Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪುರಾತನ ಕಾಲದಿಂದ ಪಾರಂಪರಿಕವಾಗಿ ನಡೆದು ಬರುತ್ತಿರುವ ದೇವರ ಕಂಬಳವೆಂದೇ ಪ್ರಸಿದ್ದಿ ಪಡೆದ "ಅರಿಬೈಲು ಕಂಬಳ" ಹಾಗೂ "ಪೂಕರೆ ಉತ್ಸವ" ಸಂಪನ್ನ.

ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪುರಾತನ ಕಾಲದಿಂದ ಪಾರಂಪರಿಕವಾಗಿ ನಡೆದು ಬರುತ್ತಿರುವ ದೇವರ ಕಂಬಳವೆಂದೇ ಪ್ರಸಿದ್ದಿ ಪಡೆದ "ಅರಿಬೈಲು ಕಂಬಳ" ಹಾಗೂ "ಪೂಕರೆ ಉತ್ಸವ" ಸಂಪನ್ನ.
ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪುರಾತನ ಕಾಲದಿಂದಲೂ, ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ದೇವರ ಕಂಬಳವೆಂದೇ ಪ್ರಸಿದ್ದಿ ಪಡೆದ "ಅರಿಬೈಲು ಕಂಬಳ" ಹಾಗೂ
"ಪೂಕರೆ ಉತ್ಸವ" ವು ಸೋಮವಾರದಂದು ಅಪರಾಹ್ನ ವಿಜ್ರಂಭಣೆಯಿಂದ ನಡೆಯಿತು. ಅರಿನಾಯರು ಕಂಬಳಕೆ ಚಾಲನೆ ನೀಡಿದರು.
ಹಗ್ಗವಿಭಾಗದಲ್ಲಿ 1- ಪಾವೂರು ನೆಕ್ಕಳ ವಿಜಯಾ ಮೋನಪ್ಪ ಪೂಜಾರಿಯವರ ಕೋಣಗಳು "ಪ್ರಥಮ ಬಹುಮಾನ" 2- ತಲಪಾಡಿ ಪಂಜಾಲ ಕೀರ್ತಣ್ ರವೀಂದ್ರ ಪಕಳ "ದ್ವಿತೀಯ ಬಹುಮಾನ" ನೇಗಿಲು ವಿಭಾಗ 1- ಪಾವೂರು ಕುದುಕೋರಿ ಕುಸುಮ ಕಿಂಞಣ್ಣ ಪೂಜಾರಿ " ಪ್ರಥಮ ಭಾಗವಹಿಸಿದ ಕೋಣಗಳು ಹಗ್ಗವಿಭಾಗದಲ್ಲಿ 1 - ಪಾವೂರು ನೆಕ್ಕಳ ಮಹಮದ್ ಹಾರಿಸ್ 2- ಪಜಿಂಗಾರು ಕರಂಬಾರ ಬೆಟ್ಟು ಅಶೋಕ್ ಕುಮಾರ್ 3- ಬಡಾಜೆ ಪಾಪಿಲ ಇಸುಬು ಬ್ಯಾರಿ "A" 4- ಬಡಾಜೆ ಪಾಪಿಲ ಇಸುಬು ಬ್ಯಾರಿ "B" 5- ಬನ್ನೂರು ಗುತ್ತು ಕಾವು ಹೇಮನಾಥ ಶೆಟ್ಟಿ 6- ಸೊಂಕಲ ತಿಂಬರ ಹಾರಿಸ್ 7- ಪಾವೂರು ನೆಕ್ಕಳ ವೆಂಕಪ್ಪ ಗಂಗಯ ಪೂಜಾರಿ
ನೇಗಿಲು ವಿಭಾಗದಲ್ಲಿ 1- ಪಟೋರಿ ಮಹಾಕಾಳಿ ಪಡ್ಪು ಪುರುಷೋತ್ತಮ ಪೂಜಾರಿ 2- ಮುಳ್ಳೇರಿಯ ಕಾರ್ಲೇ ಪ್ರಜೀತ್ ಪದ್ಮಿನಿ ರಾವ್ 3- ಮಂಜೇಶ್ವರ ಪಾವೂರು ನೆಕ್ಕಳ ಜವನೆರ್ 4- ಮಂಗಳೂರು ಕೊಂಡಾನ ಪುಳಿತ್ತಡಿ ಲಕ್ಷ್ಮಿ ವಿಠಲ ಶೆಟ್ಟಿ ಎಂಬವರ ಕೋಣಗಳು ವಿಜಯಿಗಳಾಯಿತು. ಇವರಿಗೆ ದೇವರ ಪ್ರಸಾದವನ್ನು ನೀಡಲಾಯಿತು. ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲ್ ನೆತ್ಯ ಕಂಬಳ ನಿರ್ವಹಣೆ ಮಾಡಿದರು. ತೀರ್ಪುಗಾರರಾಗಿ ಪಕೀರ ಮೂಲ್ಯ ಕಟ್ಟೆ ಮನೆ ಮತ್ತು ರಾಮ ಮೂಲ್ಯ ಸಹಕರಿಸಿದರು.
ಈ ವೇಳೆ ದೇವರ ಕಂಬಳ ಗದ್ದೆಯಲ್ಲಿ ಪಾರಂಪರಿಕವಾಗಿ ಪೂಕರೆ ಸ್ಥಾಪನೆ ಕೂಡಾ ನಡೆಯಿತು.
ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಗದ್ದೆಯಲ್ಲಿ ನಡೆದ ಕಂಬಳ ಮತ್ತು "ಪೂಕರೆ ಉತ್ಸವ"ದ ಸ್ಥಾಪನೆ ಮಾಡಿದ್ದನು ವೀಕ್ಷಿಸಿ, ಶ್ರೀ ನಾಗಬ್ರಹ್ಮ ದೇವರ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪುನೀತರಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.