ಕಾಸರಗೋಡು: ಕಾಸರಗೋಡಿನ ಮಾಜಿ ಸಂಸದ ಎಂ ರಾಮಣ್ಣ ರೈ ಅವರ ಸಹೋದರಿ ,ಕುಂಬ್ಡಾಜೆ ಪಂಚಾಯಿತಿನ ಮಾಜಿ ಸದಸ್ಯೆ, ಪುತ್ರಕಳ ದಿ.ರಾಘವ ರೈ ಅವರ ಪತ್ನಿ ಇಂದಿರಾ ರೈ ಮಾಯಿಪ್ಪಾಡಿಗುತ್ತು ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು. ಪುತ್ರರಾದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಎಂ .ಅಶೋಕ ,ರೈ, ಪುತ್ರಿ ಜಯಶ್ರೀ ಆಳ್ವ, ಅಳಿಯ ಸುರೇಂದ್ರ ಆಳ್ವ ಬಾಲುಶ್ಶೇರಿ, ಸೊಸೆಯಂದಿರಾದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಶಿಕ್ಷಕಿ ಶ್ರೀಲತಾ. ಕೆ, ಚಿತ್ರಕಲಾ ಎ.ರೈ, ಪ್ರವೀಣ ಕುಮಾರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಧ್ಯಾಹ್ನ 3 ಗಂಟೆಯ ತನಕ ಕಾಸರಗೋಡಿನ ಕೋಟೆಕಣಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಅಂತಿಮ ಸಂಸ್ಕಾರವು ಸಂಜೆ ವಿಶಾಲಾಕ್ಷ ಪುತ್ರಕಳ ಅವರ ಕುದ್ರೆಪ್ಪಾಡಿಯಲ್ಲಿರುವ ನಿವಾಸದಲ್ಲಿ ನಡೆಯಲಿದೆ.
8:10:45
