ಮಂಜೇಶ್ವರ ರೈಲು ನಿಲ್ದಾಣ ಬಳಿ ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ.
ಡಿಸೆಂಬರ್ 06, 2023
0
ಮಂಜೇಶ್ವರ ರೈಲು ನಿಲ್ದಾಣ ಬಳಿ ವಿದ್ಯುತ್ ಕಂಬಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ.
ಮಂಜೇಶ್ವರ: 52 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತ ದೇಹವು ಮಂಜೇಶ್ವರ ರೈಲು ನಿಲ್ದಾಣ ಬಳಿಗಿಡ ಗಂಟಿಗಳು ತುಂಬಿಕೊಂಡಿದ್ದ ವಿದ್ಯುತ್ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ರೈಲ್ವೆ ಹಳಿಯನ್ನು ಪರೀಕ್ಷಿಸಲು ಸಾಗುತ್ತಿದ್ದ ಗೇಟ್ ಕೀ ಮ್ಯಾನ್ ಅಭಿರಾಜ್ ಈ ದೃಶ್ಯವನ್ನು ಕಂಡು ಕೂಡಲೇ ರೈಲ್ವೇ ಪೊಲೀಸರಿಗೆ ಹಾಗೂ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಎರಡೂ ಪೊಲೀಸರು ಮೃತದೇಹವನ್ನ ವಿದ್ಯುತ್ ಕಂಬದಿಂದ ಇಳಿಸಿ, ಬಳಿಕ ಮಂಗಲ್ಪಾಡಿ ಶವಗಾರಕ್ಕೆ ತಲುಪಿಸಿದ್ದಾರೆ. ನಿಕ್ಕರ್ ಧರಿಸಿ, ವಿದ್ಯುತ್ ಕಂಬಕ್ಕೆ ಲುಂಗಿ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.


