Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ನಾರಾಯಣಮಂಗಲದಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಯಜ್ಞ - ಆರ್ಟ್ ಆಫ್ ಲಿವಿಂಗ್ ಸಂಯೋಜನೆ

ನಾರಾಯಣಮಂಗಲದಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಯಜ್ಞ - ಆರ್ಟ್ ಆಫ್ ಲಿವಿಂಗ್ ಸಂಯೋಜನೆ.

ಕುಂಬಳೆ: ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಸಮಿತಿ ಆಶ್ರಯದಲ್ಲಿ ಆಯೋಜನೆಯಲ್ಲಿ ಶ್ರೀಮದ್ ಭಗವದ್ಗೀತಾ ಜ್ಞಾನ ಯಜ್ಞ ಮಾರ್ಚ್ 12 ರಿಂದ 15ರ ವರೆಗೆ ಕುಂಬಳೆ ನಾರಾಯಣಮಂಗಲ ಶ್ರೀ ಚಿರುಂಬಾ ಭವಾವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಭಗವದ್ಗೀತೆಯ ಮೂಲಕ ಜೀವನದಲ್ಲಿ ಯಶಸ್ಸು' ಎಂಬ ವಿಷಯದ ಕುರಿತು ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ತರಬೇತುದಾರ ಸಾಜಿ ನಿಸಾನ್ ತರಬೇತಿ ನೀಡಲಿದ್ದಾರೆ. ವಿನೀತ್ ವಯನಾಡ್ ಮತ್ತು ಸಬಿತಾ ಕೊಡಂಗಲ್ಲೂರ್ ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 5 ರಿಂದ ರಾತ್ರಿ 8 ರವರೆಗೆ ತರಬೇತಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಹೃದಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ರಘುನಾಥ್ ಪೈ, ಡಾ. ಶಾಂಭವಿ ಮತ್ತು ಸುನಿಲ್ ಕುಮಾರ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.