Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ತಲಪಾಡಿ ಟೋಲ್ ಮಂಜೇಶ್ವರಕ್ಕೆ ಫ್ರೀ ಪಾಸ್ ನೀಡಲು ಬಿಜೆಪಿ ಮನವಿ

ಮಂಜೇಶ್ವರ: ತಲಪಾಡಿ ಟೋಲ್ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಫ್ರೀ ಪಾಸಿಂಗ್ ನೀಡಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟರಲ್ಲಿ ಕರ್ನಾಟಕ ಹೆದ್ದಾರಿ ಮುಖ್ಯಸ್ತರಿಗೆ ಮನವಿ ಮಾಡಿದೆ. ತಲಪಾಡಿ ಟೋಲ್ ತಲಪಾಡಿ ಗ್ರಾಮಕ್ಕೆ ಫ್ರೀ ಆಗಿರುವಂತೆ ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಫ್ರೀ ಪಾಸಿಂಗ್ ನೀಡಬೇಕೆಂದು ಅಗ್ರಹಿಸಿದೆ. ಮಂಜೇಶ್ವರ ಶಾಸಕರಾಗಲಿ, ಸಂಸದರಾಗಲಿ ಈ ವಿಚಾರದಲ್ಲಿ ಮೌನ ವಾಗಿದ್ದರೆ. ಆದುದರಿಂದ ಜನತೆಯ ಬೇಡಿಕೆಯನ್ನು ಬಿಜೆಪಿ ಎತ್ತಿ ಹಿಡಿದಿದ್ದು ತಲಪಾಡಿ ಟೋಲ್ ಕರ್ನಾಟಕ ರಿಜಿನಲ್ ವಿಭಾಗದಲ್ಲಿ ಬರುವ ಕಾರಣ ಮಂಗಳೂರು ಸಂಸದರ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ರೈ, ಯತೀಶ್ ಭಂಡಾರಿ, ಕಾರ್ತಿಕ್ ಶೆಟ್ಟಿ, ನ್ಯಾ ನವೀನ್ ರಾಜ್, ಆಶಾಲತಾ ಬಿ ಎಂ, ಉಪಸ್ಥಿತರಿದ್ದರು. ಮನವಿಯ ಬಗ್ಗೆ ಹೆದ್ದಾರಿ ಅಧಿಕಾರಿಗಳಲ್ಲಿ ಮಾತನಾಡಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.