Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ದಾರುಲ್ - ಇತ್ರ ವಸತಿ ಯೋಜನೆ ಶ್ಲಾಘನೀಯ - ಜಿಫ್ರಿ ತಂಗಳ್.

ದಾರುಲ್ - ಇತ್ರ ವಸತಿ ಯೋಜನೆ ಶ್ಲಾಘನೀಯ - ಜಿಫ್ರಿ ತಂಗಳ್.
ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಅಲ್ - ಇತ್ರಾ ಸಾದಾತ್ ಅಸೋಸಿಯೇಶನ್‌ನ ಹೆಮ್ಮೆಯ ಯೋಜನೆಯಾದ ದಾರುಲ್ - ಇತ್ರಾ ಎಂಬ ನಿರ್ಗತಿಕ ಸೈಯದ್ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಯೋಜನೆ ಶ್ಲಾಘನೀಯ ಕಾರ್ಯವಾಗಿದೆ ಎಂದು ಸಮಸ್ತ ಕೇರಳ ಜಮೀಯ್ಯತುಲ್ ಉಲೇಮಾದ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಗಳ್ ಹೇಳಿದರು. ಮಂಜೇಶ್ವರ ವಲಯದ ಮೋರತ್ತನೆಯಲ್ಲಿ ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಮೊದಲ ಯೋಜನೆಯ ಶಂಕುಸ್ಥಾಪನೆಯನ್ನು ಜಿಫ್ರಿ ತಂಗಳ್ ರವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು 'ಬಡವರ ಅಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸಹಾಯ ಮಾಡುವುದು ಉತ್ತಮ ಕಾರ್ಯವಾಗಿದೆ' ಎಂದು ತಿಳಿಸಿದರು. ಮಂಜೇಶ್ವರ ವಲಯ ಅಧ್ಯಕ್ಷ ಸೈಫುಲ್ಲಾ ತಂಗಳ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಜನಾಬ್ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು, ಜಿಲ್ಲಾಧ್ಯಕ್ಷ ಮುತ್ತು ತಂಗಳ್, ಕಾರ್ಯದರ್ಶಿ ಮುಲ್ಲಕೋಯ ತಂಗಳ್, ಹಾದಿ ತಂಗಳ್ ಮೊಗ್ರಾಲ್, ಕೆ.ಪಿ.ಎಸ್.ತಂಗಳ್, ಪೂಕೋಯ ತಂಗಳ್, ಅತ್ತಾವುಲ್ಲಾ ತಂಗಳ್ ಉದ್ಯಾವರ, ಯಹ್ಯಾ ತಂಗಳ್ ಮಾತನಾಡಿದರು. ಹಾಮಿದ್ ಅಲ್ ಅಹ್ದಲ್ ತಂಗಳ್ ಸ್ವಾಗತಿಸಿ, ಮುಸ್ತಫ ತಂಗಳ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.