Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಧೂರು ಶ್ರೀ ಕಾಳಿಕಾಂಬಾ ಮಠದ ನೂತನ ಆಡಳಿತ ಸಮಿತಿ ಪದಾಧಿಕಾರಿಗಳ ಪದಗ್ರಹಣ. ಎಂ. ಪುರುಷೋತ್ತಮ ಆಚಾರ್ಯ ಕಂಬಾರು ಅಧ್ಯಕ್ಷ.

ಮಧೂರು ಶ್ರೀ ಕಾಳಿಕಾಂಬಾ ಮಠದ ನೂತನ ಆಡಳಿತ ಸಮಿತಿ ಪದಾಧಿಕಾರಿಗಳ ಪದಗ್ರಹಣ. ಎಂ. ಪುರುಷೋತ್ತಮ ಆಚಾರ್ಯ ಕಂಬಾರು ಅಧ್ಯಕ್ಷ.

ಮಧೂರು: ಇಲ್ಲಿನ ಮಧೂರು ಶ್ರೀ ಕಾಳಿಕಾಂಬಾ ಮಠದ ಆಡಳಿತ ಸಮಿತಿಯ 2026–2029ರ ಅವಧಿಯ ನೂತನ ಅಧ್ಯಕ್ಷರಾಗಿ ಎಂ. ಪುರುಷೋತ್ತಮ ಆಚಾರ್ಯ ಕಂಬಾರು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಠದ ಆವರಣದಲ್ಲಿ ಇಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.
ಪ್ರಮುಖ ಪದಾಧಿಕಾರಿಗಳ ಪೈಕಿ ಅಧ್ಯಕ್ಷರಾಗಿ ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಉಪಾಧ್ಯಕ್ಷರಾಗಿ ಕೆ. ಜಗದೀಶ ಆಚಾರ್ಯ ಕಂಬಾರು, ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಜನಾರ್ದನ ಆಚಾರ್ಯ ಬಜಕೂಡ್ಲು ಹಾಗೂ ಸತೀಶ ಆಚಾರ್ಯ ಸೋಂಕಾಲು. ಪ್ರಧಾನ ಕಾರ್ಯದರ್ಶಿಯಾಗಿ: ಎ. ನಿರಂಜನ ಆಚಾರ್ಯ ಮನ್ನಿಪ್ಪಾಡಿ, ಕಾರ್ಯದರ್ಶಿಗಳಾಗಿ ದೇವದಾಸ ಆಚಾರ್ಯ ದೇಶಮಂಗಲ, ತುಕಾರಾಮ ಆಚಾರ್ಯ ಕೆರೆಮನೆ, ಶೀತಲ್ ಆಚಾರ್ಯ ಕಾಸರಗೋಡು ಮತ್ತು ಲವ್ ಆಚಾರ್ಯ ಕೊಲ್ಲಂಗಾನ, ಕೋಶಾಧಿಕಾರಿಯಾಗಿ: ಸುಂದರ ಆಚಾರ್ಯ ಬದಿಯಡ್ಕ ಆಂತರಿಕ ಲೆಕ್ಕ ಪರಿಶೋಧಕರಾಗಿ: ಸಚಿನ್ ಆಚಾರ್ಯ ಬೋವಿಕ್ಕಾನ, ಭರತ್ ಆರ್. ಆಚಾರ್ಯ ಕಾಸರಗೋಡು, ಅರುಣ್ ರಾಜ್ ಆಚಾರ್ಯ ಮಧೂರು ಮತ್ತು ಬಾಲರಾಜ್ ಆಚಾರ್ಯ ಮಧೂರು. ಸಲಹಾ ಸಮಿತಿಯ ಅಧ್ಯಕ್ಷರಾಗಿ ವೈ. ಧರ್ಮೇಂದ್ರ ಆಚಾರ್ಯ ಮಧೂರು ಹಾಗೂ ಸಂಚಾಲಕರಾಗಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಆಯ್ಕೆಯಾಗಿದ್ದಾರೆ. ಸಮಿತಿಯ ಸದಸ್ಯರಾಗಿ ಎನ್. ಪರಮೇಶ್ವರ ಆಚಾರ್ಯ ನೀರ್ಚಾಲು, ಜ್ಯೋತಿಷಿ ಜನಾರ್ದನ ಆಚಾರ್ಯ ಮವ್ವಾರು, ಪಿ. ಜನಾರ್ದನ ಆಚಾರ್ಯ ಕೊಲ್ಯ, ತಾರನಾಥ ಆಚಾರ್ಯ ಮಧೂರು, ಭವಾನಿ ಶಂಕರ ಆಚಾರ್ಯ ಮೂಲ್ಕಿ ಮತ್ತು ಚಂದ್ರಶೇಖರ ಆಚಾರ್ಯ ಬೋವಿಕ್ಕಾನ ನೇಮಕಗೊಂಡಿದ್ದಾರೆ.
ಮುರಳೀಧರ ಆಚಾರ್ಯ ಗುಡ್ಡೆಮನೆ (ಪುತ್ತೂರು), ಪಿ. ಮಧುಸೂದನ ಆಚಾರ್ಯ ಕಾಸರಗೋಡು, ನಾಗೇಶ ಆಚಾರ್ಯ ಪುತ್ತಿಗೆ, ನಾರಾಯಣ ಆಚಾರ್ಯ ಕಂಬಾರು, ಬಾಲಕೃಷ್ಣ ಆಚಾರ್ಯ ಪುತ್ತಿಗೆ, ವೆಂಕಟರಮಣ ಆಚಾರ್ಯ ಮೀಪುಗುರಿ, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ವರಪ್ರಸಾದ್ ಆಚಾರ್ಯ ಕಂಬಾರು, ಮೌನೇಶ್ ಆಚಾರ್ಯ ಜೆ.ಪಿ.ನಗರ, ಕಾರ್ತಿಕ್ ಆಚಾರ್ಯ ನೀರ್ಚಾಲು, ಹರ್ಷ ಆಚಾರ್ಯ ಮಧೂರು, ಲೋಹಿತ್ ಆಚಾರ್ಯ ಮಧೂರು ಹಾಗೂ ಲೋಕೇಶ್ ಎಂ.ಬಿ. ಆಚಾರ್ಯ ಕಂಬಾರು ಅವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಮಠದ ವ್ಯಾಪ್ತಿಗೆ ಒಳಪಡುವ 23 ಪ್ರಾಂತ್ಯಗಳ ಪ್ರಮುಖರನ್ನಾಗಿ
ತಿಲಕೇಶ ಆಚಾರ್ಯ (ಮಧೂರು), ಯೋಗೀಶ್ ಆಚಾರ್ಯ (ಕೂಡ್ಲು), ಸುಧೀಶ್ ಆಚಾರ್ಯ (ಕಾಸರಗೋಡು), ರಘುರಾಮ ಆಚಾರ್ಯ (ಕಂಬಾರು), ಜ್ಞಾನೇಶ ಆಚಾರ್ಯ (ನೀರ್ಚಾಲು), ಸುರೇಶ್ ಆಚಾರ್ಯ ನೆಕ್ರಾಜೆ (ಬದಿಯಡ್ಕ), ಶಿವಪ್ರಸಾದ್ ಆಚಾರ್ಯ (ಮವ್ವಾರು), ಬಾಲಸುಬ್ರಹ್ಮಣ್ಯ ಆಚಾರ್ಯ (ಪುತ್ತಿಗೆ), ಯಾದವ ಆಚಾರ್ಯ (ಮಾಯಿಪ್ಪಾಡಿ), ನಾಗೇಶ ಆಚಾರ್ಯ (ಸೀತಾಂಗೋಳಿ), ಸೋಮನಾಥ ಆಚಾರ್ಯ (ಕುಂಬಳೆ), ನವೀನ್ ಚಂದ್ರ ಆಚಾರ್ಯ (ಮಂಗಲ್ಪಾಡಿ), ಗೋಪಾಲಕೃಷ್ಣ ಆಚಾರ್ಯ ದುರ್ಗಿಪಳ್ಳ (ಮಂಜೇಶ್ವರ), ಸೋಮಶೇಖರ ಆಚಾರ್ಯ (ಕೋಟೆಕಾರು), ಪ್ರಶಾಂತ್ ಆಚಾರ್ಯ (ಮಂಗಳೂರು), ಜಗದೀಶ ಆಚಾರ್ಯ ಕೋಟೂರು (ಬೋವಿಕ್ಕಾನ), ಉದಯ ಆಚಾರ್ಯ (ಮುಳ್ಳೇರಿಯ), ಮಂಜುನಾಥ ಆಚಾರ್ಯ (ಪೆರುವಾಯಿ), ಜನಾರ್ಧನ ಆಚಾರ್ಯ (ಪಾಣಾಜೆ), ಯೋಗೀಶ್ ಆಚಾರ್ಯ ಮೊಟ್ಟೆತಡ್ಕ (ಪುತ್ತೂರು), ಕಿರಣ್ ಆಚಾರ್ಯ ಮೂರೂರು (ಸುಳ್ಯ), ಸೋಮನಾಥ ಆಚಾರ್ಯ (ಪೆರ್ಲ) ಹಾಗೂ ದಿನೇಶ್ ಆಚಾರ್ಯ (ಅಡೂರು) ಇವರನ್ನು ನೇಮಿಸಲಾಯಿತು.
ಕೊಲ್ಯ ಜನಾರ್ದನ ಆಚಾರ್ಯ ರವರು ಚುನಾವಣಾ ಅಧಿಕಾರಿಯಾಗಿ ಇಡೀ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕೆ. ಪ್ರಭಾಕರ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಗೇಂದ್ರ ಆಚಾರ್ಯ ಪರಕ್ಕಿಲ ಸ್ವಾಗತಿಸಿ, ಕೆ. ಜಗದೀಶ ಆಚಾರ್ಯ ಕಂಬಾರು ಕಾರ್ಯಕ್ರಮ ನಿರೂಪಿಸಿದರು. ವರಪ್ರಸಾದ್ ಆಚಾರ್ಯ ಧನ್ಯವಾದ ಅರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.