ತನ್ಮಯ್ ಎನ್. ಉಪ್ಪಳ ರವರಿಗೆ "ಕರ್ನಾಟಕ ರಾಜ್ಯ ವಿಭೂಷಣ ಪ್ರಶಸ್ತಿ".
ಡಿಸೆಂಬರ್ 05, 2023
0
ತನ್ಮಯ್ ಎನ್. ಉಪ್ಪಳ ರವರಿಗೆ ಕರ್ನಾಟಕ ರಾಜ್ಯ ವಿಭೂಷಣ ಪ್ರಶಸ್ತಿ.
ಉಪ್ಪಳ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ (ರಿ.) ಬೆಂಗಳೂರು ಇವರು ಬೆಂಗಳೂರಿನ ಮಹಾರಾಣಿ ಕಾಲೇಜ್ ಬಳಿ ಇರುವ ಭಾರತ್ ಸ್ಕೌಟ್ಸ್ & ಗೈಡ್ಸ್ ನ ಸಭಾಂಗಣದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ "ಕರ್ನಾಟಕ ರಾಜ್ಯ ವಿಭೂಷಣ ಪ್ರಶಸ್ತಿ" ಯನ್ನು ಉಪ್ಪಳ ಭಗವತೀ ನಿವಾಸಿ ತನ್ಮಯ್ ರವರಿಗೆ ನೀಡಿ ಗೌರವಿಸಲಾಯಿತು. ನೃತ್ಯ, ಸಂಗೀತ, ಅಭಿನಯ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತನ್ಮಯ್ ಎನ್. ರವರು ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಉಪ್ಪಳ ಭಗವತೀಯ ಕೆಳಗಿನ ಮನೆ ನಿವಾಸಿ ಶ್ರೀ ನಿತಿನ್ - ಶ್ರೀಮತಿ ಸಚಿತಾ ದಂಪತಿಯ ಪುತ್ರನಾಗಿದ್ದಾನೆ. ಯಶಸ್ವಿ ಡ್ಯಾನ್ಸ್ ಗ್ರೂಪ್ ನ ಸದಸ್ಯನಾಗಿರುವ ತನ್ಮಯ್, ನೃತ್ಯ ನಿರ್ದೇಶಕ ಶ್ರೀಕಾಂತ್ ಕೊಂಡಾಣ ರ ಶಿಷ್ಯರಾಗಿದ್ದಾರೆ.


