Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ತಲಪಾಡಿ "ಶ್ರೀ ಗುರುವಾಯೂರಪ್ಪನ್" ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಟಿಕೆಟ್ ಗೆ ಇಂದು ಪ್ರಥಮ ಬಹುಮಾನ 1 ಕೋಟಿ ರೂಪಾಯಿ.

ತಲಪಾಡಿ ಶ್ರೀ ಗುರುವಾಯೂರಪ್ಪನ್ ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಟಿಕೆಟ್ ಗೆ ಇಂದು 1 ಕೋಟಿ ರೂಪಾಯಿ.
ಮಂಜೇಶ್ವರ: ಇಂದು ನಡೆದ ಕೇರಳ ರಾಜ್ಯ ಲಾಟರಿ ಫಿಫ್ಟಿ ಫಿಫ್ಟಿ ಪ್ರಥಮ ಬಹುಮಾನ 1 ಕೋಟಿ ರೂಪಾಯಿ ತಲಪಾಡಿಯಲ್ಲಿ ಏಜೆಂಟ್ ಆಗಿರುವ "ಶ್ರೀ ಗುರುವಾಯೂರಪ್ಪನ್" ನ ಮಾಲಕರಾದ ಶ್ರೀಮತಿ ಸರಿತಾ - ಮನೋಜ್ ದಂಪತಿಗಳು ಮಾರಾಟಗೈದ ಟಿಕೆಟ್ ಗೆ ಅದೃಷ್ಟ ಒಲಿದಿದೆ. ಫಿಫ್ಟಿ ಫಿಫ್ಟಿ - 0075 ನಂಬರಿನ ಲಾಟರಿಯಲ್ಲಿ F.H 500192 ನಂಬರ್ ಗೆ ಒಂದು ಕೋಟಿ ರೂಪಾಯಿ ಮೊತ್ತ ಲಭಿಸಿದೆ. ಆದರೆ ಅದೃಷ್ಟವಂತ ವ್ಯಕ್ತಿ ಯಾರು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಪ್ರಥಮ ಬಹುಮಾನದ ಟಿಕೆಟ್ ಸಂಖ್ಯೆ 500192 ಹೊರತು ಪಡಿಸಿದರೆ ಉಳಿದ 93,94,95 ನಂಬರ್ ನ ಟಿಕೆಟ್ ಗಳು ದಂಪತಿಗಳ ಕೈಯಲ್ಲಿ ಮಾರಾಟವಾಗದೆ ಆಗೆ ಉಳಿದಿದೆ.
ದಂಪತಿಗಳು ಕಳೆದ ಒಂದು ವರ್ಷಗಳಿಂದ ತಲಪಾಡಿಯಲ್ಲಿ ಲಾಟರಿ ಏಜೆಂಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸಂಗಡಿಯ ನ್ಯೂ ಲಕ್ಕಿ ಸೆಂಟರ್ ಲಾಟರಿ ಏಜೆನ್ಸಿಯಿಂದ ಲಾಟರಿ ಟಿಕೆಟ್ ಗಳನ್ನು ಪಡೆದು ತಲಪಾಡಿಯಲ್ಲಿ ಮಾರಾಟ ಮಾಡುತಿದ್ದರು. ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೋಲಿಗೆ ಉಚ್ಚಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶ್ರೀಮತಿ ಸರಿತಾ ಮನೋಜ್ ದಂಪತಿಗಳು ಲಾಟರಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಇವರ ಪುತ್ರ ರೋಶನ್ ಮಂಗಳೂರು ಕುಲಶೇಖರದಲ್ಲಿರುವ ಸೀಕ್ರೆಟ್ ಹಾರ್ಟ್ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ವ್ಯಾಸಂಗವನ್ನು ಮಾಡುತ್ತಿದ್ದಾನೆ. ಇಂದು ಬಹುಮಾನ ಒಲಿದ ಟಿಕೆಟ್ ನಲ್ಲಿ ಸಿಗುವ ಕಮಿಷನ್ ನಲ್ಲಿ ಮನೆ ಕಟ್ಟಲು ದಂಪತಿಗಳು ಸಣ್ಣ ಜಾಗೆ ತೆಗೆಯುವ ಯೋಚನೆಯಲ್ಲಿದ್ದಾರೆ. ಹೊಸಂಗಡಿ ಅಜ್ಜ ಲಾಟರಿಗೆ 1 ಕೋಟಿ ರೂಪಾಯಿ ಮಿಸ್. ಮಂಜೇಶ್ವರ: ಇಂದು ನಡೆದ ಕೇರಳ ರಾಜ್ಯ ಲಾಟರಿ ಪ್ರಥಮ ಬಹುಮಾನ 1 ಕೋಟಿ ರೂಪಾಯಿ ಒಲಿದಿದ್ದು, ಆದರೆ ಅದೇ ಟಿಕೆಟ್ ನ ಸೀರಿಯಲ್ ನಂಬರ್ ಮಾತ್ರ ಬದಲಾಗಿ ಅದೇ ನಂಬರ್ ನ ಟಿಕೆಟ್ ಗಳನ್ನು "ಹೊಸಂಗಡಿಯ ಅಜ್ಜ ಲಾಟರಿ" ಏಜೆನ್ಸಿ ಮಾರಾಟ ಮಾಡಿದ್ದಾರೆ. ಹೊಸಂಗಡಿಯ ಲಕ್ಕಿ ಲಾಟರಿ ಏಜೆನ್ಸಿಯಿಂದ ತಲಪಾಡಿಯ ಸರಿತಾ ರವರು ಟಿಕೆಟ್ ಪಡಕೊಂಡ ಬಳಿಕ ಅಜ್ಜ ಲಾಟರಿಯ ಸುನಿಲ್ ಹಾಗೂ ಸಾಯಿ ಕಿರಣ್ ರವರು ಉಳಿದ ಟಿಕೆಟ್ ಗಳನ್ನ ಪಡೆದಿದ್ದರು ಆದರೆ ಸೀರಿಯಲ್ ಮಾತ್ರ ಬದಲಾಗಿದೆ. ನಿಮಿಷ ಮಾತ್ರದಲ್ಲಿ ಅದೃಷ್ಟದ ಟಿಕೆಟ್ ಇವರ ಕೈಯಿಂದ ಜಾರಿದ್ದು, ಮುಂದಿನ ಅದೃಷ್ಟದ ನಿರೀಕ್ಷೆಯಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.