ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜನ್ಮ ದಿನದ ಅಂಗವಾಗಿ ಬಿಜೆಪಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ ಸುರೇಂದ್ರನ್ ಅವರು ಗೋವಿಂದ ಪೈ ಅವರ ಗಿಳಿವಿಂಡು ನಿವಾಸಕ್ಕೆ ತೆರಳಿ ಪುಷ್ಪಾರ್ಚನೆ ಸಲ್ಲಿಸಿದರು.
ಕೆ ಸುರೇಂದ್ರನ್ ಮಾತನಾಡಿ, ಗೋವಿಂದ ಪೈ ಅವರ ಜನ್ಮನಾಡಾದ ಮಂಜೇಶ್ವರದಲ್ಲಿ ಕೇರಳ ಎಡರಂಗ ಸರಕಾರ ಮಲಯಾಳಂ ಭಾಷಾ ಮಸೂದೆ ಜಾರಿ ಮಾಡಿ ಗಡಿನಾಡ ಕನ್ನಡಿಗರ ಸಂವಿಧಾನ ಬದ್ದ ಹಕ್ಕುಗಳನ್ನು ಕಸಿದಿದೆ. ಮಂಜೇಶ್ವರ ಶಾಸಕರು ಮಲಯಾಳಂ ಭಾಷಾ ಮಸೂದೆ ಜಾರಿ ಆಗುವ ಅಧಿವೇಶನದಲ್ಲಿ ಭಾಗವಹಿಸದೆ ಗೈರು ಹಾಜರಾಗಿರಾಗಿ ಕನ್ನಡ ವಿರೋಧಿ ನೀತಿ ತೋರಿಸುತ್ತದೆ ಎಂದು ಆರೋಪಿದರು.
ಗಡಿನಾಡ ಕನ್ನಡಿಗರ ಹಕ್ಕುಗಳ ಸಂರಕ್ಷಣೆ ನನ್ನ ಪ್ರಮುಖ ಗುರಿಯಾಗಿದೆ. ಭಾಷಾ ಅಲ್ಪಸಂಖ್ಯಾತರ ನ್ಯಾಯಯುತ ಬೇಡಿಕೆಗಳಿಗೆ ಬಿಜೆಪಿ ಸ್ಪಂದಿಸುವುದರ ಜೊತೆಗೆ, ಅವರ ಹಕ್ಕುಗಳಿಗಾಗಿ ಹೋರಾಟಕ್ಕೂ ನೇತೃತ್ವ ನೀಡಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಸೇರಿದಂತೆ ಯಾದವ ಬಡಾಜೆ ಹರಿಶ್ಚಂದ್ರ ಎಂ, ರಾಜೇಶ್ ತೂಮಿನಾಡ್, ಎಸ್.ಎನ್. ಭಟ್ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.
