಚಾರ್ಯರದ್ದು ಇದು ಭಕ್ತಿ ಕರಾರ್ಚಿತ ಸೇವೆಯಾಗಿದೆ. ಈ ಮೊದಲು ಶ್ರೀ ರಾಮ ಮಂದಿರ ಶಿಲಾನ್ಯಾಸದ ವೇಳೆ 1000 ಊದು ಬತ್ತಿಯ ಉರಿದ ಕಡ್ಡಿ ಬಳಸಿ, ಸುಂದರವಾದ ಶ್ರೀ ರಾಮ ಮಂದಿರ ನಿರ್ಮಿಸಿ, ದೇಶ - ವಿದೇಶದಲ್ಲಿ ಸುದ್ದಿ ಪಡೆದಿದ್ದರು. ಅಲ್ಲದೆ ಇವರ ಈ ಕಾರ್ಯವನ್ನು ಮೆಚ್ಚಿ ವಿ.ಎಚ್. ಪಿ, ಸಂಘ ಪರಿವಾರಗಳಿಂದ ಬಿರುದುಗಳನ್ನ ಪಡೆದಿದ್ದರು. ಅಲ್ಲದೇ ಊದು ಬತ್ತಿಯ ಕಡ್ಡಿಗಳಿಂದ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನ ಬ್ರಹ್ಮರಥ, ಶಬರಿಮಲೆಯ ವಿನ್ಯಾಸ, ವಿವಿಧ ಚಿಕ್ಕ ಪುಟ್ಟ ಆಕೃತಿಗಳು, ಮದುವೆಯ ಆಮಂತ್ರಣ ಪತ್ರಿಕೆ ಬಳಸಿಕೊಂಡು ಕ್ರಾಫ್ಟ್ ತಯಾರಿ, ಚಿಕ್ಕ ದೋಣಿ, ಲಾಲಕಿ , ಮುಂತಾದವುಗಳನ್ನು ತಯಾರಿಸಿದ್ದಾರೆ. ಯುವ ಕವಿಯಾಗಿರುವ ಮೌನೇಶ್ ಆಚಾರ್ಯ ಕಡಂಬಾರ್ ರವರು ಮಂಜೇಶ್ವರ ರಥ ಬೀದಿಯಲ್ಲಿರುವ ಓಂಕಾರ ಜ್ಯುವೆಲ್ಲರಿಯ ಮಾಲಕರಾಗಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳ್ಳಿ ಹರಕೆ ಸಾಮಾಗ್ರಿಗಳ ಮಾರಾಟ ಹಾಗೂ ಚಿನ್ನ - ಬೆಳ್ಳಿ ಭರಣಗಳನ್ನ ತಯಾರಿಸಿ ಕೊಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.