"ವಿಶ್ವ ಮಣ್ಣು ದಿನಾಚರಣೆ" ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಮಧೂರಿನಲ್ಲಿ.
ಡಿಸೆಂಬರ್ 05, 2023
0
"ವಿಶ್ವ ಮಣ್ಣು ದಿನಾಚರಣೆ" ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಮಧೂರಿನಲ್ಲಿ.
ಕಾಸರಗೋಡು: ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಹಾಗೂ ಮಧೂರು ಗ್ರಾಮ ಪಂಚಾಯತ್ ಜಂಟಿಯಾಗಿ ಜಿಲ್ಲಾ ಮಟ್ಟದ ವಿಶ್ವ ಮಣ್ಣು ದಿನಾಚರಣೆಯನ್ನು ಮಧೂರಿನಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ ಉದ್ಘಾಟಿಸಿದರು. ನಮ್ಮ ಮಣ್ಣನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಅಕ್ರಮವಾಗಿ ಮಣ್ಣು ದುರ್ಬಳಕೆ ಮಾಡಿಕೊಂಡರೆ ಅದರ ಪರಿಣಾಮ ಎದುರಿಸಬೇಕಾಗುವುದು ನಾವೇ ಎಂದು ಶಾಸಕ ಎನ್.ಎ. ನೆಲ್ಲಿಕುನ್ನ್ ಹೇಳಿದರು. ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕ ಬಹುಮಾನ ವಿತರಿಸಿದರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ ಸಸಿಗಳನ್ನು ವಿತರಿಸಿದರು. ರೈತರ ತರಬೇತಿ ಕ್ಲಾಸುಗಳಿಗೆ ಎಡಕ್ಕಾಡ್ ಕೃಷಿ ಭವನದ ಹಿರಿಯ ಕೃಷಿ ಸಹಾಯಕ ಪಿ.ಡಿ.ದಾಸ್, ಜಿಲ್ಲಾ ಸಾಯಿಲ್ ಸರ್ವೇ ಅಧಿಕಾರಿಗಳಾದ ಎಸ್.ನಿರಂಜ್ ಬಾಬು ಮತ್ತು ಜೆಮಿ ಸ್ಟೀಫನ್ ಎಂಬಿವರು ನೇತೃತ್ವ ನೀಡಿದರು. ಮಧೂರು ಗ್ರಾಮ ಪಂಚಾಯತ್ ಅಟಲ್‌ಜಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ.ಸ್ಮಿಜಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ ಎಸ್.ನಾಯಕ್, ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರನ್ ಕುದುರೆಪ್ಪಾಡಿ, ಮಧೂರು ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಶ್ರೀಮತಿ, ನಸೀರಾ, ಎಂ.ಅಬ್ದುಲ್ ಜಲೀಲ್, ಎಸ್.ಮುಹಮ್ಮದ್ ಹಬೀಬ್, ಉಷಾ ಸುರೇಶ್, ಸೌಮ್ಯಾ ದಿನೇಶ್, ರಾಧಾ ಕೆ. ಪಚ್ಚಕ್ಕಾಡ್ ಮತ್ತು ಸಿ.ಎಚ್.ಉದಯಕುಮಾರ್ ಎಂಬಿವರು ಮಾತನಾಡಿದರು. ಜಿಲ್ಲಾ ಮಣ್ಣು ಸಮೀಕ್ಷೆ ಅಸಿಸ್ಟೆಂಟ್ ಡೈರೆಕ್ಟರ್ ವೈನಿ ರಾಜನ್ ಸ್ವಾಗತಿಸಿ, ಮಧೂರು ಕೃಷಿ ಭವನದ ಕೃಷಿ ಅಧಿಕಾರಿ ಬಿ.ಎಚ್.ನಫೀಸತ್ ಹಶೀನಾ ವಂದಿಸಿದರು.

