ಮಂಗಲ್ಪಾಡಿ: ಬಂದ್ಯೋಡು ಬಳಿಯ ಅಡ್ಕ ವೀರನಗರ ನಿವಾಸಿ, ಧರ್ಮತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಅಖಿಲೇಶ್ ಸದಾನಂದ ವೀರನಗರರವರು ಈ ಬಾರಿ ಅತ್ಯಧಿಕ ಅಂಕಗಳಿಂದ ಉತ್ತೀರ್ಣರಾಗಿದ್ದು, ಇವರನ್ನ ಹಿಂದೂ ಐಕ್ಯವೇದಿ ವೀರನಗರ ಸ್ಥಾನೀಯ ಸಮಿತಿ ವತಿಯಿಂದ ಮನೆಗೆ ತೆರಳಿ ಶಾಲು ಹೊದಿಸಿ, ಫಲಪುಷ್ಪವನ್ನಿತ್ತು ಸನ್ಮಾನಿಸಲಾಯಿತು. ಈ ವೇಳೆ ಹಿಂದೂ ಐಕ್ಯವೇದಿಯ ಮಂಜೇಶ್ವರ ಮಂಡಲ ಸಂಚಾಲಕ ಗಿರಿ ವೀರನಗರ, ಸ್ಥಾನೀಯ ಸಮಿತಿ ರಕ್ಷಣಾಧಿಕಾರಿ ಮಣಿ ವೀರನಗರ, ಪ್ರೀತಂ ವೀರನಗರ, ಶೈಲೇಶ್ ವೀರನಗರ, ಯೋಗೀಶ್ ವೀರನಗರ, ಕಣ್ಣ ವೀರನಗರ, ಸ್ಥಾನೀಯ ಅಧ್ಯಕ್ಷರಾದ ಪ್ರೀತಂ ವೀರನಗರ ಉಪಸ್ಥಿತರಿದ್ದರು. ಇವರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಲಾಯಿತು.
8:10:45
